-
Ee Muddu krishnana
Composer : Shri Vadirajaru ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ||ಪ|| ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ ||ಅ|| ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿ |ವಳಿಪಂಕ್ತಿ ಜಠರ ವಕ್ಷ ಕಂಬು ಕಂಧರದ |ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ |ಸುಳಿಗುರುಳ ಮಸ್ತಕದ ನಳಿನನಾಭನ ಸೊಬಗ ||೧|| ಕಿರುಗೆಜ್ಜೆ ಕಡೆ ಪೆಂಡೆ ಗಂಟೆ ಕಟಿಸೂತ್ರ |ವರ ಹಾರ ಪದಕ ಶ್ರೀವತ್ಸ ಕೌಸ್ತುಭ ರತ್ನ |ಉರು ಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ |ಸಿರಿನಾಮ…
-
Chiranjeevi Agelo
Composer : Shri Vijayadasaru ಚಿರಂಜೀವಿಯಾಗೆಲೊ ಚಿನ್ನ ನೀನು ||ಪ|| ಜರಿಯಬೇಡ ಹರಿಯ ಮರೆಯಬೇಡೆಂದೆಂದುತಿರಿಯಬೇಡ ಖಳರ ಮನೆಗೆ ಪೋಗಿಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನುಬೆರೆಯಬೇಡನ್ಯ ಸತಿಯರ ಸ್ವಪ್ನದಲೂ ||೧|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡಶ್ರೀಕಾಂತನ ಚರಿತೆಯನು ಕೇಳದಿರಬೇಡಪಾಕವನು ಮಾಡಿ ಏಕಾಂಗಿಯಾಗಿ ಉಣಬೇಡಭೂಕಾಂತರನುಸರಿಸಿ ಬೆಸಗೊಳ್ಳಬೇಡ ||೨|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡನಾಳೆಗೆ ಹ್ಯಾಗೆಂಬ ಚಿಂತೆ ಬೇಡಖೂಳ ಜನರೊಡನೆ ಮಿತ್ರತ್ವಾಡಲಿ ಬೇಡಬಾಳುವರ ಸಂಗದಲಿ ಬಾಳೆಲವೊ ಬಾಲ ||೩|| ಪಂಡಿತರು ಪಾಮರರು ಆರಿಗಾದರೂ ನಿನ್ನಕಂಡವರಿಗೆಲ್ಲ ಕೌತುಕ ತೋರಲಿಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳುಉಂಡುಟ್ಟು ದ್ವಿಜರ…
-
Charanava toro
Composer : Shri Vijayadasaru ಚರಣವ ತೋರೋ ಚೆಲುವರ ಅರಸನೆ, ಚರಣವ ತೋರೋ ||ಪ||ಸ್ಮರಣೆ ಮಾತ್ರದಿ ಮುಕುತಿ ಕೊಡುವ, ಚರಣವ ತೋರೋ ||ಅ.ಪ|| ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೋಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೋ |೧| ಬಿಡದೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೋಬಡವರಾಧಾರ ದಿವ್ಯ ವಿಭೂಷಣ ಚರಣವ ತೋರೋ |೨| ಕಡುಮುದ್ದು ವಿಜಯವಿಠಲ ನಿನ್ನ ಚರಣವ ತೋರೋಉಡುಪಿಯ ಕ್ಷೇತ್ರದಿ ನಿಂದು ಪೂಜೆಯಗೊಂಬ ಚರಣವ ತೋರೋ |೩| caraNava tOrO celuvara arasane, caraNava tOrO ||pa|| smaraNe mAtradi mukuti koDuva,…
