Author: Daasa

  • Chendava nodire

    Composer : Shri Purandara dasaru ಚೆಂದವ ನೋಡಿರೆ ಗೋಕುಲಾ-|ನಂದನ ಮೂರುತಿಯ [ಪ] ಅಂದುಗೆ ಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಮಿಕೆಂದು ಕುಣಿಯುವ ಕೃಷ್ಣನ [ಅ.ಪ] ಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲು ಅರಳೆಲೆಯ |ಫಳ ಫಳಿಸುತ ಮೆರೆವ ಕೃಷ್ಣನ [೧] ಉಡೆಯ ಗಂಟೆ ಘ್ಹಳಿಲೆನುತ |ನುಡಿದು ಮೆಲ್ಲನೆ ಪಿಡಿದುಕೊಂಡು ||ನಡೆಗೆ ಮಾಲುತ ಸಡಗರದಲಿ |ಬೆಡಗು ಮಾಡಿ ಆಡುವ ರಂಗನ [೨] ಬಲು ಅಸ್ಥೈರ್ಯದಿಂದಲಿ |ನಲಿವ ಪುರಂದರವಿಠ್ಠಲರಾಯ ||ಹಲವು ಸುಖವ ನಮಗಿತ್ತು |ಜಲಜಲೋಚನ ಬಾಲಕೃಷ್ಣನ [೩]…

  • Barayya Govinda

    Composer : Shri kakhandaki krishnadasaru ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ [ಪ] ಕನಕಗರ್ಭನ ತಂದೆ |ಕನಕಮೃಗವ ಕೊಂದೆ |ಕನಕಾಂಬರಧರ | ಕನಕನಯನ ಹರ |ಕನಕವತಿ ರಮನ | ಕನಕಾಭರಣ [೧] ಹರಿಯಾನಂದನ ಕೊಲಿಸಿ |ಹಿರಯಾನಂದನನುಳಿಸಿ |ಹರಿಯಾ ಸುತನುತ | ಹರಿಯಾ ರಿಪುಸುತ |ಹರಿಯೇ ಬಾಯೆನ್ನ ಮರಯಾದೆ [೨] ಗೋಕುಲವರಾಧಾರಾ |ಗೋಕುಲ ವಿಹಾರಾ | ಗೋಕರ್ಣ ಶಯನಾ |ಗೋಕೋಟಿ ತೇಜಾ | ಮಹಿಪತಿ ಸುತಪ್ರಭು ಗೋಪಾಲಾ [೩] bArayyA gOviMdA | bArO naMdana…

  • Aratiya belage murarige

    Composer : Shrikara vittala ಆರುತಿಯ ಬೇಳಗೆ ಮುರಾರಿಗೇ || ಪ ||ಬೀರುತ ಹರಿಗುಣ ಸಾರುತ ಮುದ |ವಾರಿಜ ವದನೆಯ ನೀರಜ ನಾಭಗೆ || ಅ. ಪ. || ಭಾವಜಯ್ಯಗೆ ಗೋವಳರಾಯಗೆ |ಕಾವಲಿನೊಳು ಪುಟ್ಟಿ ಮಾವನ ತರಿದಗೆ |ಕೋವಿದರೊಡೆಯಗೆ ಕಾವಾ ಕರುಣಿಗೆ |ಪಾವಿನ ಮೇಲ್ ತಾ ಪವಡಿಸಿದವಗೆ || ೧ || ಇಂದಿವರಾಕ್ಷಗೆ ಸಿಂಧು ಶಯನಗೆ |ಇಂದುಧರಾಮರ ವಂದಿತ ಹರಿಗೇ |ಮಂದಾಕಿನಿ ಪಿತ ಸಿಂಧೂಜವರಗೆ |ಬಂಧೂರ ಮಹಿಮಗೆ ನಂದನ ಕಂದಗೆ || ೨ || ವಾಸವಾನುಜಗೆ ಭಾಸುರ…

error: Content is protected !!