-
Vidurana bhagyavidu
Composer : Shri Purandara dasaru ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆಕೊ [ಪ] ಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯನು ತಾನು ಕಂಡನು ಹರುಷದಲಿ (೧) ದಾರಿಯಲಿ ಬಹ ಮುರವೈರಿಯ ಕಾಣುತ |ಹಾರುತ ಚೀರುತ ಕುಣಿಯುತಲಿ ||ವಾರಿಧಾರೆಯನು ನೇತ್ರದಿ ಸುರಿಸುತ |ಬಾರಿಬಾರಿಗು ಹಿಗ್ಗುವ ಸುಖದಿ (೨) ಆಟಕೆ ಲೋಕಗಳೆಲ್ಲಾ ಸೃಜಿಸುವ |ನಾಟಕಧರ ತನ್ನ ಲೀಲೆಯಲಿ ||ನೀಟಾದವರ ಮನೆಗಳ ಜರೆದು |ಕುಟೀರದಲಿ ಬಂದು ಹರಿ ಕುಳಿತ (೩) ಅಡಿಗಡಿಗೆ ತನ್ನ…
-
Ranganenthavane
Composer : Shri Kanakadasaru ರಂಗನೆಂಥವನೆಂಥವನೆಲೆ ತಂಗಿಅವನಂಗ ತಿಳಿಯದು ಭ್ರಹ್ಮಾದಿಗಳಿಗೆ [ಪ] ಆಗಮವನು ತಂದಿಹನೆ ರಂಗವೇಗದಿ ಗಿರಿಯ ಪೊತ್ತಿಹನೆಮೂಗಿಂದ ಭೂಮಿಯ ನೆತ್ತಿಹನೆ ಕಂದಕೂಗಲು ಕಂಬದಿಂ ಬಂದ ಕಾಣಕ್ಕ [೧] ಧರೆಯನು ಈರಡಿ ಮಾಡಿದನೆ ಭೂಸುರರಿಗೆ ದಾನವ ನೀಡಿದನೆನೆರೆದು ಕಪಿ ಹಿಂಡು ಕೂಡಿದನೆ ಫಣಿಶಿರದಲ್ಲಿ ಕುಣಿ ಕುಣಿದಾಡಿದ ಕಾಣಕ್ಕ [೨] ಉಟ್ಟಿದ್ದು ಬಿಟ್ಟು ತಾ ನಿಂತಿಹನೆ ರಂಗದಿಟ್ಟದ ತೇಜಿಯನೇರಿದನೆದುಷ್ಟರನೆಲ್ಲ ಅಳುಹಿದನೆ ನಮ್ಮಬಡದಾದಿ ಕೇಶವ ರಾಯ ಕಾಣಕ್ಕ [೩] raMganeMthavaneMthavanele taMgiavanaMga tiLiyadu BrahmaadigaLige [pa] aagamavanu taMdihane raMgavEgadi…
-
Serideno serideno jagadeeshana
Composer : Shri Vyasarajaru ಸೇರಿದೆನೋ ಸೇರಿದೆನೋ ಜಗದೀಶನ ” ,ಶ್ರೀ ವ್ಯಾಸರಾಜರ ರಚನೆ , ರಾಗ ತಿಲಂಗ್ , ಖಂಡಛಾಪುತಾಳರಾಗ: ತಿಲಂಗ್ ಖಂಡಛಾಪುತಾಳ ಸೇರಿದೆನೋ ಸೇರಿದೆನೋ ಜಗದೀಶನ || ಪ ||ನರಕಜನ್ಮದ ಭಯವು ಎನಗೆ ಇನಿತಿಲ್ಲ || ಅ ಪ || ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ |ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ||ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ |ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ || ೧ || ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ |ಮಸ್ತಕವು…
