Neene dayalo

Composer : Shri Purandara dasaru

ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ ||ಪ||

ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ ||ಅ.ಪ||

ದಾನವಾಂತಕ ದೀನಜನ ಮಂದಾರನೆ
ಧ್ಯಾನಿಪರ ಮನ ಸಂಚಾರನೆ |
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೋ ಸನಕಾದಿ ವಂದ್ಯನೆ |೧|

ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
ಖಗಪತಿ ವಾಹನನೆ |
ಮಗುವಿನ ಮಾತೆಂದು ನಗುತ ಕೇಳಿ ನೀನು
ಬೇಗದಿಂದಲಿ ಕಾಯೋ ಸಾಗರ ಶಯನನೆ |೨|

ಮಂದರಧರ ಅರವಿಂದ ಲೋಚನ ನಿನ್ನ
ಕಂದನೆಂದೆಣಿಸೊ ಎನ್ನ |
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
ಬಂದೆನ್ನ ಕಾಯೋ ಶ್ರೀ ಪುರಂದರವಿಠಲನೆ |೩|


nInE dayALO nirmala citta gOviMda
nigama gOcara mukuMda ||pa||

j~jAnigaLarasa nInallade jagakinnu
mAnadiMdali kAyva doregaLa nA kANe ||a.pa||

dAnavAMtaka dInajana maMdArane
dhyAnipara mana saMcArane |
maunavAdenu ninna dhyAnAnaMdadi Iga
sAnurAgadi kAyO sanakAdi vaMdyane |1|

bage bageyali ninna tutipeno nagadhara
Kagapati vAhanane |
maguvina mAteMdu naguta kELi nInu
bEgadiMdali kAyO sAgara Sayanane |2|

maMdaradhara araviMda lOcana ninna
kaMdaneMdeNiso enna |
saMdEhavEkinnu svAmi mukuMdane
baMdenna kAyO SrI puraMdaraviThalane |3|

You might also like

error: Content is protected !!