23. Bruhat taratamya Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೨೩. ಬೃಹತ್ತಾರತಮ್ಯ ಸಂಧಿ
|| ( ಆವೇಶಾವತಾರ ಸಂಧಿ ) ||

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ಹರಿ ಸಿ-ರಿ ವಿರಿಂ — ಚೀರ- ಮುಖ ನಿ- |
ರ್ಜರರ- ಆವೇ — ಶಾವ-ತಾರ್ಗಳ |
ಸ್ಮರಿಸು- ಗುಣಗಳ — ಸರ್ವ-ಕಾಲದಿ — ಭಕ್ತಿ-ಪೂರ್ವಕ-ದಿ || ಸಂ. ಸೂ. ||

ಮೀನ- ಕೂರ್ಮ — ಕ್ರೋಡ- ನರಹರಿ |
ಮಾಣ-ವಕ ಭೃಗು — ರಾಮ- ದಶರಥ |
ಸೂನು- ಯಾದವ — ಬುದ್ಧ- ಕಲ್ಕೀ — ಕಪಿಲ- ವೈಕುಂ-ಠ ||
ಶ್ರೀನಿ-ವಾಸ — ವ್ಯಾಸ- ಋಷಭ ಹ- |
ಯಾನ-ನಾ ನಾ — ರಾಯ-ಣೀ ಹಂ- |
ಸಾನಿ-ರುದ್ಧ ತ್ರಿ — ವಿಕ್ರ-ಮ ಶ್ರೀ — ಧರ ಹೃ-ಷೀಕೇ-ಶ || ೨೩-೧ ||

ಹರಿಯು- ನಾರಾ — ಯಣನು- ಕೃಷ್ಣಾ- |
ಸುರಕು-ಲಾಂತಕ — ಸೂರ್ಯ- ಸಪ್ರಭ |
ಕರೆಸು-ವನು ನಿ — ರ್ದುಷ್ಟ- ಸುಖ ಪರಿ –ಪೂರ್ಣ- ತಾನೆಂ-ದು ||
ಸರುವ- ದೇವೋ — ತ್ತಮನು- ಸರ್ವಗ |
ಪರಮ- ಪುರುಷ ಪು — ರಾತ-ನ ಜರಾ- |
ಮರಣ- ವರ್ಜಿತ — ವಾಸು-ದೇವಾ — ದ್ಯಮಿತ- ರೂಪಾ-ತ್ಮಾ || ೨೩-೨ ||

ಈ ನ-ಳಿನ ಭವ — ಜನನಿ- ಲಕ್ಷ್ಮೀ- |
ಜ್ಞಾನ- ಬಲ ಭ — ಕ್ತ್ಯಾದಿ- ಗುಣ ಸಂ |
ಪೂರ್ಣ-ಳೆನಿಪಳು — ಸರ್ವ-ಕಾಲದಿ — ಹರಿ ಕೃ-ಪಾಬಲ-ದಿ ||
ಹೀನ-ಳೆನಿಪಳ — ನಂತ- ಗುಣದಿ ಪು- |
ರಾಣ- ಪುರುಷಗೆ — ಪ್ರಕೃತಿ-ಗಿನ್ನು ಸ- |
ಮಾನ-ರೆನಿಸುವ — ರಿಲ್ಲ- ಮುಕ್ತಾ — ಮುಕ್ತ- ಸುರರೊಳ-ಗೆ || ೨೩-೩ ||

ಗುಣಗ-ಳ ತ್ರಯ — ಮಾನಿ- ಶ್ರೀಕುಂ- |
ಭಿಣಿ ಮ-ಹಾ ದು — ರ್ಗಾಂಭ್ರ-ಣೀ ರು-|
ಗ್ಮಿಣಿಯು- ಸತ್ಯಾ — ಶಾಂತಿ- ಕೃತಿ ಜಯ — ಮಾಯ- ಮಹಲಕು-ಮಿ ||
ಜನಕ-ಜಾ ಕಮ — ಲಾಲ-ಯಾ ದ- |
ಕ್ಷಿಣೆಯು- ಪದ್ಮಾ — ತ್ರೀಲೊ-ಕೇಶ್ವರಿ |
ಅಣು ಮ-ಹತ್ತಿನೊ — ಳಿದ್ದು- ಉಪಮಾ — ರಹಿತ-ಳೆನಿಸುವ-ಳು || ೨೩-೪ ||

ಘೋಟ-ಕಾಸ್ಯನ — ಮಡದಿ-ಗಿಂದಲಿ |
ಹಾಟ-ಕೋದರ — ಪವನ-ರೀರ್ವರು |
ಕೋಟಿ- ಗುಣದಿಂ — ದಧಮ-ರೆನಿಪರು — ಆವ-ಕಾಲದ-ಲಿ ||
ಖೇಟ-ಪತಿ ಶೇ — ಷಾಮ-ರೇಂದ್ರರ |
ಪಾಟಿ- ಮಾಡದೆ — ಶ್ರೀಶ-ನ ಕೃಪಾ- |
ನೋಟ-ದಿಂದಲಿ — ಸರ್ವ-ರೊಳು ವ್ಯಾ — ಪಾರ- ಮಾಡುವ-ರು || ೨೩-೫ ||

ಪುರುಷ- ಬ್ರಹ್ಮ ವಿ — ರಿಂಚಿ-ಯು ಮಹಾ |
ನ್ಮರುತ- ಮುಖ್ಯ — ಪ್ರಾಣ- ಧೃತಿ ಸ್ಮೃತಿ |
ಗುರುವ-ರ ಮಹಾ — ಧ್ಯಾತ- ಬಲವಿ — ಜ್ಞಾತ- ವಿಖ್ಯಾ-ತ ||
ಗರಳ-ಭುಗ್ಭವ — ರೋಗ- ಭೇಷಜ |
ಸ್ವರವ-ರಣ ವೇ — ದಸ್ಥ- ಜೀವೇ- |
ಶ್ವರ ವಿ-ಭೀಷಣ — ವಿಶ್ವ-ಚೇಷ್ಟಕ — ವೀತ-ಭಯ ಭೀ-ಮ || ೨೩-೬ ||

ಅನಿಲ- ಸ್ಥಿತಿ ವೈ — ರಾಗ್ಯ- ನಿಧಿ ರೋ- |
ಚನ ವಿ-ಮುಕ್ತಿಗ — ನಂದ- ದಶಮತಿ |
ಅನಿಮಿ-ಷೇಶಾ — ನಿದ್ರ- ಶುಚಿ ಸ — ತ್ವಾತ್ಮ-ಕ ಶರೀ-ರ ||
ಅಣುಮ-ಹದ್ರೂ — ಪಾತ್ಮ-ಕಾಮೃತ |
ಹನುಮ-ದಾದ್ಯವ — ತಾರ- ಪದ್ಮಾ- |
ಸನ ಪ-ದವಿ ಸಂ — ಪ್ರಾಪ್ತ- ಪರಿಸರ — ಆಖ-ಣಾಶ್ಮ ಸ-ಮ || ೨೩-೭ ||

ಮಾತ-ರಿಶ್ವ — ಬ್ರಹ್ಮ-ರು ಜಗ- |
ನ್ಮಾತೆ-ಗಧಮಾ — ಧೀನ-ರೆನಿಪರು |
ಶ್ರೀತ-ರುಣಿವ — ಲ್ಲಭನು- ಈರ್ವರೊ — ಳಾವ- ಕಾಲದ-ಲಿ ||
ನೀತ- ಭಕ್ತಿ — ಜ್ಞಾನ- ಬಲರೂ- |
ಪಾತಿ-ಶಯದಿಂ — ದಿದ್ದು- ಚೇತನಾ- |
ಚೇತ-ನಗಳೊಳು — ವ್ಯಾಪ್ತ-ನೆನಿಸುವ — ತತ್ತ-ದಾಹ್ವಯ-ದಿ || ೨೩-೮ ||

ಸರಸ-ವತಿ ವೇ — ದಾತ್ಮಿ-ಕಾ ಭುಜಿ |
ನರಹ-ರೀ ಗುರು — ಭಕ್ತಿ- ಬ್ರಾಹ್ಮೀ |
ಪರಮ-ಸುಖ ಬಲ — ಪೂರ್ಣೆ- ಶ್ರದ್ಧಾ — ಪ್ರೀತಿ- ಗಾಯ-ತ್ರೀ ||
ಗರುಡ- ಶೇಷರ — ಜನನಿ- ಶ್ರೀಸಂ- |
ಕರುಷ-ಣ ಜಯಾ — ತನುಜೆ- ವಾಣೀ |
ಕರಣ- ನೀಯಾ — ಮಕೆ ಚ-ತುರ್ದಶ — ಭುವನ- ಸನ್ಮಾ-ನ್ಯೆ || ೨೩-೯ ||

ಕಾಳಿ- ದ್ರೌಪದಿ — ಕಾಶಿ-ಜಾ ಪಾಂ- |
ಚಾಲಿ- ಶಿವಕ — ನ್ಯೇಂದ್ರ- ಸೇನಾ |
ಕಾಲ-ಮಾನೀ — ಚಂದ್ರ- ವಿದ್ಯುನ್ — ನಾಮ- ಭಾರತಿ-ಗೆ ||
ಗಾಳಿ- ಬ್ರಹ್ಮರ — ಯುವತಿ-ಯರು ಏ- |
ಳೇಳು- ಐವ — ತ್ತೊಂದು- ಗುಣದಿಂ |
ಕೀಳ-ರೆನಿಪರು — ತಮ್ಮ- ಪತಿಗಳಿ — ಗಿಂತ-ಲಾವಾ-ಗ || ೨೩-೧೦ ||

ಹರಿ ಸ-ಮೀರಾ — ವೇಶ- ನರ ಸಂ- |
ಕರುಷ-ಣಾವೇ — ಶಯುತ- ಲಕ್ಷ್ಮಣ |
ಪರಮ- ಪುರುಷನ — ಶುಕ್ಲ- ಕೇಶಾ — ವೇಶ- ಬಲರಾ-ಮ ||
ಹರ ಸ-ದಾಶಿವ — ತಪ ಅ-ಹಂಕೃತು |
ಮರುತ-ಯುಕ್ತ ಶು — ಕೋರ್ಧ್ವ-ಪಟ ತ- |
ತ್ಪುರುಷ- ಜೈಗೀ — ಷೌರ್ವ- ದ್ರೌಣೀ — ವ್ಯಾಧ- ದುರ್ವಾ-ಸ || ೨೩-೧೧ ||

ಗರುಡ- ಶೇಷ ಶ — ಶಾಂಕ-ದಳ ಶೇ- |
ಖರರು- ತಮ್ಮೊಳು — ಸಮರು- ಭಾರತಿ- |
ಸರಸಿ-ಜಾಸನ — ಪತ್ನಿ-ಗಧಮರು — ನೂರು- ಗುಣದಿಂ-ದ ||
ಹರಿ ಮ-ಡದಿ ಜಾಂ — ಬವತಿ-ಯೊಳು ಶ್ರೀ- |
ತರುಣಿ-ಯಾವೇ — ಶ ವಿಹು-ದೆಂದಿಗು |
ಕೊರತೆ-ಯೆನಿಪರು — ಗರುಡ- ಶೇಷರಿ — ಗೈವ-ರೈದು ಗು-ಣ || ೨೩-೧೨ ||

ನೀಲ- ಭದ್ರಾ — ಮಿತ್ರ-ವಿಂದಾ |
ಮೇಲೆ-ನಿಪ ಕಾ — ಳಿಂದಿ- ಲಕ್ಷಣ |
ಬಾಲೆ-ಯರಿಗಿಂ — ತಧಮ- ವಾರುಣಿ — ಸೌಪ-ರಣಿ ಗಿರಿ-ಜಾ ||
ಶ್ರೀಲ-ಕುಮಿಯುತ — ರೇವ-ತೀ ಶ್ರೀ |
ಮೂಲ-ರೂಪದಿ — ಪೇಯ-ಳೆನಿಪಳು |
ಶೈಲ-ಜಾದ್ಯರು — ದಶಗು-ಣಾಧಮ — ತಮ್ಮ- ಪತಿಗಳಿ-ಗೆ || ೨೩-೧೩ ||

ನರಹ-ರೀರಾ — ವೇಶ- ಸಂಯುತ- |
ನರ ಪು-ರಂದರ — ಗಾಧಿ- ಕುಶ ಮಂ- |
ದರ-ದ್ಯುಮ್ನ ವಿ — ಕುಕ್ಷಿ- ವಾಲೀ — ಇಂದ್ರ-ನವತಾ-ರ ||
ಭರತ- ಬ್ರಹ್ಮಾ — ವಿಷ್ಟ- ಸಾಂಬ ಸು- |
ದರುಶ-ನ ಪ್ರ — ದ್ಯುಮ್ನ- ಸನಕಾ- |
ದ್ಯರೊಳ-ಗಿಪ್ಪ ಸ — ನತ್ಕು-ಮಾರನು — ಷಣ್ಮು-ಖನು ಕಾ-ಮ || ೨೩-೧೪ ||

ಈರ-ಯಿದು ಗುಣ — ಕಡಿಮೆ- ಪಾರ್ವತಿ |
ವಾರು-ಣೀಯರಿ — ಗಿಂದ್ರ- ಕಾಮ ಶ- |
ರೀರ-ಮಾನಿ — ಪ್ರಾಣ- ದಶ ಗುಣ — ಅವರ- ಶಕ್ರನಿ-ಗೆ ||
ಮಾರ-ಜಾರತಿ — ದಕ್ಷ- ಗುರು ವೃ- |
ತ್ರಾರಿ-ಜಾಯಾ — ಶಚಿ ಸ್ವ-ಯಂಭುವ- |
ರಾರು- ಜನ ಸಮ — ಪ್ರಾಣ-ಗವರರು — ಹತ್ತು-ಗುಣದಿಂ-ದ || ೨೩-೧೫ ||

ಕಾಮ- ಪುತ್ರನಿ — ರುದ್ಧ- ಸೀತಾ- |
ರಾಮ-ನಾನುಜ — ಶತ್ರು-ಹನ ಬಲ- |
ರಾಮ-ನಾನುಜ — ಪೌತ್ರ- ಅನಿರು — ದ್ಧನೊಳ-ಗನಿರು-ದ್ಧ ||
ಕಾಮ-ಭಾರ್ಯಾ — ರುಗ್ಮ-ವತಿ ಸ- |
ನ್ನಾಮ- ಲಕ್ಷಣ — ಳೆನಿಸು-ವಳು ಪೌ- |
ಲೋಮಿ- ಚಿತ್ರಾಂ — ಗದೆಯು- ತಾರಾ — ಎರಡು- ಪೆಸರುಗ-ಳು || ೨೩-೧೬ ||

ತಾರ-ನಾಮಕ — ತ್ರೇತೆ-ಯೊಳು ಸೀ- |
ತಾರ-ಮಣನಾ — ರಾಧಿ-ಸಿದನು ಸ- |
ಮೀರ-ಯುಕ್ತೋ — ದ್ಧವನು- ಕೃಷ್ಣಗೆ — ಪ್ರೀಯ-ನೆನಿಸಿದ-ನು ||
ವಾರಿ-ಜಾಸನ — ಯುಕ್ತ- ದ್ರೋಣನು |
ಮೂರು- ಇಳೆಯೊಳು — ಬೃಹ-ಸ್ಪತಿಗವ- |
ತಾರ-ವೆಂಬರು — ಮಹಾ-ಭಾರತ — ತಾತ್ಪ-ರಿಯದೊಳ-ಗೆ || ೨೩-೧೭ ||

ಮನು ಮು-ಖಾದ್ಯರಿ — ಗಿಂತ- ಪ್ರವಹನು- |
ಗುಣದಿ-ಪಂಚಕ — ನೀಚ-ನೆನಿಸುವ |
ಇನಶ-ಶಾಂಕರು — ಧರ್ಮ- ಮಾನವಿ — ಎರಡು- ಗುಣದಿಂ-ದ ||
ಕನಿಯ-ರೆನಿಪರು — ಪ್ರವಹ-ಗಿಂತಲಿ |
ದಿನಪ- ಶಶಿ ಯಮ — ಧರ್ಮ- ರೂಪಗ- |
ಳನುದಿ-ನದಿ ಚಿಂ — ತಿಪುದು- ಸಂತರು — ಸರ್ವ- ಕಾಲದ-ಲಿ || ೨೩-೧೮ ||

ಮರುತ-ನಾವೇ — ಶಯುತ- ಧರ್ಮಜ |
ಕರಡಿ- ವಿದುರರು — ಸತ್ಯ-ಜಿತು ಈ |
ರೆರಡು- ಧರ್ಮನ — ರೂಪ- ಬ್ರಹ್ಮಾ — ವಿಷ್ಟ- ಸುಗ್ರೀ-ವ ||
ಹರಿಯ- ರೂಪಾ — ವಿಷ್ಟ- ಕರ್ಣನು |
ತರಣಿ-ಗೆರಡವ — ತಾರ- ಚಂದ್ರಮ |
ಸುರಪ-ನಾವೇ — ಶಯುತ-ನಂಗದ — ನೆನಿಸಿ-ಕೊಳುತಿ-ಪ್ಪ || ೨೩-೧೯ ||

ತರಣಿ-ಗಿಂದಲಿ — ಪಾದ- ಪಾದರೆ |
ವರುಣ- ನೀಚ ಮ — ಹಾಭಿ-ಷಕು ದ- |
ರ್ದುರ ಸು-ಷೇಣನು — ಶಂತ-ನುವು ನಾ — ಲ್ವರು ವ-ರುಣರೂ-ಪ ||
ಸುರಮು-ನೀ ನಾ — ರದನು- ಕಿಂಚಿತ್ |
ತ್ಕೊರತೆ- ವರುಣಗೆ — ಅಗ್ನಿ- ಭೃಗು ಅಜ- |
ಗೊರಳ- ಪತ್ನಿ ಪ್ರ — ಸೂತಿ- ಮೂವರು — ನಾರ-ದನಿಗಧ-ಮ || ೨೩-೨೦ ||

ನೀಲ- ದೃಷ್ಟ — ದ್ಯುಮ್ನ- ಲವ ಈ |
ಲೇಲಿ-ಹಾನನ — ರೂಪ-ಗಳು ಭೃಗು |
ಕಾಲಿ-ಲೊದ್ದದ — ರಿಂದ- ಹರಿಯನು — ವ್ಯಾಧ-ನೆನಿಸಿದ-ನು ||
ಏಳು- ಋಷಿಗಳಿ — ಗುತ್ತ-ಮರು ಮುನಿ- |
ಮೌಳಿ- ನಾರದ — ಗಧಮ- ಮೂವರು |
ಗಾಳಿ-ಯುತ ಪ್ರ — ಹ್ಲಾದ- ಬಾಹ್ಲಿಕ — ರಾಯ-ನೆನಿಸಿದ-ನು || ೨೩-೨೧ ||

ಜನಪ- ಕರ್ಮಜ — ರೊಳಗೆ- ನಾರದ |
ಮುನಿಯ-ನುಗ್ರಹ — ಬಲದಿ- ಪ್ರಹ್ಲಾ- |
ದನಲ- ಭೃಗುಮುನಿ — ದಕ್ಷ-ಪತ್ನಿಗೆ — ಸಮನೆ-ನಿಸಿಕೊಂ-ಬ ||
ಮನುವಿ-ವಸ್ವಾನ್ — ಗಾಧಿ-ಜೀರ್ವರು |
ಅನಲ-ಗಿಂತಲಿ — ಕಿಂಚಿ-ತಾಧಮ- |
ಎಣೆಯೆ-ನಿಸುವರು — ಸಪ್ತ-ಋಷಿಗಳಿ — ಗೆಲ್ಲ- ಕಾಲದ-ಲಿ || ೨೩-೨೨ ||

ಕಮಲ- ಸಂಭವ — ಭವರೆ-ನಿಪ ಸಂ- |
ಯಮಿ ಮ-ರೀಚಿಯು — ಅತ್ರಿ- ಯಂಗಿರ- |
ಸುಮತಿ- ಪುಲಹಾ — ಕ್ರತು ವ-ಸಿಷ್ಠ ಪು — ಲಸ್ತ್ಯ-ಮುನಿ ಸ್ವಾ-ಹಾ- |
ರಮಣ-ಗಧಮರು — ಮಿತ್ರ- ನಾಮಕ |
ದ್ಯುಮಣಿ- ರಾಹೂ — ಯುಕ್ತ- ಭೀಷ್ಮಕ |
ಯಮಳ- ರೂಪನು — ತಾರ- ನಾಮಕ — ನೆನಿಪ- ತ್ರೇತೆಯೊ-ಳು || ೨೩-೨೩ ||

ನಿಋತಿ-ಗೆರಡವ — ತಾರ- ದುರ್ಮುಖ |
ಹರಯು-ತ ಘಟೋ — ತ್ಕಚನು- ಪ್ರಾವಹಿ |
ಗುರುಮ-ಡದಿ ತಾ — ರಾಸ-ಮರು ಪ — ರ್ಜನ್ಯ-ಗುತ್ತಮ-ರು ||
ಕರಿಗೊ-ರಳ ಸಂ — ಯುಕ್ತ- ಭಗದ- |
ತ್ತರಸು- ಕತ್ಥನ — ಧನಪ- ರೂಪಗ- |
ಳೆರಡು- ವಿಘ್ನಪ — ಚಾರು-ದೇಷ್ಣನು — ಅಶ್ವಿ-ನಿಗಳು ಸ-ಮ || ೨೩-೨೪ ||

ದ್ರೋಣ- ಧೃವ ದೋ — ಷಾರ್ಕ- ನಗ್ನಿಯು |
ಪ್ರಾಣ-ದ್ಯುವಿಭಾ — ವಸುಗ-ಳೆಂಟು ಕೃ- |
ಶಾನು- ಶ್ರೇಷ್ಠ ದ್ಯು — ನಾಮ- ವಸು ಭೀ — ಷ್ಮಾರ್ಯ- ಬ್ರಹ್ಮಯು-ತ ||
ದ್ರೋಣ-ನಾಮಕ — ನಂದ-ಗೋಪ ಪ್ರ- |
ಧಾನ- ಅಗ್ನಿಯ — ನುಳಿದು- ಏಳು ಸ- |
ಮಾನ-ರೆನಿಪರು — ತಮ್ಮೊ-ಳಗೆ ಜ್ಞಾ — ನಾದಿ- ಗುಣದಿಂ-ದ || ೨೩-೨೫ ||

ಭೀಮ-ರೈವತ — ಓಜ-ಜೈಕಪ- |
ದಾಮ-ಹಾನ್ ಬಹು — ರೂಪ-ಕನು ಭವ |
ವಾಮ- ಉಗ್ರ ವೃ — ಷಾಕ-ಪಿಯಹಿರ್ — ಬುಧ್ನಿ- ಎನುತಿ-ಪ್ಪ ||
ಈ ಮ-ಹಾತ್ಮರ — ಮಧ್ಯ-ದೊಳಗೆ ಉ- |
ಮಾ ಮ-ನೋಹರ — ಉತ್ತ-ಮನು ದಶ- |
ನಾಮ-ಕರು ಸಮ — ರೆನಿಸಿ-ಕೊಂಬರು — ತಮ್ಮೊ-ಳೆಂದೆಂ-ದು || ೨೩-೨೬ ||

ಭೂರ್ಯ-ಜೈಕಪ — ದಾಹ್ವ-ಹಿರ್ಬು- |
ಧ್ನೀರ-ಯಿದು ರು — ದ್ರಗಣ- ಸಂಯುತ |
ಭೂರಿ-ಶ್ರವನೆಂ — ದೆನಿಪ- ಶಲ ವಿರು — ಪಾಕ್ಷ- ನಾಮಕ-ನು ||
ಸೂರಿ- ಕೃಪ ವಿ — ಷ್ಕಂಭ- ಸಹದೇ- |
ವಾ ರ-ಣಾಗ್ರಣಿ — ಸೋಮ-ದತ್ತನು |
ತಾ ರ-ಚಿಸಿದ ದ್ವಿ — ರೂಪ- ಧರೆಯೊಳು — ಪತ್ರ-ತಾಪಕ-ನು || ೨೩-೨೭ ||

ದೇವ-ಶಕ್ರ ನು — ರುಕ್ರ-ಮನು ಮಿ- |
ತ್ರಾ ವ-ರುಣ ಪ — ರ್ಜನ್ಯ- ಭಗ ಪೂ- |
ಷಾ ವಿ-ವಸ್ವಾನ್ — ಸವಿತೃ- ಧಾತಾ — ಅರ್ಯ-ಮ ತ್ವ-ಷ್ಟಾ ||
ದೇವ-ಕೀ ಸುತ — ನಲ್ಲಿ ಸವಿತೃ ವಿ- |
ಭಾವ- ಸೂಸುತ — ಭಾನು- ಎನಿಸುವ |
ಜ್ಯಾವ-ನಪಯುತ — ವೀರ-ಸೇನನು — ತ್ವಷ್ಟೃ- ನಾಮಕ-ನು || ೨೩-೨೮ ||

ಎರಡ-ಧಿಕ ದಶ — ಸೂರ್ಯ-ರೊಳು ಮೂ- |
ರೆರಡು- ಜನರು — ತ್ತಮ ವಿ-ವಸ್ವಾನ್ |
ವರುಣ- ಶಕ್ರನು — ರುಕ್ರ-ಮನು ಪ — ರ್ಜನ್ಯ- ಮಿತ್ರಾ-ಖ್ಯ ||
ಮರುತ-ನಾವೇ — ಶಯುತ- ಪಾಂಡೂ |
ವರ ಪ-ರಾವಹ — ನೆಂದೆ-ನಿಪ ಕೇ- |
ಸರಿ ಮೃ-ಗಪ ಸಂ — ಪಾತಿ- ಶ್ವೇತ — ತ್ರಯರು- ಮರುದಂ-ಶ || ೨೩-೨೯ ||

ಪ್ರತಿಭ- ವಾತನು — ಚೇಕಿ-ತನು ವಿ- |
ಪೃಥುವೆ-ನಿಸುವನು — ಸೌಮ್ಯ- ಮಾರುತ |
ವಿತತ- ಸರ್ವೋ — ತ್ತುಂಗ- ಗಜನಾ — ಮಕರು- ಪ್ರಾಣಾಂ-ಶ ||
ದ್ವಿತಿಯ-ಪಾನ ಗ — ವಾಕ್ಷ- ಗವಯನು |
ತೃತಿಯ- ವ್ಯಾನ ಉ — ದಾನ- ವೃಷಪ- |
ರ್ವತುಳ- ಶರ್ವ — ತ್ರಾತ- ಗಂಧಸು — ಮಾದ-ನರು ಸಮ-ನ || ೨೩-೩೦ ||

ಐವ-ರೊಳಗೀ — ಕುಂತಿ-ಭೋಜನು |
ಆವಿ- ನಾಮಕ — ನಾಗ- ಕೃಕಲನು |
ದೇವ-ದತ್ತ ಧ — ನಂಜ-ಯರು ಅವ — ತಾರ- ವರ್ಜಿತ-ರು ||
ಆವ-ಹೋದ್ವಹ — ವಿವಹ- ಸಂವಹ |
ಪ್ರಾವ-ಹೀಪತಿ — ಮರುತ- ಪ್ರವಹನಿ- |
ಗಾವ- ಕಾಲಕು — ಕಿಂಚಿ-ದಧಮರು — ಮರುತ- ಗಣರೆ-ಲ್ಲ || ೨೩-೩೧ ||

ಪ್ರಾಣ-ಪಾನ — ವ್ಯಾನು-ದಾನ ಸ- |
ಮಾನ-ರೈವರ — ನುಳಿದು- ಮರುತರು |
ಊನ-ರೆನಿಪರು — ಹತ್ತು- ವಿಶ್ವೇ — ದೇವ-ರಿವರಿಂ-ದ ||
ಸೂನು-ಗಳು ಎನಿ — ಸುವರು- ಐವರು |
ಮಾನಿ-ನೀ ದ್ರೌ — ಪದಿಗೆ- ಕೆಲವರು |
ಕ್ಷೋಣಿ-ಯೊಳು ಕೈ — ಕೇಯ-ರೆನಿಪರು — ಎಲ್ಲ- ಕಾಲದ-ಲಿ || ೨೩-೩೨ ||

ಪ್ರತಿವಿ-ದ ಶೃತ — ಸೋಮ- ಶೃತಕೀ- |
ರುತಿ ಶ-ತಾನಿಕ — ಶೃತಕ- ರಮ ದ್ರೌ-
ಪದಿ ಕು-ವರರಿವ — ರೊಳಗೆ- ಅಭಿತಾ — ಮ್ರ ಪ್ರ-ಮುಖ ಚಿ-ತ್ರ- ||
ರಥನು- ಗೋಪ ಕಿ — ಶೋರ- ಬಲರೆಂ- |
ಬತುಳ-ರೈ ಗಂ — ಧರ್ವ-ರಿಂದಲಿ |
ಯುತರು- ಧರ್ಮ ವೃ — ಕೋದ-ರಾದಿಜ — ರೆಂದು- ಕರೆಸುವ-ರು || ೨೩-೩೩ ||

ವಿವಿದ- ಮೈಂದರು — ನಕುಲ- ಸಹದೇ- |
ವ ವಿಭು- ತ್ರಿಶಿಖಾ — ಶ್ವಿನಿಗ-ಳಿವರೊಳು |
ದಿವಿಪ-ನಾವೇ — ಶವಿಹು-ದೆಂದಿಗು — ದ್ಯಾವ- ಪೃಥ್ವಿ ಋ-ಭು ||
ಪವನ-ಸುತ ವಿ — ಷ್ವಕ್ಸೆ-ನನುಮಾ- |
ಕುವರ- ವಿಘ್ನಪ — ಧನಪ- ಮೊದಲಾ- |
ದವರು- ಮಿತ್ರಗೆ — ಕಿಂಚಿ-ತಾಧಮ — ರೆನಿಸಿ- ಕೊಳುತಿಹ-ರು || ೨೩-೩೪ ||

ಪಾವ-ಕಾಗ್ನಿ ಕು — ಮಾರ-ನೆನಿಸುವ |
ಚ್ಯಾವ-ನ ನುಚ — ಥ್ಯಮುನಿ- ಚಾಕ್ಷುಷ |
ರೈವ-ತ ಸ್ವಾ — ರೋಚಿ-ಷೋತ್ತಮ — ಬ್ರಹ್ಮ-ರುದ್ರೇಂ-ದ್ರ ||
ದೇವ- ಧರ್ಮನು — ದಕ್ಷ-ನಾಮಕ |
ಸಾವ-ರಣಿ ಶಶ — ಬಿಂದು- ಪೃಥು ಪ್ರೀ- |
ಯವ್ರ-ತನು ಮಾಂ — ಧಾತ- ಗಯನು ಕ — ಕುತ್ಥ್ಸ- ದೌಷ್ಯಂ-ತಿ || ೨೩-೩೫ ||

ಭರತ- ಋಷಭಜ — ಹರಿಣಿ-ಜ ದ್ವಿಜ |
ಭರತ- ಮೊದಲಾ — ದಖಿಳ-ರಾಯರೊ- |
ಳಿರುತಿ-ಹುದು ಶ್ರೀ — ವಿಷ್ಣು- ಪ್ರಾಣಾ — ವೇಶ- ಪ್ರತಿದಿನ-ದಿ ||
ವರ ದಿ-ವಸ್ಪತಿ — ಶಂಭು-ರದ್ಭುತ |
ಕರೆಸು-ವನು ಬಲಿ — ವಿಧೃತ- ಧೃತ ಶುಚಿ |
ನೆರೆ ಖ-ಲೂ ಕೃತ — ಧಾಮ- ಮೊದಲಾ — ದಷ್ಟ- ಗಂಧ-ರ್ವ || ೨೩-೩೬ ||

ಅರಸು-ಗಳು ಕ — ರ್ಮಜರು- ವೈಶ್ವಾ- |
ನರ ಗ-ಧಮ ಶತ — ಗುಣದಿ- ವಿಘ್ನೇ- |
ಶ್ವರಗೆ- ಕಿಂಚಿ — ದ್ಗುಣ ಕ-ಡಿಮೆ ಬಲಿ — ಮುಖ್ಯ- ಪಾವಕ-ರು ||
ಶರಭ- ಪರ್ಜ — ನ್ಯಾಖ್ಯ- ಮೇಘಪ |
ತರಣಿ- ಭಾರ್ಯಾ — ಸಂಜ್ಞೆ- ಶಾರ್ವರಿ- |
ಕರನ- ಪತ್ನಿಯು — ರೋಹಿ-ಣೀ ಶ್ಯಾ — ಮಲೆಯು- ದೇವಕಿ-ಯು || ೨೩-೩೭ ||

ಅರಸಿ- ಎನಿಪಳು — ಧರ್ಮ-ರಾಜಗೆ |
ವರುಣ- ಭಾರ್ಯೋ — ಷಾದಿ- ಷಟ್ಕರು |
ಕೊರತೆ-ಯೆನಿಪರು — ಪಾವ-ಕಾದ್ಯರಿ — ಗೆರಡು- ಗುಣದಿಂ-ದ ||
ಎರಡು- ಮೂರ್ಜನ — ಗಧಮ- ಸ್ವಾಹಾ |
ಕರೆಸು-ವಳುಷಾ — ದೇವಿ- ವೈಶ್ವಾ- |
ನರನ- ಮಡದಿಗೆ — ದಶಗು-ಣಾವರ — ಳಶ್ವಿ-ನೀ ಭಾ-ರ್ಯಾ || ೨೩-೩೮ ||

ಸುದರು-ಶನ ಶ — ಕ್ರಾದಿ-ಸುರಯುತ |
ಬುಧನು- ತಾನಭಿ — ಮನ್ಯು-ವೆನಿಸುವ |
ಬುಧನಿ-ಗಿಂದ — ಶ್ವಿನಿಯ- ಭಾರ್ಯೆಯು — ಶಲ್ಯ- ಮಾಗಧ-ರ ||
ಉದರ- ಜೋಷಾ — ದೇವಿ-ಗಿಂತಲಿ |
ಅಧಮ-ನೆನಿಪ ಶ — ನೈಶ್ಚ-ರನು ಶನಿ |
ಗಧಮ- ಪುಷ್ಕರ — ಕರ್ಮ-ಪನು ಎನಿ — ಸುವನು- ಬುಧರಿಂ-ದ || ೨೩-೩೯ ||

ಉದ್ವ-ಹಾ ಮರು — ತಾನ್ವಿ-ತ ವಿರಾ- |
ಧ ದ್ವಿ-ತಿಯ ಸಂ — ಜಯನು- ತುಂಬುರು |
ವಿದ್ವ-ದುತ್ತಮ — ಜನಮೆ- ಜಯ ತ್ವ — ಷ್ಟೃಯುತ- ಚಿತ್ರರ-ಥ ||
ಸದ್ವಿ-ನುತ ದಮ — ಘೋಷ-ಕ ಕಬಂ- |
ಧದ್ವ-ಯರು ಗಂ — ಧರ್ವ-ದನು ಮನು |
ಪದ್ಮ-ಸಂಭವ — ಯುತ ಕಿ-ಶೋರ — ಕ್ರೂರ- ನೆನಿಸುವ-ನು || ೨೩-೪೦ ||

ವಾಯು-ಯುತ ಧೃತ — ರಾಷ್ಟ್ರ- ದಿವಿಜರ |
ಗಾಯ-ಕನು ಧೃತ — ರಾಷ್ಟ್ರ- ನಕ್ರನು |
ರಾಯ- ದ್ರುಪದಾ — ವಹ ವಿ-ಶಿಷ್ಟನು — ಹೂಹು- ಗಂಧ-ರ್ವ ||
ನಾಯ-ಕ ವಿರಾ — ಡ್ವಿವಹ- ಹಾಹಾ |
ಜ್ಞೇಯ- ವಿದ್ಯಾ — ಧರನೆ- ಅಜಗರ |
ತಾ ಯೆ-ನಿಸುವನು — ಉಗ್ರ-ಸೇನನೆ — ಉಗ್ರ-ಸೇನಾ-ಖ್ಯ || ೨೩-೪೧ ||

ಬಿಸಜ- ಸಂಭವ — ಯುಕ್ತ- ವಿಶ್ವಾ- |
ವಸು ಯು-ಧಾಮ — ನ್ಯುತ್ತ-ಮೌಜಸ |
ಬಿಸಜ-ಮಿತ್ರಾ — ರ್ಯಮಯು-ತ ಪರಾ — ವಸುವೆ-ನಿಸುತಿ-ಪ್ಪ ||
ಅಸಮ- ಮಿತ್ರಾ — ನ್ವಿತನು- ಸತಜಿತು |
ವಸುಧೆ- ಚಿತ್ರಾ — ಸೇನ- ಅಮೃತಾಂ- |
ಧಸರ- ಗಾಯಕ — ರೆಂದು- ಕರೆಸುವ — ರಾವ-ಕಾಲದ-ಲಿ || ೨೩-೪೨ ||

ಉಳಿದ- ಗಂಧ — ರ್ವರುಗ-ಳೆಲ್ಲರು |
ಬಲಿ ಮೊ-ದಲು ಗೋ — ಪಾಲ-ರೆನಿಪರು |
ಇಳೆಯೊ-ಳಗೆ ಸೈ — ರಂಧ್ರಿ- ಪಿಂಗಳೆ — ಅಪ್ಸ-ರ ಸ್ತ್ರೀ-ಯು ||
ತಿಲೊತ-ಮೆಯು ಪೂ –ರ್ವದಲಿ- ನಕುಲನ- |
ಲಲನೆ- ಪಾರ್ವತಿ — ಯೆನಿಸು-ವಳು ಗೋ- |
ಕುಲದ- ಗೋಪಿಯ — ರೆಲ್ಲ- ಶಬರೀ — ಮುಖ್ಯ-ರಪ್ಸರ-ರು || ೨೩-೪೩ ||

ಕೃಷ್ಣ-ವರ್ತ್ಮನ — ಸುತರೊ-ಳಗೆ ಶತ- |
ದ್ವ್ಯಷ್ಟ-ಸಾವಿರ — ಸ್ತ್ರೀಯ-ರಲ್ಲಿ ಪ್ರ- |
ವಿಷ್ಟ-ಳಾಗಿ ರ — ಮಾಂಬ- ತತ್ತ — ನ್ನಾಮ- ರೂಪದ-ಲಿ ||
ಕೃಷ್ಣ-ಮಹಿಷಿಯ — ರೊಳಗೆ- ಇಪ್ಪಳು |
ತ್ವಷ್ಟೃ-ಪುತ್ರಿ ಕ — ಶೇರು- ಇವರೊಳು |
ಶ್ರೇಷ್ಠ-ಳೆನಿಪಳು — ಉಳಿದ- ಋಷಿಗಣ — ಗೋಪಿ-ಕಾ ಸಮ-ರು || ೨೩-೪೪ ||

ಸೂನು-ಗಳು ಎನಿ — ಸುವರು- ದೇವ ಕೃ- |
ಶಾನು-ವಿಗೆ ಕ್ರಥ — ಶುಂಧಿ- ಶುಚಿ ಪವ- |
ಮಾನ- ಕೈಶಿಕ — ರೈದು- ತುಂಬುರು — ಊರ್ವ-ಶೀ ಶತ-ರು ||
ಮೇನ-ಕಾ ಋಷಿ — ರಾಯ-ರುಗಳಾ- |
ಜಾನ- ಸುರರಿಗೆ — ಸಮರೆ-ನಿಪರು ಸು- |
ರಾಣ-ಕರನಾ — ಖ್ಯಾತ- ದಿವಿಜರ — ಜನಕ-ರೆನಿಸುವ-ರು || ೨೩-೪೫ ||

ಪಾವ-ಕರಿಗಿಂ — ತಧಮ-ರೆನಿಸುವ |
ದೇವ- ಕುಲಜಾ — ನಾಖ್ಯ- ಸುರಗಣ |
ಕೋವಿ-ದರು ನಾ — ನಾ ಸು-ವಿದ್ಯದಿ — ಸ್ವೋತ್ತ-ಮರ ನಿ-ತ್ಯ ||
ಸೇವಿ-ಪರು ಸ — ದ್ಭಕ್ತಿ- ಪೂರ್ವಕ |
ಸ್ವಾವ-ರರಿಗುಪ — ದೇಶಿ-ಸುವರು ನಿ- |
ರಾವ-ಲಂಬನ — ವಿಮಲ- ಗುಣಗಳ — ಪ್ರತಿ ದಿ-ವಸದ-ಲ್ಲಿ || ೨೩-೪೬ ||

ಸುರರೊ-ಳಗೆ ವರ — ಣಾಶ್ರ-ಮಗಳೆಂ- |
ಬೆರಡು- ಧರ್ಮಗ — ಳಿಲ್ಲ- ತಮ್ಮೊಳು |
ನಿರುಪ-ಮರು ಎಂ — ದೆನಿಸಿ-ಕೊಂಬರು — ತಾರ-ತಮ್ಯದ-ಲಿ ||
ಗುರುವು- ಶಿಷ್ಯ — ತ್ವವು ಋ-ಷಿಗಳೊಳ- |
ಗಿರುತಿ-ಹುದು ಆ — ಜಾನ-ಸುರರಿಗೆ |
ಚಿರಪಿ-ತೃ ಶತಾ — ಧಮರೆ-ನಿಸುವರು — ಏಳು-ಜನರುಳಿ-ದು || ೨೩-೪೭ ||

ಚಿರಪಿ-ತೃಗಳಿಂ — ದಧಮ- ಗಂಧ- |
ರ್ವರುಗ-ಳೆನಿಪರು — ದೇವ-ನಾಮಕ |
ಕೊರತೆ-ಯೆನಿಸುವ — ಚಕ್ರ-ವರ್ತಿಗ — ಳಿಂದ- ಗಂಧ-ರ್ವ ||
ನರರೊ-ಳುತ್ತಮ — ರೆನಿಸು-ವರು ಹ- |
ನ್ನೆರಡು- ಎಂಭ — ತ್ತೆಂಟು- ಗುಣದಲಿ |
ಹಿರಿಯ-ರೆನಿಪರು — ಕ್ರಮದಿ- ದೇವಾ — ವೇಶ- ಬಲದಿಂ-ದ || ೨೩-೪೮ ||

ದೇವ-ತೆಗಳಿಂ — ಪ್ರೇಷ್ಯ-ರೆನಿಪರು |
ದೇವ-ಗಂಧ — ರ್ವರುಗ-ಳವರಿಂ- |
ದಾವ- ಕಾಲಕು — ಶಿಕ್ಷಿ-ತರು ನರ — ನಾಮ- ಗಂಧ-ರ್ವ ||
ಕೇವ-ಲತಿ ಸ — ದ್ಭಕ್ತಿ- ಪೂರ್ವಕ |
ಯಾವ-ದಿಂದ್ರಿಯ — ಗಳ ನಿ-ಯಾಮಕ |
ಶ್ರೀವ-ರನೆ ಎಂ — ದರಿತು- ಭಜಿಪರು — ಮಾನು-ಷೋತ್ತಮ-ರು || ೨೩-೪೯ ||

ಬಾದ-ರಾಯಣ — ಭಾಗ-ವತ ಮೊದ- |
ಲಾದ- ಶಾಸ್ತ್ರಗ — ಳಲ್ಲಿ- ಬಹು ವಿಧ |
ದ್ವಾದ-ಶ ದಶ ಸು — ಪಂಚ-ವಿಂಶತಿ — ಶತ ಸ-ಹಸ್ರಯು-ತ ||
ಭೇದ-ಗಳ ಪೇ — ಳಿದನು- ಸ್ವೋತ್ತಮ |
ಆದಿ-ತೇಯಾ — ವೇಶ- ಬಲದಿ ವಿ- |
ರೋಧ- ಚಿಂತಿಸ — ಬಾರ-ದಿದು ಸಾ — ಧುಜನ- ಸಮ್ಮತ-ವು || ೨೩-೫೦ ||

ಇವರು- ಮುಕುತಿಗೆ — ಯೋಗ್ಯ-ರೆಂಬರು- |
ಶ್ರವಣ- ಮನನಾ — ದಿಗಳ- ಪರಮೋ- |
ತ್ಸವದಿ- ಮಾಡುತ — ಕೇಳಿ- ನಲಿಯುತ — ಧರ್ಮ- ಕಾಮಾ-ರ್ಥ ||
ತ್ರಿವಿಧ- ಫಲಗಳ — ಪೇಕ್ಷಿ-ಸದೆ ಶ್ರೀ- |
ಪವನ-ಮುಖ ದೇ — ವಾಂತ-ರಾತ್ಮಕ |
ಪ್ರವರ- ತಮ ಶಿ — ಷ್ಟೇಷ್ಟ-ದಾಯಕ — ನೆಂದು- ಸ್ಮರಿಸುವ-ರು || ೨೩-೫೧ ||

ನಿತ್ಯ- ಸಂಸಾ — ರಿಗಳು- ಗುಣ ದೋ- |
ಷಾತ್ಮ-ಕರು ಬ್ರ — ಹ್ಮಾದಿ- ದಿವಿಜರ |
ಭೃತ್ಯ-ರೆಂಬರು — ರಾಜ-ನೋಪಾ — ದಿಯಲಿ- ಹರಿಯೆಂ-ಬ ||
ಕೃತ್ತಿ-ವಾಸನು — ಬ್ರಹ್ಮ- ಶ್ರೀ ವಿ- |
ಷ್ಣುತ್ರ-ಯರು ಸಮ — ದುಃಖ- ಸುಖ ಉ- |
ತ್ಪತ್ತಿ- ಮೃತಿ ಭಯ — ಪೇಳು-ವರು ಅವ — ತಾರ-ಗಳಿಗೆ ಸ-ದಾ || ೨೩-೫೨ ||

ತಾರ-ತಮ್ಯ — ಜ್ಞಾನ-ವಿಲ್ಲದೆ |
ಸೂರಿ-ಗಳ ನಿಂ — ದಿಸುತ- ನಿತ್ಯದಿ |
ತೋರು-ತಿಪ್ಪರು — ಸುಜನ-ರೋಪಾ — ದಿಯಲಿ- ನರರೊಳ-ಗೆ ||
ಕ್ರೂರ- ಕರ್ಮಾ — ಸಕ್ತ-ರಾಗಿ ಶ- |
ರೀರ- ಪೋಷಣೆ — ಗೋಸು-ಗದಿ ಸಂ- |
ಚಾರ- ಮಾಳ್ಪರು — ಅನ್ಯ-ದೇವತೆ — ನೀಚ-ರಾಲಯ-ದಿ || ೨೩-೫೩ ||

ದಶ-ಪ್ರಮತಿ ಮ — ತಾಬ್ಧಿ-ಯೊಳು ಸುಮ- |
ನಸರೆ-ನಿಪ ರ — ತ್ನಗಳ-ನವಲೋ- |
ಕಿಸಿ ತೆ-ಗೆದು ಪ್ರಾ — ಕೃತ ಸು-ಭಾಷಾ — ತಂತು-ಗಳ ರಚಿ-ಸಿ ||
ಅಸುಪ-ತಿ ಶ್ರೀ — ರಮಣ-ಗೆ ಸಮ- |
ರ್ಪಿಸಿದೆ- ಸಜ್ಜನ — ರಿದನು- ಸಂತೋ- |
ಷಿಸಲಿ- ದೋಷಗ — ಳೆಣಿಸ-ದಲೆ ಕಾ — ರುಣ್ಯ-ದಲಿ ನಿ-ತ್ಯ || ೨೩-೫೪ ||

ನಿರುಪ-ಮ ಶ್ರೀ — ವಿಷ್ಣು- ಲಕ್ಷ್ಮೀ- |
ಸರಸಿ-ಜೋದ್ಭವ — ವಾಯು- ವಾಣೀ- |
ಗರುಡ- ಷಣ್ಮಹಿ — ಷಿಯರು- ಪಾರ್ವತಿ — ಶಕ್ರ- ಸ್ಮರ ಪ್ರಾ-ಣ ||
ಗುರು ಬೃ-ಹಸ್ಪತಿ — ಪ್ರವಹ- ಸೂರ್ಯನು |
ವರುಣ- ನಾರದ — ವಹ್ನಿ- ಸಪ್ತಾಂ- |
ಗಿರರು- ಮಿತ್ರ ಗ — ಣೇಶ- ಪೃಥು ಗಂ — ಗಾ ಸ್ವ-ಹಾ ಬುಧ-ನು || ೨೩-೫೫ ||

ತರಣಿ- ತನಯ ಶ — ನೈಶ್ಚ-ರನು ಪು- |
ಷ್ಕರನ-ಜಾನಜ — ಚಿರಪಿ-ತರು ಗಂ- |
ಧರುವ-ರೀರ್ವರು — ದೇವ- ಮಾನುಷ — ಚಕ್ರ-ವರ್ತಿಗ-ಳು ||
ನರರೊ-ಳುತ್ತಮ — ಮಧ್ಯ-ಮಾಧಮ |
ಕರೆಸು-ವರು ಮ — ಧ್ಯೋತ್ತ-ಮರು ಈ- |
ರೆರಡು- ಜನ ಕೈ — ವಲ್ಯ- ಮಾರ್ಗ — ಸ್ಥರೆಂ-ದಾನಮಿ-ಪೆ || ೨೩-೫೬ ||

ಸಾರ- ಭಕ್ತಿ — ಜ್ಞಾನ-ದಿ ಬೃಹ- |
ತ್ತಾರ-ತಮ್ಯವ — ನರಿತು- ಪಠಿಸುವ |
ಸೂರಿ-ಗಳಿಗನು — ದಿನದಿ- ಪುರುಷಾ — ರ್ಥಗಳ- ಪೂರೈ-ಸಿ ||
ಕಾರು-ಣಿಕ ಮರು — ತಾಂತ-ರಾತ್ಮಕ |
ಮಾರ-ಮಣ ಜಗ — ನಾಥ-ವಿಠ್ಠಲ |
ತೋರಿ-ಕೊಂಬನು — ಹೃತ್ಕ-ಮಲದೊಳು — ಯೋಗ್ಯ-ತೆಗಳರಿ-ತು || ೨೩-೫೭ ||

|| ಇತಿ ಶ್ರೀ ಬೃಹತ್ತಾರತಮ್ಯ ಸಂಧಿ ಸಂಪೂರ್ಣಂ ||
|| ( ಇತಿ ಶ್ರೀ ಆವೇಶಾವತಾರಸಂಧಿ ಸಂಪೂರ್ಣಂ ) ||
|| ಶ್ರೀಕೃಷ್ಣಾರ್ಪಣಮಸ್ತು ||

24. Kalpa sadhana Sandhi – HKS


  1. bRuhattaaratamya saMdhi
    || ( aavEshaavataara saMdhi ) ||

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

hari si-ri viriM — cIra- mukha ni- |
rjarara- aavE — shaava-taargaLa |
smarisu- guNagaLa — sarva-kaaladi — bhakti-poorvaka-di || saM. soo. ||

meena- koorma — krODa- narahari |
maaNa-vaka bhRugu — raama- dasharatha |
soonu- yaadava — buddha- kalkI — kapila- vaikuM-Tha ||
shreeni-vaasa — vyaasa- RuShabha ha- |
yaana-naa naa — raaya-NI haM- |
saani-ruddha tri — vikra-ma shree — dhara hRu-ShIkE-sha || 23-1 ||

hariyu- naaraa — yaNanu- kRuShNaa- |
suraku-laaMtaka — soorya- saprabha |
karesu-vanu ni — rduShTa- sukha pari –poorNa- taaneM-du ||
saruva- dEvO — ttamanu- sarvaga |
parama- puruSha pu — raata-na jaraa- |
maraNa- varjita — vaasu-dEvaa — dyamita- roopaa-tmaa || 23-2 ||

ee na-Lina bhava — janani- lakShmI- |
j~jaana- bala bha — ktyaadi- guNa saM |
poorNa-LenipaLu — sarva-kaaladi — hari kRu-paabala-di ||
heena-LenipaLa — naMta- guNadi pu- |
raaNa- puruShage — prakRuti-ginnu sa- |
maana-renisuva — rilla- muktaa — mukta- suraroLa-ge || 23-3 ||

guNaga-La traya — maani- shreekuM- |
bhiNi ma-haa du — rgaaMbhra-NI ru-|
gmiNiyu- satyaa — shaaMti- kRuti jaya — maaya- mahalaku-mi ||
janaka-jaa kama — laala-yaa da- |
kShiNeyu- padmaa — treelo-kEshwari |
aNu ma-hattino — Liddu- upamaa — rahita-Lenisuva-Lu || 23-4 ||

ghOTa-kaasyana — maDadi-giMdali |
haaTa-kOdara — pavana-reervaru |
kOTi- guNadiM — dadhama-reniparu — aava-kaalada-li ||
KETa-pati shE — Shaama-rEMdrara |
paaTi- maaDade — shreesha-na kRupaa- |
nOTa-diMdali — sarva-roLu vyaa — paara- maaDuva-ru || 23-5 ||

puruSha- brahma vi — riMci-yu mahaa |
nmaruta- mukhya — praaNa- dhRuti smRuti |
guruva-ra mahaa — dhyaata- balavi — j~jaata- vikhyaa-ta ||
garaLa-bhugbhava — rOga- bhEShaja |
swarava-raNa vE — dastha- jeevE- |
shwara vi-bheeShaNa — vishwa-cEShTaka — veeta-bhaya bhee-ma || 23-6 ||

anila- sthiti vai — raagya- nidhi rO- |
cana vi-muktiga — naMda- dashamati |
animi-ShEshaa — nidra- shuci sa — twaatma-ka sharee-ra ||
aNuma-hadroo — paatma-kaamRuta |
hanuma-daadyava — taara- padmaa- |
sana pa-davi saM — praapta- parisara — aakha-Naashma sa-ma || 23-7 ||

maata-rishwa — brahma-ru jaga- |
nmaate-gadhamaa — dheena-reniparu |
shreeta-ruNiva — llabhanu- eervaro — Laava- kaalada-li ||
neeta- bhakti — j~jaana- balaroo- |
paati-shayadiM — diddu- cEtanaa- |
cEta-nagaLoLu — vyaapta-nenisuva — tatta-daahwaya-di || 23-8 ||

sarasa-vati vE — daatmi-kaa bhuji |
naraha-rI guru — bhakti- braahmI |
parama-sukha bala — poorNe- shraddhaa — preeti- gaaya-trI ||
garuDa- shEShara — janani- shreesaM- |
karuSha-Na jayaa — tanuje- vaaNI |
karaNa- neeyaa — make ca-turdasha — bhuvana- sanmaa-nye || 23-9 ||

kaaLi- droupadi — kaashi-jaa paaM- |
caali- shivaka — nyEMdra- sEnaa |
kaala-maanI — caMdra- vidyun — naama- bhaarati-ge ||
gaaLi- brahmara — yuvati-yaru E- |
LELu- aiva — ttoMdu- guNadiM |
keeLa-reniparu — tamma- patigaLi — giMta-laavaa-ga || 23-10 ||

hari sa-meeraa — vEsha- nara saM- |
karuSha-NaavE — shayuta- lakShmaNa |
parama- puruShana — shukla- kEshaa — vEsha- balaraa-ma ||
hara sa-daashiva — tapa a-haMkRutu |
maruta-yukta shu — kOrdhwa-paTa ta- |
tpuruSha- jaigee — Shourva- drouNI — vyaadha- durvaa-sa || 23-11 ||

garuDa- shESha sha — shaaMka-daLa shE- |
khararu- tammoLu — samaru- bhaarati- |
sarasi-jaasana — patni-gadhamaru — nooru- guNadiM-da ||
hari ma-Dadi jaaM — bavati-yoLu shree- |
taruNi-yaavE — sha vihu-deMdigu |
korate-yeniparu — garuDa- shEShari — gaiva-raidu gu-Na || 23-12 ||

neela- bhadraa — mitra-viMdaa |
mEle-nipa kaa — LiMdi- lakShaNa |
baale-yarigiM — tadhama- vaaruNi — soupa-raNi giri-jaa ||
shreela-kumiyuta — rEva-tI shree |
moola-roopadi — pEya-LenipaLu |
shaila-jaadyaru — dashagu-Naadhama — tamma- patigaLi-ge || 23-13 ||

naraha-reeraa — vEsha- saMyuta- |
nara pu-raMdara — gaadhi- kusha maM- |
dara-dyumna vi — kukShi- vaalee — iMdra-navataa-ra ||
bharata- brahmaa — viShTa- saaMba su- |
darusha-na pra — dyumna- sanakaa- |
dyaroLa-gippa sa — natku-maaranu — ShaNmu-khanu kaa-ma || 23-14 ||

eera-yidu guNa — kaDime- paarvati |
vaaru-NIyari — giMdra- kaama sha- |
reera-maani — praaNa- dasha guNa — avara- shakrani-ge ||
maara-jaarati — dakSha- guru vRu- |
traari-jaayaa — shaci swa-yaMbhuva- |
raaru- jana sama — praaNa-gavararu — hattu-guNadiM-da || 23-15 ||

kaama- putrani — ruddha- seetaa- |
raama-naanuja — shatru-hana bala- |
raama-naanuja — poutra- aniru — ddhanoLa-ganiru-ddha ||
kaama-bhaaryaa — rugma-vati sa- |
nnaama- lakShaNa — Lenisu-vaLu pou- |
lOmi- citraaM — gadeyu- taaraa — eraDu- pesaruga-Lu || 23-16 ||

taara-naamaka — trEte-yoLu see- |
taara-maNanaa — raadhi-sidanu sa- |
meera-yuktO — ddhavanu- kRuShNage — preeya-nenisida-nu ||
vaari-jaasana — yukta- drONanu |
mooru- iLeyoLu — bRuha-spatigava- |
taara-veMbaru — mahaa-bhaarata — taatpa-riyadoLa-ge || 23-17 ||

manu mu-khaadyari — giMta- pravahanu- |
guNadi-paMcaka — neeca-nenisuva |
inasha-shaaMkaru — dharma- maanavi — eraDu- guNadiM-da ||
kaniya-reniparu — pravaha-giMtali |
dinapa- shashi yama — dharma- roopaga- |
Lanudi-nadi ciM — tipudu- saMtaru — sarva- kaalada-li || 23-18 ||

maruta-naavE — shayuta- dharmaja |
karaDi- viduraru — satya-jitu ee |
reraDu- dharmana — roopa- brahmaa — viShTa- sugree-va ||
hariya- roopaa — viShTa- karNanu |
taraNi-geraDava — taara- caMdrama |
surapa-naavE — shayuta-naMgada — nenisi-koLuti-ppa || 23-19 ||

taraNi-giMdali — paada- paadare |
varuNa- neeca ma — haabhi-Shaku da- |
rdura su-ShENanu — shaMta-nuvu naa — lvaru va-ruNaroo-pa ||
suramu-nI naa — radanu- kiMcit |
tkorate- varuNage — agni- bhRugu aja- |
goraLa- patni pra — sooti- moovaru — naara-danigadha-ma || 23-20 ||

neela- dRuShTa — dyumna- lava ee |
lEli-haanana — roopa-gaLu bhRugu |
kaali-loddada — riMda- hariyanu — vyaadha-nenisida-nu ||
ELu- RuShigaLi — gutta-maru muni- |
mouLi- naarada — gadhama- moovaru |
gaaLi-yuta pra — hlaada- baahlika — raaya-nenisida-nu || 23-21 ||

janapa- karmaja — roLage- naarada |
muniya-nugraha — baladi- prahlaa- |
danala- bhRugumuni — dakSha-patnige — samane-nisikoM-ba ||
manuvi-vaswaan — gaadhi-jeervaru |
anala-giMtali — kiMci-taadhama- |
eNeye-nisuvaru — sapta-RuShigaLi — gella- kaalada-li || 23-22 ||

kamala- saMbhava — bhavare-nipa saM- |
yami ma-reeciyu — atri- yaMgira- |
sumati- pulahaa — kratu va-siShTha pu — lastya-muni swaa-haa- |
ramaNa-gadhamaru — mitra- naamaka |
dyumaNi- raahoo — yukta- bheeShmaka |
yamaLa- roopanu — taara- naamaka — nenipa- trEteyo-Lu || 23-23 ||

niRuti-geraDava — taara- durmukha |
harayu-ta ghaTO — tkacanu- praavahi |
guruma-Dadi taa — raasa-maru pa — rjanya-guttama-ru ||
karigo-raLa saM — yukta- bhagada- |
ttarasu- katthana — dhanapa- roopaga- |
LeraDu- vighnapa — caaru-dEShNanu — ashwi-nigaLu sa-ma || 23-24 ||

drONa- dhRuva dO — Shaarka- nagniyu |
praaNa-dyuvibhaa — vasuga-LeMTu kRu- |
shaanu- shrEShTha dyu — naama- vasu bhee — Shmaarya- brahmayu-ta ||
drONa-naamaka — naMda-gOpa pra- |
dhaana- agniya — nuLidu- ELu sa- |
maana-reniparu — tammo-Lage j~jaa — naadi- guNadiM-da || 23-25 ||

bheema-raivata — Oja-jaikapa- |
daama-haan bahu — roopa-kanu bhava |
vaama- ugra vRu — Shaaka-piyahir — budhni- enuti-ppa ||
ee ma-haatmara — madhya-doLage u- |
maa ma-nOhara — utta-manu dasha- |
naama-karu sama — renisi-koMbaru — tammo-LeMdeM-du || 23-26 ||

bhoorya-jaikapa — daahwa-hirbu- |
dhnIra-yidu ru — dragaNa- saMyuta |
bhoori-shravaneM — denipa- shala viru — paakSha- naamaka-nu ||
soori- kRupa vi — ShkaMbha- sahadE- |
vaa ra-NaagraNi — sOma-dattanu |
taa ra-cisida dwi — roopa- dhareyoLu — patra-taapaka-nu || 23-27 ||

dEva-shakra nu — rukra-manu mi- |
traa va-ruNa pa — rjanya- bhaga poo- |
Shaa vi-vaswaan — savitRu- dhaataa — arya-ma twa-ShTA ||
dEva-kI suta — nalli savitRu vi- |
bhaava- soosuta — bhaanu- enisuva |
jyaava-napayuta — veera-sEnanu — twaShTRu- naamaka-nu || 23-28 ||

eraDa-dhika dasha — soorya-roLu moo- |
reraDu- janaru — ttama vi-vaswaan |
varuNa- shakranu — rukra-manu pa — rjanya- mitraa-khya ||
maruta-naavE — shayuta- paaMDoo |
vara pa-raavaha — neMde-nipa kE- |
sari mRu-gapa saM — paati- shwEta — trayaru- marudaM-sha || 23-29 ||

pratibha- vaatanu — cEki-tanu vi- |
pRuthuve-nisuvanu — soumya- maaruta |
vitata- sarvO — ttuMga- gajanaa — makaru- praaNaaM-sha ||
dwitiya-paana ga — vaakSha- gavayanu |
tRutiya- vyaana u — daana- vRuShapa- |
rvatuLa- sharva — traata- gaMdhasu — maada-naru sama-na || 23-30 ||

aiva-roLagee — kuMti-bhOjanu |
aavi- naamaka — naaga- kRukalanu |
dEva-datta dha — naMja-yaru ava — taara- varjita-ru ||
aava-hOdwaha — vivaha- saMvaha |
praava-heepati — maruta- pravahani- |
gaava- kaalaku — kiMci-dadhamaru — maruta- gaNare-lla || 23-31 ||

praaNa-paana — vyaanu-daana sa- |
maana-raivara — nuLidu- marutaru |
oona-reniparu — hattu- vishwE — dEva-rivariM-da ||
soonu-gaLu eni — suvaru- aivaru |
maani-nI drou — padige- kelavaru |
kShONi-yoLu kai — kEya-reniparu — ella- kaalada-li || 23-32 ||

prativi-da shRuta — sOma- shRutakee- |
ruti sha-taanika — shRutaka- rama drou-
padi ku-varariva — roLage- abhitaa — mra pra-mukha ci-tra- ||
rathanu- gOpa ki — shOra- balareM- |
batuLa-rai gaM — dharva-riMdali |
yutaru- dharma vRu — kOda-raadija — reMdu- karesuva-ru || 23-33 ||

vivida- maiMdaru — nakula- sahadE- |
va vibhu- trishikhaa — shwiniga-LivaroLu |
divipa-naavE — shavihu-deMdigu — dyaava- pRuthwi Ru-bhu ||
pavana-suta vi — Shwakse-nanumaa- |
kuvara- vighnapa — dhanapa- modalaa- |
davaru- mitrage — kiMci-taadhama — renisi- koLutiha-ru || 23-34 ||

paava-kaagni ku — maara-nenisuva |
cyaava-na nuca — thyamuni- caakShuSha |
raiva-ta swaa — rOci-ShOttama — brahma-rudrEM-dra ||
dEva- dharmanu — dakSha-naamaka |
saava-raNi shasha — biMdu- pRuthu pree- |
yavra-tanu maaM — dhaata- gayanu ka — kutthsa- douShyaM-ti || 23-35 ||

bharata- RuShabhaja — hariNi-ja dwija |
bharata- modalaa — dakhiLa-raayaro- |
Liruti-hudu shree — viShNu- praaNaa — vEsha- pratidina-di ||
vara di-vaspati — shaMbhu-radbhuta |
karesu-vanu bali — vidhRuta- dhRuta shuci |
nere kha-loo kRuta — dhaama- modalaa — daShTa- gaMdha-rva || 23-36 ||

arasu-gaLu ka — rmajaru- vaishwaa- |
nara ga-dhama shata — guNadi- vighnE- |
shwarage- kiMci — dguNa ka-Dime bali — mukhya- paavaka-ru ||
sharabha- parja — nyaakhya- mEghapa |
taraNi- bhaaryaa — saMj~je- shaarvari- |
karana- patniyu — rOhi-NI shyaa — maleyu- dEvaki-yu || 23-37 ||

arasi- enipaLu — dharma-raajage |
varuNa- bhaaryO — Shaadi- ShaTkaru |
korate-yeniparu — paava-kaadyari — geraDu- guNadiM-da ||
eraDu- moorjana — gadhama- swaahaa |
karesu-vaLuShaa — dEvi- vaishwaa- |
narana- maDadige — dashagu-Naavara — Lashwi-nI bhaa-ryaa || 23-38 ||

sudaru-shana sha — kraadi-surayuta |
budhanu- taanabhi — manyu-venisuva |
budhani-giMda — shwiniya- bhaaryeyu — shalya- maagadha-ra ||
udara- jOShaa — dEvi-giMtali |
adhama-nenipa sha — naishcha-ranu shani |
gadhama- puShkara — karma-panu eni — suvanu- budhariM-da || 23-39 ||

udwa-haa maru — taanwi-ta viraa- |
dha dwi-tiya saM — jayanu- tuMburu |
vidwa-duttama — janame- jaya twa — ShTRuyuta- citrara-tha ||
sadwi-nuta dama — ghOSha-ka kabaM- |
dhadwa-yaru gaM — dharva-danu manu |
padma-saMbhava — yuta ki-shOra — kroora- nenisuva-nu || 23-40 ||

vaayu-yuta dhRuta — raaShTra- divijara |
gaaya-kanu dhRuta — raaShTra- nakranu |
raaya- drupadaa — vaha vi-shiShTanu — hoohu- gaMdha-rva ||
naaya-ka viraa — Dvivaha- haahaa |
j~jEya- vidyaa — dharane- ajagara |
taa ye-nisuvanu — ugra-sEnane — ugra-sEnaa-khya || 23-41 ||

bisaja- saMbhava — yukta- vishwaa- |
vasu yu-dhaama — nyutta-moujasa |
bisaja-mitraa — ryamayu-ta paraa — vasuve-nisuti-ppa ||
asama- mitraa — nwitanu- satajitu |
vasudhe- citraa — sEna- amRutaaM- |
dhasara- gaayaka — reMdu- karesuva — raava-kaalada-li || 23-42 ||

uLida- gaMdha — rvaruga-Lellaru |
bali mo-dalu gO — paala-reniparu |
iLeyo-Lage sai — raMdhri- piMgaLe — apsa-ra stree-yu ||
tilota-meyu poo –rvadali- nakulana- |
lalane- paarvati — yenisu-vaLu gO- |
kulada- gOpiya — rella- shabaree — mukhya-rapsara-ru || 23-43 ||

kRuShNa-vartmana — sutaro-Lage shata- |
dwyaShTa-saavira — streeya-ralli pra- |
viShTa-Laagi ra — maaMba- tatta — nnaama- roopada-li ||
kRuShNa-mahiShiya — roLage- ippaLu |
twaShTRu-putri ka — shEru- ivaroLu |
shrEShTha-LenipaLu — uLida- RuShigaNa — gOpi-kaa sama-ru || 23-44 ||

soonu-gaLu eni — suvaru- dEva kRu- |
shaanu-vige kratha — shuMdhi- shuci pava- |
maana- kaishika — raidu- tuMburu — oorva-shI shata-ru ||
mEna-kaa RuShi — raaya-rugaLaa- |
jaana- surarige — samare-niparu su- |
raaNa-karanaa — khyaata- divijara — janaka-renisuva-ru || 23-45 ||

paava-karigiM — tadhama-renisuva |
dEva- kulajaa — naakhya- suragaNa |
kOvi-daru naa — naa su-vidyadi — swOtta-mara ni-tya ||
sEvi-paru sa — dbhakti- poorvaka |
swaava-rarigupa — dEshi-suvaru ni- |
raava-laMbana — vimala- guNagaLa — prati di-vasada-lli || 23-46 ||

suraro-Lage vara — Naashra-magaLeM- |
beraDu- dharmaga — Lilla- tammoLu |
nirupa-maru eM — denisi-koMbaru — taara-tamyada-li ||
guruvu- shiShya — twavu Ru-ShigaLoLa- |
giruti-hudu aa — jaana-surarige |
cirapi-tRu shataa — dhamare-nisuvaru — ELu-janaruLi-du || 23-47 ||

cirapi-tRugaLiM — dadhama- gaMdha- |
rvaruga-Leniparu — dEva-naamaka |
korate-yenisuva — cakra-vartiga — LiMda- gaMdha-rva ||
nararo-Luttama — renisu-varu ha- |
nneraDu- eMbha — tteMTu- guNadali |
hiriya-reniparu — kramadi- dEvaa — vEsha- baladiM-da || 23-48 ||

dEva-tegaLiM — prEShya-reniparu |
dEva-gaMdha — rvaruga-LavariM- |
daava- kaalaku — shikShi-taru nara — naama- gaMdha-rva ||
kEva-lati sa — dbhakti- poorvaka |
yaava-diMdriya — gaLa ni-yaamaka |
shreeva-rane eM — daritu- bhajiparu — maanu-ShOttama-ru || 23-49 ||

baada-raayaNa — bhaaga-vata moda- |
laada- shaastraga — Lalli- bahu vidha |
dwaada-sha dasha su — paMca-viMshati — shata sa-hasrayu-ta ||
bhEda-gaLa pE — Lidanu- swOttama |
aadi-tEyaa — vEsha- baladi vi- |
rOdha- ciMtisa — baara-didu saa — dhujana- sammata-vu || 23-50 ||

ivaru- mukutige — yOgya-reMbaru- |
shravaNa- mananaa — digaLa- paramO- |
tsavadi- maaDuta — kELi- naliyuta — dharma- kaamaa-rtha ||
trividha- phalagaLa — pEkShi-sade shree- |
pavana-mukha dE — vaaMta-raatmaka |
pravara- tama shi — ShTEShTa-daayaka — neMdu- smarisuva-ru || 23-51 ||

nitya- saMsaa — rigaLu- guNa dO- |
Shaatma-karu bra — hmaadi- divijara |
bhRutya-reMbaru — raaja-nOpaa — diyali- hariyeM-ba ||
kRutti-vaasanu — brahma- shree vi- |
ShNutra-yaru sama — duHkha- sukha u- |
tpatti- mRuti bhaya — pELu-varu ava — taara-gaLige sa-daa || 23-52 ||

taara-tamya — j~jaana-villade |
soori-gaLa niM — disuta- nityadi |
tOru-tipparu — sujana-rOpaa — diyali- nararoLa-ge ||
kroora- karmaa — sakta-raagi sha- |
reera- pOShaNe — gOsu-gadi saM- |
caara- maaLparu — anya-dEvate — neeca-raalaya-di || 23-53 ||

dasha-pramati ma — taabdhi-yoLu suma- |
nasare-nipa ra — tnagaLa-navalO- |
kisi te-gedu praa — kRuta su-bhaaShaa — taMtu-gaLa raci-si ||
asupa-ti shree — ramaNa-ge sama- |
rpiside- sajjana — ridanu- saMtO- |
Shisali- dOShaga — LeNisa-dale kaa — ruNya-dali ni-tya || 23-54 ||

nirupa-ma shree — viShNu- lakShmI- |
sarasi-jOdbhava — vaayu- vaaNI- |
garuDa- ShaNmahi — Shiyaru- paarvati — shakra- smara praa-Na ||
guru bRu-haspati — pravaha- sooryanu |
varuNa- naarada — vahni- saptaaM- |
giraru- mitra ga — NEsha- pRuthu gaM — gaa swa-haa budha-nu || 23-55 ||

taraNi- tanaya sha — naishca-ranu pu- |
Shkarana-jaanaja — cirapi-taru gaM- |
dharuva-reervaru — dEva- maanuSha — cakra-vartiga-Lu ||
nararo-Luttama — madhya-maadhama |
karesu-varu ma — dhyOtta-maru ee- |
reraDu- jana kai — valya- maarga — sthareM-daanami-pe || 23-56 ||

saara- bhakti — j~jaana-di bRuha- |
ttaara-tamyava — naritu- paThisuva |
soori-gaLiganu — dinadi- puruShaa — rthagaLa- poorai-si ||
kaaru-Nika maru — taaMta-raatmaka |
maara-maNa jaga — naatha-viThThala |
tOri-koMbanu — hRutka-maladoLu — yOgya-tegaLari-tu || 23-57 ||

|| iti shree bRuhattaaratamya saMdhi saMpoorNaM ||
|| ( iti shree aavEshaavataarasaMdhi saMpoorNaM ) ||
|| shreekRuShNaarpaNamastu ||

24. Kalpa sadhana Sandhi – HKS

Leave a Reply

You might also like

error: Content is protected !!