Gajamukha vandisuve

Composer : Shri Vadirajaru

By Smt.Shubhalakshmi Rao

ಗಜಮುಖ ವಂದಿಸುವೆ ಕರುಣಿಸಿ ಕಾಯೊ |ಪ|

ಗಜಮುಖ ವಂದಿಪೆ ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲ ||ಅ.ಪ||

ನೀಲಕಂಠನ ಸುತ ಬಾಲಗಣೇಶನೆ
ಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ [೧]

ಪರುವತನ ಪುತ್ರಿ ಪಾರ್ವತಿಯ ಕುಮಾರ
ಗರುವಿಯಾ ಚಂದ್ರಗೆ ಸ್ಥಿರ ಶಾಪ ಕೊಟ್ಟನೆ [೨]

ಹರಿಹರರು ನಿನ್ನ ಚರಣ ಪೂಜೆಯ ಮಾಡಿ
ದುರುಳ ಕಂಟಕರನು ತರಿದು ಬಿಸುಡಿದರಯ್ಯ [೩]

ಮತಿಗೆಟ್ಟ ರಾವಣ ಪೂಜಿಸದೆ
ಸೀತಾಪತಿ ಕರದಿಂದ ಹತವಾಗಿ ಪೋದನು [೪]

ವಾರಿಜನಾಭ ಶ್ರೀ ಹಯವದನನ ಪದ
ಸೇರುವ ಮಾರ್ಗದ ದಾರಿಯ ತೋರಿಸೊ [೫]


gajamuKa vaMdisuve karuNisi kAyo |pa|

gajamuKa vaMdipe gajagauriya putra
ajana pitana mommagana mOhada bAla ||a.pa||

nIlakaMThana suta bAlagaNESane
bAri bArige ninna Bajane mADuvenayya [1]

paruvatana putri pArvatiya kumAra
garuviyA caMdrage sthira SApa koTTane [2]

harihararu ninna caraNa pUjeya mADi
duruLa kaMTakaranu taridu bisuDidarayya [3]

matigeTTa rAvaNa pUjisade
sItApati karadiMda hatavAgi pOdanu [4]

vArijanABa SrI hayavadanana pada
sEruva mArgada dAriya tOriso [5]

Leave a Reply

You might also like

error: Content is protected !!