Hyangadaru enna

Composer : Shri Pradyumna Teertharu

By Smt.Shubhalakshmi Rao

ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋ
ಸಾಗರ ಶಯನ ಕೃಷ್ಣಾ [ಪ]
ಭಾಗವತರ ಸಂಗ ಬೇಗದಿಂದಲಿ ಇತ್ತು
ಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ]

ಬಾಲೇರ ಸಲುವಾಗಿ ಕೀಳು ಜನರಲ್ಲಿ
ಶೀಲ ಜರಿದು ಯಾಚಿಸಿ,
ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ
ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧]

ಅಂಗಜನಾಟಕೆ ಹಗಲಿರುಳೆನ್ನದೆ ಪರ
ಅಂಗನೆಯರ ಕೂಡಿ,
ಮಂಗಳ ಮಹಿಮ ತುರಂಗ ವದನ ದೇವ
ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨]

ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ
ಕಾರುಣ್ಯದಲಿ ಭಕ್ತನ,
ಅರಿಷಟ್ಕರ ಕೊಂದು ಕರಿವರದನೆ ಘೋರ
ನರಕದ ಭಯ ತಪ್ಪಿಸೋ ಶ್ರೀಕೃಷ್ಣ [೩]


hyAMgAdaru enna nIne rakShisa bEkO
sAgara Sayana kRuShNA [pa]
BAgavatara saMga bEgadiMdali ittu
hOgalADisu Bavava SrI kRuShNa [a.pa]

bAlEra saluvAgi kILu janaralli
SIla jaridu yAcisi,
kALi mardhana ninna olumeya paDeyade
kAla balige sikkeno SrI kRuShNa [1]

aMgajanATake hagaliruLennade para
aMganeyara kUDi,
maMgaLa mahima turaMga vadana dEva
BaMgakke guriyAdeno SrI kRuShNa [2]

duruLara saMgavanella jaridu SrI narahare
kAruNyadali Baktana,
ariShaTkara koMdu karivaradane GOra
narakada Baya tappisO SrIkRuShNa [3]

Leave a Reply

You might also like

error: Content is protected !!