Ramanintha cheluva

Composer : Shri Khadri Narasimha

ರಾಮನಿಂಥಾ ಚೆಲುವನಮ್ಮಯ್ಯ,
ಸೀತಾ ರಾಮನಿಂಥಾ ಚೆಲುವನಮ್ಮಯ್ಯ (ಪ)

ರಾಮ ಜಗದಭಿರಾಮ ದುರಿತವಿ
ರಾಮ ಸದ್ಗುಣಧಾಮ ತಾರಕ ನಾಮ
ಮೇಘಶ್ಯಾಮ ಶ್ರೀ ರಘುರಾಮ (ಅ. ಪ.) [ಶ್ರೀ ರಾಮ]

ನೀಲಮಣಿಗಳ ಸಾಲಕುಂತಲ | ಜಾಲ ನೋಡಲು ಬಾಲಚಂದ್ರನ |
ಪೋಲುತಿರುವುದು ಫಾಲಭಾಗ ವಿಶಾಲ ಕಮಲಾಕ್ಷಿ |
ಭ್ರೂಲತೆಯಿಂದ ಕಾರ್ಮುಕವು | ಸೋಗೆ ಗಂಗಳ
ಢಾಳಗಳು ಪುಂಡರೀಕವು | ಕೂರ್ಮಸಮ
ಕಪೋಲ ಚಂಪಕ ನಾಸಿಕವು | ಲಲಿತಾ ಮುಕ್ತಾ ಫಲಗಳ |
ಸೋಲಿಸುವುದು ರದನಂಗಳ ಚೆಂದವು |
ಲಾಲಿಪ ಚೆಂದುಟಿ ನವ ಕುರುವಿಂದವು |
ಮೇಲಹ ನುಡಿಗಳು ವರ ಮಕರಂದವು
ಬಾಲಕಿ ನಸುನಗೆ ಬಹುತರ ಮಂದವು |೧|

ಮೀರಿ ಬರೆದಡೆ ಬಾರದಿರುತಿಹ |
ಕೋರೆ ಮೀಸೆಯು ಚಾರು ಚುಟುಕವು |
ದಾರವಹ ಶ್ರೀ ಕಾರಕರ್ಣಗಳೆ ರಮಾ ರಮಣಿ |
ವಾರಿಜಾರಿಯ ವದನವು-ವಕ್ತ್ರವನು ವಿ
ಚಾರಿಸೆ ಕರ್ಪೂರ ಸದನವು
ಶಂಖದಂದದಿ ತೋರುವ ಕಂಠವು ತುಳಸೀ
ಹಾರದಿಂದ ಶೋಭಿತವು |
ಭೂರಿಸುಬಾಹುಗಳು ಕರಿಕರಂಗಳು
ನೀರಜಗಳ ನಿಂದಿಸುವ ಕರಂಗಳು
ವಾರಿಜಮುಖರೇಖಾ ಜಾಲಂಗಳು
ಶ್ರೀರಂಜಿತ ಕರತಲವಾಸಂಗಳು |೨|

ಪೀನವಕ್ಷವು ಮಾನಿತತ್ರಿವಳೀನಿಬಿದ-
ದುದರಾನುಯುತ ನಾಭೀ ನಳಿನ ಸೂಕ್ಷ್ಮಾನುಸರ
ಕಟಿ-ಯಾನೃಪಗಮ್ಮ |
ಶ್ರೀನುತರಂಭಾ ಸ್ತಂಭಗಳು-ತೊಡೆಗಳು ಸ |
ಮಾನ ಜಾನು ಜಂಘೆಗಳು ಭದ್ರರೇಖೆಗಳು |
ಮಾನಸ ಸಂಭವನುಪಮಾನಗಳು ಎಲ್ಲವ ವರ್ಣಿಪೊಡೆ |
ದೀನಜನಾವನ ಸುಗುಣ ತರಂಗನು
ಮೌನೀಂದ್ರಾ ಕೃತಿಯುಳ್ಳ ಶುಭಾಂಗನು
ಏನೆಂಬೆನು ಬಹು ಕರುಣಾಪಾಂಗನು
ಮಾನಿನಿ ಶ್ರೀಮತ್ ಖಾದ್ರಿ ನೃಸಿಂಗನು |೩|


rAmaniMthA celuvanammayya,
sItA rAmaniMthA celuvanammayya (pa)

rAma jagadaBirAma duritavi
rAma sadguNadhAma tAraka nAma
mEGaSyAma SrI raGurAma (a. pa.) [shrI rAma]

nIlamaNigaLa sAlakuMtala | jAla nODalu bAlacaMdrana |
pOlutiruvudu PAlaBAga viSAla kamalAkShi |
BrUlateyiMda kArmukavu | sOge gaMgaLa
DhALagaLu puMDarIkavu | kUrmasama
kapOla caMpaka nAsikavu | lalitA muktA PalagaLa |
sOlisuvudu radanaMgaLa ceMdavu |
lAlipa ceMduTi nava kuruviMdavu |
mElaha nuDigaLu vara makaraMdavu
bAlaki nasunage bahutara maMdavu |1|

mIri baredaDe bAradirutiha |
kOre mIseyu cAru cuTukavu |
dAravaha SrI kArakarNagaLe ramA ramaNi |
vArijAriya vadanavu-vaktravanu vi
cArise karpUra sadanavu –
SaMKadaMdadi tOruva kaMThavu tuLasI
hAradiMda SOBitavu |
BUrisubAhugaLu karikaraMgaLu
neerajagaLa niMdisuva karaMgaLu
vArijamuKarEKA jAlaMgaLu
SrIraMjita karatalavAsaMgaLu |2|

pInavakShavu mAnitatrivaLInibida-
dudarAnuyuta nABI naLina sUkShmAnusara
kaTi-yAnRupagamma |
SrInutaraMBA staMBagaLu-toDegaLu sa |
mAna jAnu jaMGegaLu – BadrarEKegaLu |
mAnasa saMBavanupamAnagaLu – ellava varNipoDe |
dInajanAvana suguNa taraMganu
maunIMdrA kRutiyuLLa SuBAMganu
EneMbenu bahu karuNApAMganu
mAnini SrImat KAdri nRusiMganu |3|

Leave a Reply

You might also like

error: Content is protected !!