Anandateertharige – Dwadasha anuvada

Composer : Shri Bannanje Govindacharya [Kannada anuvada of Anandamukunda]

By Smt.Shubhalakshmi Rao

ಓ ಸಂತಸದ ಸೆಲೆಯೇ ಬಿಡುಗಡೆಯ-ನೀವವನೆ
ಓ ಅರಳುದಾವರೆಯ ಕಣ್ಗಳವನೆ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೧ ||

ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೇ
ಓಹೋ ಗೋವಿಂದನೇ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೨ ||

ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು
ಜಗಕೆ ಸಂತಸವೀವ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೩ ||

ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ
ಇವರಿಂದ ವಂದಿತನೇ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೪ ||

ದೇವಲೋಕದ ಎಲ್ಲ ಸಗ್ಗಿಗರ ಗಡಣವು
ಭಕ್ತಿಯಿಂದ ಎರಗುತಿಹ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೫ ||

ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ
ರಸವನ್ನು ಸುರಿಸುತಿಹ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೬ ||

ಇಂದಿರೆಯ ಬಗೆಯಲ್ಲಿ ಸಂತಸವನುಕ್ಕಿಸುವ
ಲೋಕೈಕ ಸುಂದರನೇ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೭ ||

ಮಂದಾರದರಳುಗಳು, ಚೆಲ್ಲಿ ಪರಿಮಳಿಸುತಿಹ
ಮಂದಿರದಲ್ಲಿರುವವನೇ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೮ ||

ಸಂತಸದ ಹೊನಲೆಂಬ, ಚೆಲುವ ಬೆಳದಿಂಗಳನು
ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ
ಆನಂದ ತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ ನಿನಗೆ ನಮನಂ || ೯ ||


O saMtasada seleyE biDugaDeya-nIvavane
O araLudAvareya kaNgaLavane
AnaMda tIrtharige tuMbu saMtasaveMba
varavitta daivatavE ninage namanaM || 1 ||

bageya suMdariyannu edeyalli hottavanE
OhO gOviMdanE ninage namanaM
AnaMda tIrtharige tuMbu saMtasaveMba
varavitta daivatavE ninage namanaM || 2 ||

caMdirana hottiruva navila sOgeya toTTu
jagake saMtasavIva ninage namanaM
AnaMda tIrtharige tuMbu saMtasaveMba
varavitta daivatavE ninage namanaM || 3 ||

bageya beLaguva caMdra suraranALuva iMdra
ivariMda vaMditanE ninage namanaM
AnaMda tIrtharige tuMbu saMtasaveMba
varavitta daivatavE ninage namanaM || 4 ||

dEvalOkada ella saggigara gaDaNavu
BaktiyiMda eragutiha ninage namanaM
AnaMda tIrtharige tuMbu saMtasaveMba
varavitta daivatavE ninage namanaM || 5 ||

ninneDege haridu baha surareDege kAruNya
rasavannu surisutiha ninage namanaM
AnaMda tIrtharige tuMbu saMtasaveMba
varavitta daivatavE ninage namanaM || 6 ||

iMdireya bageyalli saMtasavanukkisuva
lOkaika suMdaranE ninage namanaM
AnaMda tIrtharige tuMbu saMtasaveMba
varavitta daivatavE ninage namanaM || 7 ||

maMdAradaraLugaLu, celli parimaLisutiha
maMdiradalliruvavanE ninage namanaM
AnaMda tIrtharige tuMbu saMtasaveMba
varavitta daivatavE ninage namanaM || 8 ||

saMtasada honaleMba, celuva beLadiMgaLanu
nammeDege hariyisuva ninage namanaM
AnaMda tIrtharige tuMbu saMtasaveMba
varavitta daivatavE ninage namanaM || 9 ||

Leave a Reply

You might also like

error: Content is protected !!