Tangalodeyare – Govinda Wodeyaru

Composer : Shri Gurugovinda dasaru

https://mannurcharitre.blogspot.com/search/label/govindwadeyaru

Brindavana – Mannur
Aradhane – Kartika Shukla Ashtami
Bidi Sanyasi

ತಂಗಳೊಡೆಯರೆ ನಿಮ್ಮ | ಮಹಿಮೆಗೇನೆಂಬೆ
ಅಂಗವನೆ ಮರೆ ಮಾಚಿ | ಮಂಗಳವ ಕೊಂಡಾ [ಪ]

ನಾಮ ನಿರ್ದೇಶ ಜನ | ಸ್ತೋಮಕಾಕರವೆಂದು
ನಾಮವನೆ ತೊರೆಯುತ್ತ | ಗೂಢ ಭಾವದಲೀ |
ಭೀಮತೀರದಿ ನಿಂದು | ತಪವಗೈಯುತಲಿರುವೆ
ಸೀಮೆ ಮೀರಿದ ಮಹಿಮ | ದಯ ತೋರೊ ಎನಗೆ [೧]

ವೇದೇಶತೀರ್ಥ ಗುರು | ಮಾಧವಸುತೀರ್ಥ ಬಳಿ
ಸಾದರದಿ ವಾಸಿಸುತ ಸಾಧಿಸಿಹೆ ಗತಿಯಾ |
ಬಾದರಾಯಣ ಬೋಧ | ಮೋದದಿಂ ತಿಳಿಸುತ್ತ
ಸಾಧನವ ಗೈಸೆನಗೆ | ಹೇ ದಯಾಪೂರ್ಣಾ [೨]

ವೈರಾಗ್ಯ ಹರಿ ಭಕುತಿ | ವೀರ ಮೂರುತಿ ಎನಿಸಿ
ಮಾರನ್ನ ನೀ ಗೆಲಿದು | ಮೋಕ್ಷ ಕಾಮೀ |
ಸಾರತಮನೂ ಗುರೂ ಗೋವಿಂದವಿಟ್ಠಲೆಂದು
ಬಾರಿಬಾರಿಗೆ ಸ್ಮರಿಸಿ | ಆನಂದಗೊಳ್ವಾ [೩]


taMgaLoDeyare nimma | mahimegEneMbe
aMgavane mare mAci | maMgaLava koMDA [pa]

nAma nirdESa jana | stOmakAkaraveMdu
nAmavane toreyutta | gUDha BAvadalI |
BImatIradi niMdu | tapavagaiyutaliruve
sIme mIrida mahima | daya tOro enage [1]

vEdESatIrtha guru | mAdhavasutIrtha baLi
sAdaradi vAsisuta sAdhisihe gatiyA |
bAdarAyaNa bOdha | mOdadiM tiLisutta
sAdhanava gaisenage | hE dayApUrNA [2]

vairAgya hari Bakuti | vIra mUruti enisi
mAranna nI gelidu | mOkSha kAmI |
sAratamanU gurU gOviMdaviTThaleMdu
bAribArige smarisi | AnaMdagoLvA [3]

You might also like

error: Content is protected !!