Tulasi Sankeertane – Composer : Shri Vadirajaru
ಗೋವಿಂದ ಗೋವಿಂದ ರಾಮ
ಗೋವಿಂದ ನಾರಾಯಣ |
ಗೋವಿಂದ ಗೋಪಾಲಕೃಷ್ಣ |
ಗೋವಿಂದ ನಾರಾಯಣ|
ಎನ್ನೊಡೆಯ ಹಯಗ್ರೀವ ಅನುದಿನ ನೆನೆದರೆ |
ಪುಣ್ಯ ಹೀನರಿಗೆ ದೊರಕೊಂಬುದೆಲೆ ಮನುಜ |ಪ|
ಭಕ್ತಿ ಬೇಕು ಪರಮ ವಿರಕ್ತಿ ಬೇಕು ಹರಿ ತನ್ನಿಂ |
ದುತ್ತಮ ಮತ್ತೊಬ್ಬನೆಂಬ ನೆನಹಿರ ಬೇಕು |
ಮೊತ್ತದಿಂದ್ರಿಯಂಗಳ ನಿಗ್ರಹ ಬೇಕು ಬೊಮ್ಮಾದಿಗಳ |
ಉತ್ತಮರೆನ್ನಿಂದ ನೃತ್ಯ ಅಚ್ಯುತಂಗೆ ಇರಬೇಕು |೧|
ಅರಿಷಡ್ವರ್ಗದ ವಿಜಯ ಬೇಕು ಗುರುಕುಲ ನಿಲಯ |
ಗುರು ಮಧ್ವಮತ ಬೇಕು ಗುರು ಭಕ್ತಿ ಬೇಕು |
ಹರಿಯ ಡಿಂಗರಿಗರ ಸಂಗ ಬೇಕು ಶಂಖ ಚಕ್ರ |
ಧರನಾಗಿರಬೇಕು ಸ್ವರೂಪ ಯೋಗ್ಯತಾ ಬೇಕು |೨|
ವೇದಾಭ್ಯಾಸವು ಬೇಕು ಅದರರ್ಥ ಹರಿಯೆಂಬ |
ಬೋಧವಿರಬೇಕು ಖಳರಳಿಯಲು ಬೇಕು |
ವಾದಿರಾಜನೊಡೆಯ ಶ್ರೀ ಹಯವದನನ ದಿವ್ಯ |
ಪಾದವ ನಂಬಿರಬೇಕಿಹ ಪರಾದಿಗಳ ಬಯಸುವರೆ |೩|
gOviMda gOviMda rAma
gOviMda nArAyaNa |
gOviMda gOpAlakRuShNa |
gOviMda nArAyaNa|
ennoDeya hayagrIva anudina nenedare |
puNya hInarige dorakoMbudele manuja |pa|
Bakti bEku parama virakti bEku hari tanniM |
duttama mattobbaneMba nenahira bEku |
mottadiMdriyaMgaLa nigraha bEku bommAdigaLa |
uttamarenniMda nRutya acyutaMge irabEku |1|
ariShaDvargada vijaya bEku gurukula nilaya |
guru madhvamata bEku guru Bakti bEku |
hariya DiMgarigara saMga bEku SaMKa cakra |
dharanAgirabEku svarUpa yOgyatA bEku |2|
vEdAByAsavu bEku adarartha hariyeMba |
bOdhavirabEku KaLaraLiyalu bEku |
vAdirAjanoDeya SrI hayavadanana divya |
pAdava naMbirabEkiha parAdigaLa bayasuvare |3|
