Shri Madhwamata

Composer : Shri Pranesha dasaru

By Smt.Shubhalakshmi Rao

ಶ್ರೀ ಮಧ್ವಮತವೆಂಬ ಕ್ಷೀರಪಾರಾವಾರ |
ಸೋಮನೆನಿಸುತಿಹ ವರದೇಂದ್ರ ಕರಸಂಜಾತ |
ನೀ ಮಹಿಯೊಳಾವಾವ ಪರಿ ಕಾಣಿಸುವ ನೋಡಿ
ರಾಮಪದ ಜಲಜ ಭೃಂಗ [ಪ]

ಕುಂಡಲಿಯೊ ಭಾರತಿಯೊ ಈಶನೊ ಎಂದು ದ್ವಿಜ|
ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |
ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತ
ಕೂಡದಿದು ಯೆನಲು ಪೇಳ್ವೆ |
ದಂಡಧರ ಯೋಗದಾರ್ಢ್ಯದೊಳು ತಾ ಅಹಿಯಂತೆ |
ಪಂಡಿತೇಶನು ವಾಗ್ ಬಲದಲಿ ಭಾರತಿಯಂತೆ |
ರುಂಡಮಾಲಿಯ ತೆರದಿ ತೋರುವರು,
ವೈರಾಗ್ಯದಲಿ ನಿರುತ ಭಜಿಸುವರಿಗೆ [೧]

ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |
ಬುಧ ಜನಕೆ ತೋರ್ವ ನಾಲ್ಮೊಗ ಖಗ ಸಹಸ್ರಾಕ್ಷ |
ಇದು ಯೆಂತು ಸಾಮ್ಯವೆನೆ ಸರ್ವಜನ
ಯೋಗ್ಯತೆಯನರಿವಂತೆ ಧಾತನಂತೇ |
ಮದಡ ಜ್ಞಾನಾಖ್ಯ ತಮವಳಿವಲ್ಲಿ ರವಿಯಂತೆ |
ಪದುಮೇಶನ ಗುಣವ ವಿಚಾರಿಸ-ಲನೇಕಾಕ್ಷ |
ಚದುರನೆನುವ ಬಗೆಯಿಂದೊಪ್ಪುತಿಹ ನಮ್ಮ ಗುರುವ
ತುತಿಸುವೊದಕ್ಕೆನ್ನ ವಶವೆ [೨]

ಕಡಲೊ ಸುರಧೇನುವೊ ಹಂಸನೋ ಯೆಂಬಂತೆ |
ಪೊಡವಿಗೆ ವಿರಾಜಿಸುವ ಉದಕ ಮಯವಾಗಿಹುದು |
ಕಡು ಚತುಷ್ಪಾದಿ ಅಂಡಜ ಜಂತು ಈ ಸಾಮ್ಯ
ಸಲ್ಲದೆನೆ ಸಲ್ವ ವಿವರ |
ಒಡಲಿನೊಳು ಪ್ರಾಣೇಶ ವಿಠ್ಠಲ ಮಣಿ ಪೊಳೆವುತಿದೆ |
ಕೊಡುವ ಬೇಡಿದ ವರವ ಅಮರ-ರಾಕಳಿನಂತೆ |
ಕುಡಿವಂತೆ ಹಂಸ ಪಯ ಜಲವುಳಿದು ದೋಷವೆಣಿಸದೆ
ಬಿನ್ನಪವ ಲಾಲಿಪ [೩]


SrI madhvamataveMba kShIrapArAvAra |
sOmanenisutiha varadEMdra karasaMjAta |
nI mahiyoLAvAva pari kANisuva nODi
rAmapada jalaja BRuMga [pa]

kuMDaliyo BAratiyo ISano eMdu dvija|
ShaMDa tutisuvudu SrI BuvanEMdra rAyarA |
kaMDu padayukta puruShAkAra SiKArahita
kUDadidu yenalu pELve |
daMDadhara yOgadArDhyadoLu tA ahiyaMte |
paMDitESanu vAg baladali BAratiyaMte |
ruMDamAliya teradi tOruvaru,
vairAgyadali niruta Bajisuvarige [1]

vidhiyo arkano iMdranO eMba teradiMda |
budha janake tOrva nAlmoga Kaga sahasrAkSha |
idu yeMtu sAmyavene sarvajana
yOgyateyanarivaMte dhAtanaMtE |
madaDa j~jAnAKya tamavaLivalli raviyaMte |
padumESana guNava vicArisa-lanEkAkSha |
caduranenuva bageyiMdopputiha namma guruva
tutisuvodakkenna vaSave [2]

kaDalo suradhEnuvo haMsanO yeMbaMte |
poDavige virAjisuva udaka mayavAgihudu |
kaDu catuShpAdi aMDaja jaMtu I sAmya
salladene salva vivara |
oDalinoLu prANESa viThThala maNi poLevutide |
koDuva bEDida varava amara-rAkaLinaMte |
kuDivaMte haMsa paya jalavuLidu dOShaveNisade
binnapava lAlipa [3]

Leave a Reply

You might also like

error: Content is protected !!