Composer : Shri Vijayaramachandra vittala
ನಾರಸಿಂಹ ನಾರಸಿಂಹ ನಾರಸಿಂಹ | ಪ |
ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ
ಕೃತ್ತಿ ಒತ್ತಿ, ಪರಿಹರಿಸಿ,
ಭೃತ್ಯನಾದ ಜೀವನ್ನ ತೃಪ್ತಿ ಪಡಿಸುವ ದೇವ
ಭಕ್ತವತ್ಸಲ, ನಾರಸಿಂಹ | ೧ |
ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ
ನಿಂದು ನಾ ನಿನ್ನ, ಬೇಡೆ,
ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ
ಮಂದೀಗೆ ಕುಂದು ಮಾಡ ಬ್ಯಾಡೆಂದೆ | ೨ |
ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ
ನೊಂದ ಪರಿ ಪೇಳಲಾರೆ,
ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ
ತಂದೆ ಈ ಸುತನ ಕಾಯೋ | ೩ |
ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ
ಎಂದು ಎನ್ನನಗಲದೆ,
ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು
ವಂದಿಸುವೆನು ನಾರಸಿಂಹ | ೪ |
ಮುಂದಾದರು ಹೃನ್ ಮಂದಿರದಿ ನೆಲೆಗೊಂಡು
ಸಂದರ್ಶನವನೀಯೋ ದೇವ,
ಕಂದರ್ಪಹರ ವಿಜಯರಾಮಚಂದ್ರವಿಟ್ಟಲರೇಯ
ವಂದೆ ಭಕ್ತಿಯ ಪಾಲಿಸೊ | ೫ |
nArasiMha nArasiMha nArasiMha | pa |
nityadali baruva apamRutyuvina bAdheya
kRutti otti, pariharisi,
BRutyanAda jIvanna tRupti paDisuva dEva
Baktavatsala, nArasiMha | 1 |
aMdu svapnadi baMde dvaMdva pAdakkeragi
niMdu nA ninna, bEDe,
saMdhisi krUra dRuShTiyiMda nODi
maMdIge kuMdu mADa byADeMde | 2 |
aMdinAraBya balu baMdhanake silki nA
noMda pari pELalAre,
hiMdina aGaveNisade baMdu nAri sahita
taMde I sutana kAyO | 3 |
taMde tAyiyu nIne, baMdhu baLagavu nIne
eMdu ennanagalade,
baMdu nelasennalli aj~jAna koDadiru
vaMdisuvenu nArasiMha | 4 |
muMdAdaru hRun maMdiradi nelegoMDu
saMdarSanavanIyO dEva,
kaMdarpahara vijayarAmacaMdraviTTalarEya
vaMde Baktiya pAliso | 5 |

Leave a Reply
You must be logged in to post a comment.