-
Gunja narasimha Pahi
Composer : Shri Uragadri vittala dasaru ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ [ಪ]ಅಜಭವ ಫಣಿ ದ್ವಿಜರಾಜ ಸುಪೂಜಿತತ್ರಿಜಗದೊಡೆಯ ನರಹರಿಯೆ ದುರಿತ ಹರಾ [ಅ.ಪ] ಪಟುತರ ಭಾಧೆ ಸಂಕಟಪಡುತಲಿ ಸುರ-ಕಟಕ ನುತಿಸಿ ಕೋಟಿತಟಿತ್ಕಾಯನೆಕೋಟಿ ಖಳರೆದೆ ಕುಟ್ಟಿ ಯಮಪುರಕಟ್ಟಿ ದಿಟ್ಟತನದಲಿ ನಿಶಾಚರನಳುಹಿದೆ (೧) ಸಿಡಿಲೋಪಮ ಘುಡು ಘುಡಿಸುತ ಕಿಡಿಯಕಡೆಗಣ್ಣಿಂದಲಡಿಗಡಿಗುಗುಳುತಕೂಡಿನಖಗಳ ನೀಡಿ ಶಿರವನ-ಲ್ಲಾಡಿಸಿ ಜಡಜಂಗಮರ ನಡುಕ ಬಿಡಿಸಿದೆಯೊ (೨) ಅಡಿಗಡಿಗೆಡರನು ಪಡುತಿಹ ಹುಡುಗನದೃಢತರ ಭಕುತಿಯ ನುಡಿಯುನು ಕೇಳುತನೋಡಿ ಅಭಯವ ನೀಡಿ ನೀ ದಯಮಾಡಿ ಬಿಡುಗಣ್ಣರನು ಬಿಡದೆ ಸಲಹಿದೆ (೩)…
-
Swami narasimha
Composer : Shri Prasannavenkata dasaru ಸ್ವಾಮಿ ನರಸಿಂಹ ಶರಣು ಶರಣುಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ] ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತ ಗಾತ್ರ ಭಜಕ ಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ [೧] ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತದನುಜ ಹಿರಣ್ಯಕಹರ್ತ ದೀನನಾಥಕನಕ ಜಠರನ ಜನಕ ಕರುಣಾಂಕ ಕ್ರೂರಮುಖಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ [೨] ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನಮುದ ಶಾಂತ ಪರಿಪೂರ್ಣ ಮೂರ್ತಿ ಪುಣ್ಯಪ್ರದನಾಮ ನವರೂಪ ಪತಂಗಾನಂತ ಪ್ರದೀಪ ನಿನ್ನಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ [೩]…
-
Karunisu narahari
Composer : Shri Purandara dasaru ಕರುಣಿಸು ನರಹರಿ ಹರಿಗೋವಿಂದನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆಭೂತ ಬಡೆದವನೆಂದು ಕರೆಯುವರೊಚಾತುರ್ಯದಿಂದಲಿ ಮಾತುಗಳಾಡಲುಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ |೧| ಬಲು ಚೆನ್ನಿಗತನವ ತಾನು ಮಾಡಲುಬಲು ಹಮ್ಮಿಗನೆಂದು ಬೈಯುವರೊಸುಲಭದಿಂದಲಿ ನಿಗರ್ವಿಯಾಗಿದ್ದರೆಕಲಿಯುಗದಲಿ ಮಂದಮತಿ ಯೆಂಬುವರಯ್ಯ |೨| ಮಡಿಯೆಂದು ನೇಮವ ಮಾಡುತಲಿದ್ದರೆಮಡಿಯವನೆಂದು ಬೈಯುವರಯ್ಯಮಡಿನೇಮ ಜಪತಪ ಬಿಟ್ಟು ತಿರುಗಲಾಗಿನಡತೆಹೀನನೆಂದು ನಿಂದಿಸುತಿಹರೊ || ನಿಷ್ಠೆಲಿ ಒಪ್ಪತ್ತೂಟವನುಂಡರೆನಿಷ್ಠೆಯತನ ಸುಟ್ಟಿತೆಂಬೋರುಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆಹೊಟ್ಟೆಹೊರಕನೆಂದು ಬೈಯುವರಯ್ಯ |೩| ನರಲೋಕದೊಳಗಿನ್ನು ಪುಟ್ಟಿಸದಿರು , ನಿನ್ನಮೊರೆಯ ಹೊಕ್ಕೆನೊ ಮೋಕ್ಷದಾಯಕನೆಅರವಿಂದನಯನ ಶ್ರೀಪುರಂದರವಿಠಲಕರುಣದಿಂದಲಿ…
