-
Karunisu narahari
Composer : Shri Purandara dasaru ಕರುಣಿಸು ನರಹರಿ ಹರಿಗೋವಿಂದನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆಭೂತ ಬಡೆದವನೆಂದು ಕರೆಯುವರೊಚಾತುರ್ಯದಿಂದಲಿ ಮಾತುಗಳಾಡಲುಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ |೧| ಬಲು ಚೆನ್ನಿಗತನವ ತಾನು ಮಾಡಲುಬಲು ಹಮ್ಮಿಗನೆಂದು ಬೈಯುವರೊಸುಲಭದಿಂದಲಿ ನಿಗರ್ವಿಯಾಗಿದ್ದರೆಕಲಿಯುಗದಲಿ ಮಂದಮತಿ ಯೆಂಬುವರಯ್ಯ |೨| ಮಡಿಯೆಂದು ನೇಮವ ಮಾಡುತಲಿದ್ದರೆಮಡಿಯವನೆಂದು ಬೈಯುವರಯ್ಯಮಡಿನೇಮ ಜಪತಪ ಬಿಟ್ಟು ತಿರುಗಲಾಗಿನಡತೆಹೀನನೆಂದು ನಿಂದಿಸುತಿಹರೊ || ನಿಷ್ಠೆಲಿ ಒಪ್ಪತ್ತೂಟವನುಂಡರೆನಿಷ್ಠೆಯತನ ಸುಟ್ಟಿತೆಂಬೋರುಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆಹೊಟ್ಟೆಹೊರಕನೆಂದು ಬೈಯುವರಯ್ಯ |೩| ನರಲೋಕದೊಳಗಿನ್ನು ಪುಟ್ಟಿಸದಿರು , ನಿನ್ನಮೊರೆಯ ಹೊಕ್ಕೆನೊ ಮೋಕ್ಷದಾಯಕನೆಅರವಿಂದನಯನ ಶ್ರೀಪುರಂದರವಿಠಲಕರುಣದಿಂದಲಿ…
