Narasimha

  • Narasimhana bhajisi

    Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ ಜಲ ಚ –ರಾವಳಿಯ ಬಳಲಿಕಿಯ ನೋಡಿ ನಡುಗೀ [೧] ಘೋರಾಟವಿಗೆ ಸಮವಸಾರ ಸಂಸಾರದೊಳು |ಭೂರಿ ಸುಖವೆಂದು ಮೂರ್ಖರು ಕೆಡುವರು |ಕ್ರೂರ ಹುಲಿ ಚೋರ ನಿಭ ತನು ಸಂಬಂಧಿಗಳ ಧರ್ಮ |ಸೂರಿಗಾರರ ಸುಲಿಗಿ ಗಂಜಿ ನಡುಗೀ [೨] ಸ್ವಚ್ಛೋದಕದ ಥೆರೆ ಮರೀಚಕಾ ಜಲಕೆ…

  • Saaku narahari

    Composer : Shri Harapanahalli bheemavva ಸಾಕು ನರಹರಿ ಭವದ ಬವಣೆಯಿಂದ್ಯಾಕೆ ಬಳಲಿಸುತಿರುವೆ ಹರಿ ಹರಿ |ಶ್ರೀಕಮಲಾಪತಿ ಶರಣ ಜನರೊಳ-ಗ್ಹಾಕಿ ಪೊರೆಯೆನ್ನ ಹರಿ ಹರಿ [ಪ] ದೊರೆಯೆ ನೀನಿರಲನ್ಯರಿಗೆ ಬಾಯಿತೆರೆಯಲ್ಯಾಕಿನ್ ಹರಿ ಹರಿಪರಮಾಪ್ತ ನೀನಿರಲು ಕಾಣದೆಪರರಿಗೆ ಆಲ್ಪರಿದೆ ಹರಿ ಹರಿ [೧] ಪುತ್ಥಳಿ ಮನೆಯಲ್ಲಿರಲುಹಿತ್ತಾಳೆ ಬಯಸುವೆನು ಹರಿಹರಿಬಿಟ್ಟು ನಿನ್ನೀಗನ್ಯ ವಿಷಯದಿಂದ್ಹುಟ್ಟುವುದೆ ಸುಖ ಹರಿ ಹರಿ [೨] ಬೇಡಿದ್ವರಗಳ್ ಕೊಡುವೊ ಭೀ-ಮೇಶ ಕೃಷ್ಣ ನೀನಿರಲು ಹರಿಹರಿನೋಡಿ ಸುಖಿಸದೆ ಬಿಟ್ಟು ಕನ್ನಡಿಗೋಡೆಗಡರುವೆನ್ ಹರಿ ಹರಿ [೩] sAku narahari Bavada…

  • Banda Simha narasimha

    Composer : Shri Purandara dasaru ಬಂದ ಸಿಂಹ ನಾರಸಿಂಹ ಬಂದ ನೋಡೇ |ಇಂದಿರೇಶ ಕಂಬ ಒಡೆದು ಬಂದ ನೋಡೇಅಕೋ ಬಂದ ನೋಡೇ, ಇಕೋ ಬಂದ ನೋಡೇ |ಅ.ಪ| ಎಲ್ಲಿ ನೋಡಿದರಲ್ಲಿ ನಾರಸಿಂಹ ನೋಡೇಎಲ್ಲರಲ್ಲಿ ಮೇಲೆ ಎಂಬ ಚೆಲುವ ನೋಡೇಎಲ್ಲರನ್ನು ಹರಿಗೆ ಎಂದು ದಾನ ಮಾಡೇ ||೧||ಬಂದ ಸಿಂಹ ನಾರಸಿಂಹ ಬಂದ ನೋಡೇಅಕೋ ಬಂದ ನೋಡೇ, ಇಕೋ ಬಂದ ನೋಡೇ ಹರಿಯು ಕಂದನ ಕರೆಗೆ ಓಡಿ ಬಂದ ನೋಡೇಧರಿಸಲಿಲ್ಲ ಪೂರ್ಣ ಸಿಂಹ ವೇಷ ನೋಡೇ ||೨||ಅಕೋ ಬಂದ…

error: Content is protected !!