-
Eetane Kaniro Madhwamuni
Composer : Shri Vadirajaru ಈತನೆ ಕಾಣಿರೊ ಮಧ್ವಮುನಿ || ಪ || ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ- |ಸರಿಯಂತೆ ಚರಿಸುತ್ತ ||ಹರಿಯೇ ಸರ್ವೋತ್ತಮನೆಂಬ ಘೋಷಗಳಿಂದ |ದುರುಳ ವಾದಿಗಳೆಂಬ ನರಿಗಳೋಡಿಸಿದಾತ || ೧ || ಸಕಲಾಗಮಗಳೆಂಬ ಶರಧಿಯೊಳಗೆ |ಯುಕುತಿಯಿಂದಲಿ ಮಥಿಸಿ ||ಅಕಳಂಕ ಶ್ರೀಹರಿಯೆಂಬ ರತ್ನವ ಕಂಡು |ಮುಕುಟದೊಳಿಟ್ಟು ಲೋಕದಿ ಮೆರೆಸಿದಾತ || ೨ || ವೇದಸಾರವೆಂಬ ಈಶ ತತ್ತ್ವವಾದ |ಸುಧೆಯ ಕಲ್ಪಿಸಿಕೊಂಡು ||ಆದಿಮೂರುತಿ ಶ್ರೀಹಯವದನನ ದಿವ್ಯ – |ಪಾದ ಸೇವಕನಾದ ಮಧ್ವಮುನಿಯೆಂಬಾತ || ೩ || Itane…
-
Nenevenu Anudina
Composer : Shri Purandara dasaru ನೆನೆವೆನು ಅನುದಿನ ನಿಮ್ಮ ಮಹಿಮೆಯನು,ಮಧ್ವರಾಯ | ಸನಕಾದಿವಂದ್ಯ ಸೇವಿತ ಪದಾಬ್ಜ |ಮಧ್ವರಾಯ [ಅ.ಪ] ಕಲಿಮಲದಿಂ ಕಲುಷಿತವಾಗಲು ಜ್ಞಾನ , ಮಧ್ವರಾಯನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ |೧| ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ಯೋ, ಮಧ್ವರಾಯಸಾವಿರ ಬೀಜರೂಪದಿ ಸಾಲದ ಹಣವಿತ್ತ್ಯೋ , ಮಧ್ವರಾಯ |೨| ದಶ ಉಪನಿಷದ್ಗೀತ ಶ್ರುತಿಭಾಷ್ಯ ಮಾಡಿದ್ಯೋ, ಮಧ್ವರಾಯಸುಶಾಸ್ತ್ರ ತಾತ್ಪರ್ಯ ಪ್ರಕರಣ ರಚಿಸಿದ್ಯೋ, ಮಧ್ವರಾಯ |೩| ಸುಜನರ ಹೃದಯದಿ ಸೇರಿದ್ದ ತಮವನ್ನು, ಮಧ್ವರಾಯನಿಜ ಜ್ಞಾನ ರವಿಯಾಗಿ ಉದಿಸಿ ನೀ ಹರಿದ್ಯೆಯ, ಮಧ್ವರಾಯ…
-
Ninnane nambide
Composer : Shri Vijayadasaru ನಿನ್ನನ್ನೇ ನಂಬಿದೆ ಅನ್ಯರೊಬ್ಬರ ಕಾಣೆ | ಗುರುಮಧ್ವಮುನಿರಾಯಾ || ಪ ||ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಗುರುಮಧ್ವಮುನಿರಾಯಾ ||ಅ ಪ|| ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು | ಗುರುಮಧ್ವಮುನಿರಾಯಾ |ಗತಿಯ ಕಲ್ಪಿಸಿ ಸಜ್ಜನ ತತಿಗಳ ಕಾಯ್ದೆ | ಗುರುಮಧ್ವಮುನಿರಾಯಾ ||೧|| ತಂದೆ ತಾಯಿ ಬಂಧು ಬಳಗ ಎಲ್ಲವು ನೀನೆ | ಗುರುಮಧ್ವಮುನಿರಾಯಾ |ಎಂದೆಂದಿಗೂ ನಿನ್ನ ಪೊಂದಿರುವಂತೆ ಮಾಡೈ | ಗುರುಮಧ್ವಮುನಿರಾಯಾ ||೨|| ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ |ಗುರುಮಧ್ವಮುನಿರಾಯಾ…
