-
Ahudo hanumanta
Composer : Shri Vadirajaru ಅಹುದೋ ಹನುಮಂತ ನೀನಹುದೊ ಬಲವಂತನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀನಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ ತಂದ್ಯೊ ಸಕಲ ಕಪಿಗಳಿಗೆಮಂಜುಭಾಷಣ ನೀನು ಶರಧಿಯನು ದಾಟಿದೆಯೊಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧|| ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನುಪಂಥವನಾಡಿ ದಾಯಾದಿಯರೊಡನೆಕಂತುಪಿತನ ಕೂಡಿ ಕೌರವರ ಗೆಲಿದ್ಯೊಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨|| ಮಧ್ವಾವತಾರದಲಿ ಮುನಿವೇಷವನು ತಾಳಿಅದ್ವೈತವೆಂಬೊ ಅರಣ್ಯವನು ತರಿದೆಮಧ್ವ ಶಾಸ್ತ್ರವೆಂಬೊ ಮತವ ನಿರ್ಣೈಸಿದೆಮುದ್ದು ಹಯವದನದಾಸ ನೀನಹುದೊ…
-
Karava mugida mukhyaprana
Composer : Shri Gopaladasaru ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ||ಪ|| ಜೀವೇಶರೈಕ್ಯವು ಜಗತು ಮಿಥ್ಯೆ ಯೆಂದುಈ ವಿಧ ಹೇಳುವ ಮಾಯಿಗಳಳಿಯೆಂದು ||ಇಲ್ಲಿ ಮಾತ್ರ ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದು ಹಲ್ಲು ಮುರಿಯೆಂದು |೧| ಪರಿಪರಿ ಭಕ್ತರ ಹೃದಯ ಕಮಲದಲ್ಲಿನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು ||ಹರಿ ಮಾಡೊ ವ್ಯಾಪಾರ ಬಲ್ಲ ಕಾರಣದಿಂದಸಿರಿ ಗೋಪಾಲವಿಠಲಗೆ ಎರಗಿ ನಿಂದು |೨| karava mugida muKyaprANaduruLara sadedu SaraNara poreyeMdu ||pa|| jIvESaraikyavu jagatu mithye…
-
Tatva suvvali – Prana Devara stotra
Composer : Shri Jagannatha dasaru ಶ್ರೀ ಪ್ರಾಣದೇವರ ಸ್ತುತಿ ಹನುಮಭೀಮಾನಂದಮುನಿರಾಯ ಎನ್ನ ದು- ರ್ಗುಣಗಳೆಣಿಸದಲೆ ಸಲಹೆಂದು |ಸಲಹೆಂದು ಬಿನ್ನೈಪೆ ವಿ- ಜ್ಞಾನರೂಪ ವಿಜತಾತ್ಮ || ೫೨ || ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತಸಾನುರಾಗದಲಿ ನಮಿಸುವೆ |ನಮಿಸುವೆನು ಮೂಜಗ-ತ್ರಾಣ ಪಂಚಾಸ್ಯ ಪರಮೇಷ್ಠಿ || ೫೩ || ಚತುರವಿಂಶತಿ ತತ್ವಪತಿಗಳಾಳುವ ಶಕ್ತನತಿಸುವೆನು ನಿನ್ನ ಚರಣಕ್ಕೆ |ಚರಣಕಮಲವ ತೋರಿ ಕೃತಕೃತ್ಯನೆನಿಸೋ ಕೃಪೆಯಿಂದ || ೫೪ || ತ್ರಿದಶತ್ರಿಂಶತಿರೂಪ ಸುದತಿಯಿಂದೊಡಗೂಡಿ | ಪದುಮಜಾಂಡದೊಳು ಸರ್ವತ್ರ |ಸರ್ವತ್ರ ಭಕುತರ ಬಡಿಗನಾಗಿದ್ದು ಸಲಹುವಿ || ೫೫…
