Composer : Shri Vadirajaru
ಅಹುದೋ ಹನುಮಂತ ನೀನಹುದೊ ಬಲವಂತ
ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ||
ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ
ಅಹುದೊ ಮಧ್ವಮತಕೆ ಬಿರುದು ನೀನಹುದೊ ||ಅ.ಪ||
ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ
ಮಂಜುಭಾಷಣ ನೀನು ಶರಧಿಯನು ದಾಟಿದೆಯೊ
ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧||
ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಪಂಥವನಾಡಿ ದಾಯಾದಿಯರೊಡನೆ
ಕಂತುಪಿತನ ಕೂಡಿ ಕೌರವರ ಗೆಲಿದ್ಯೊ
ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨||
ಮಧ್ವಾವತಾರದಲಿ ಮುನಿವೇಷವನು ತಾಳಿ
ಅದ್ವೈತವೆಂಬೊ ಅರಣ್ಯವನು ತರಿದೆ
ಮಧ್ವ ಶಾಸ್ತ್ರವೆಂಬೊ ಮತವ ನಿರ್ಣೈಸಿದೆ
ಮುದ್ದು ಹಯವದನದಾಸ ನೀನಹುದೊ ||೩||
ahudO hanumaMta nInahudo balavaMta
nInahudO muKyaprANa mUlaguru ahudo ||pa||
ahudo dharaNiya myAle divAkarana praBeyaMte
ahudo madhvamatake birudu nInahudo ||a.pa||
aMjaneya garBadali udBavisidyo nInu
saMjIvanava taMdyo sakala kapigaLige
maMjuBAShaNa nInu Saradhiyanu dATideyo
kaMjAkShi sItege uMguravanitte ||1||
kuMtiya garBadali udBavisidyo nInu
paMthavanADi dAyAdiyaroDane
kaMtupitana kUDi kauravara gelidyo
saMtOShadiMda sAmrAjya kaigoMDe ||2||
madhvAvatAradali munivEShavanu tALi
advaitaveMbo araNyavanu taride
madhva SAstraveMbo matava nirNaiside
muddu hayavadanadAsa nInahudo ||3||

Leave a Reply
You must be logged in to post a comment.