-
Pranadeva neenallade
Composer: Shri Jagannatha dasaru ಪ್ರಾಣದೇವ ನೀನಲ್ಲದೆ ಕಾಯ್ವರಕಾಣೆನೋ ಜಗದೊಳಗೆ , ಮುಖ್ಯ- ||ಪ|| ಪ್ರಾಣಾಪಾನ ವ್ಯಾನೋದಾನ ಸ-ಮಾನನೆನಿಪ ಮುಖ್ಯ – ||ಅ.ಪ|| ವಾಸವ ಕುಲಿಶದಿ ಘಾಸಿಸೆ ಜೀವರಶ್ವಾಸ ನಿರೋಧಿಸಿದೆ |ಆ ಸಮಯದಿ ಕಮಲಾಸನ ಪೇಳಲುನೀ ಸಲಹಿದೆ ಜಗವ ಮುಖ್ಯ- ||೧|| ಪರಿಸರ ನೀನಿರೆ ಹರಿತಾನಿಪ್ಪನೀ ಇರದಿರೆ ಹರಿ ಇರನು |ಕರಣ ನಿಯಾಮಕ ಸುರರ ಗುರುವೇ ನೀ-ಕರುಣಿಸೆ ಕರುಣಿಸುವ ಮುಖ್ಯ- ||೨|| ಅಂಗದ ಪ್ರಮುಖ ಪ್ಲವಂಗರು ರಾಮನಅಂಗನೆಯಳ ಹುಡುಕೆತಿಂಗಳು ಮೀರಲು ಕೆಂಗೆಡೆ ಕಪಿಗಳ-ಜೆಂಗುಳಿ ಪಾಲಿಸಿದೆ ಮುಖ್ಯ- ||೩||…
-
Bharateeshanige namo
Composer : Shri Varadendra vittala [ Shishyaru of Shri Gurujagannatha dasaru] ಭಾರತೀಶನಿಗೆ ನಮೋ ನಮೋ | ನಮ್ಮಭಾರವ ಪೊತ್ತಗೆ ನಮೋ ನಮೋ ||ಪ||ಚಾರುಚರಿತ ಶ್ರೀ ರಾಮ ನಾಮವಸಾರುವ ಭಕುತಗೇ ನಮೊ ನಮೊ ||ಅ.ಪ|| ಅಂಜನಿ ಪುತ್ರಗೆ ನಮೋ ನಮೋ |ಮಂಜುಳ ಗಾತ್ರಗೆ ನಮೋ ನಮೋ |ಕಂಜಾಕ್ಷಿಯ ಪದಕಂಜಕೆರಗಿ ವನಭಂಜಕ ಹನುಮಗೆ ನಮೋ ನಮೋ ||೧|| ಕುಂತಿ ಆತ್ಮಜಗೆ ನಮೋ ನಮೋ |ಸಂತರ ಪ್ರೀಯಗೆ ನಮೋ ನಮೋ |ಹಂತ ಕೌರವರ ಅಂತ ಕರ್ತಬಲವಂತ ಭೀಮನಿಗೆ…
-
Maruti kodu bhakuti
Composer : Shri Uragadri vittala ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ [ಪ]ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯ [ಅ.ಪ] ಶ್ರವಣಮಾಡಲು ಭಕುತಿ ಆವಕಾಲಕು ಇತ್ತುತವಪದದಾಸರ ದಾಸ್ಯ ಕೊಡಿಸೋ ದೇವ (೧) ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂಕೀರ್ತನ ಭಕುತಿಗೆ ಕರ್ತದಾತ ನೀನೆ (೨) ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿಕರುಣಿಸಿ ಪೊರೆಯೊ ಗುರುವರ ಸುಂದರ (೩) ಪಾದ ಸೇವೆಯ ಕೊಡು ಸಾದರದಿಂದಲಿಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ (೪) ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ (೫) ವಂದನಾಭಕುತಿ ಎನ್ನಿಂದ ನೀ ಮಾಡಿಸಿನಂದನಂದನಗಾನಂದಪಡಿಸೊ…
