-
Jaya devi jaya Bhagavad geete
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಭಗವದ್ಗೀತೆ |ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ) ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |ಸೋಹ್ಯವ ಕಾಣದೆ ತನ್ನೊಳು ತಾನೇ ಮರೆದಿರಲೀ |ಶ್ರೀಹರಿ ಮುಖದಿಂದುದಿಸಿ ಬೋಧ ಪ್ರತಾಪದಲೀ |ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ [೧] ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ [೨] ಆವನು…
-
Indu Paramananda
Composer: Shri Kakhandaki Krishna dasaru ಇಂದು ಪರಮಾನಂದ |ನಮಗ ಮುಕುಂದನ ಕೃಪೆಯಿಂದಾ |ಕಮಲ ಮಕ |ಭ್ರಮರ ಸಂಗ ಛಂದದಲಾಯಿತು [೧] ವೇಗದಿಂದಲಿ ನೋಡೀ |ಸಕಲರು | ಭಾಗವತರು ಕೂಡಿ |ಭಾಗಿರಥೀ ಪಡೆದ ನಾಗಶಾಯಿಯ |ನಿಗ ಮಾಗ ಮಯುಕ್ತದಿ | ಈಗ ಪಾಡಿದೆವೆಂದು [೨] ಸಂದಿದ ದೋಷಾದಿಗಳು ಚೂಕಿ |ಕುಂದಿ ತೊಲಗಿದವು ತಂದೆ ಮಹಿಪತಿ |ನಂದನ ಪ್ರಿಯನಾನಂದ ಕರುಣದೀ [೩] iMdu paramAnaMda |namaga mukuMdana kRupeyiMdA |kamala maka |Bramara saMga CaMdadalAyitu [1] vEgadiMdali…
-
Guru Enutali iruve
Composer : Shri Kakhandaki dasaru ಗುರುರಾಯನಾ ಮನಿಯಾ ನಾಯಿ ನಾನು [ಪ] ಗುರು ಗುರು ಎನುತಲಿ ಇರುವೆ ಬಾಗಿಲದೊಳು |ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧] ಹರಿ ಶರಣರ ಕಂಡು ಗರುವಿಸಿ ಕೆಲಿಯೆನು |ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ [೨] ಒಡೆಯನ ಮುಂದೆನ್ನಾ ಒಡಲವ ತೋರುವೆ |ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ [೩] ಹರಿನಾಮದಿಂದ ಭೋಂಕರಿಸಿ ವದರುವೆ |ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ [೪] ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ…
