-
Raghupatiya toramma
Composer : Shri Kakhandaki Krishna dasaru ರಘುಪತಿಯಾ ತೋರಮ್ಮಾ |ರಾಜೀವಾಂಬರೆ ಬಾರಮ್ಮಾ [ಪ] ಭಕುತರಾ-ಭೀಷ್ಟೇಯನು | ಪೂರಿಸುವನಾಅನುದಿನ ಕಾವನಾ | ನಿನ್ನಯ ಜೀವನಾ [ಅ.ಪ] ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ |ದುರಿತ ಭಂಜನಗೈವಾ | ಪುಣ್ಯನಾಮನಾಸದ್ಗುಣ ಧಾಮನಾ | ದಶರಥ ರಾಮನಾ [೧] ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ |ಅಸಮಧನು ವನೆತ್ತ್ಯಭಯವಿತ್ತನಾ |ನಿನಗೊಲಿದಾತನಾ | ರಘುಕುಲ ಜಾತನಾ [೨] ಶರಣೆಂಬೆ ಮಹಾಮಾಯೆ | ಸಲಹಬೇಕೆನ್ನ ತಾಯೆ |ಗುರುಮಹಿಪತಿ ಸ್ವಾಮಿ | ಜಗದಯ್ಯನಾಪವನಜ…
-
Akka Kele
Composer : Shri Kakhandaki Krishna dasaru ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬಮುಕ್ಕಣ್ಣಗೀವರಂತೆ || ಪ || ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. || ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |ತಿಲಕ ಫಣೆಗೆ ಬಾಲ ಚಂದ್ರನಂತೆ |ಹೊಳೆವ ಕಿಡಿಗಣ್ಣಂತೆ | ಕಂದು ಗೊರಳನಂತೆ |ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || ೧ || ಉರಗ ಭೂಷಣನಂತೆ | ಭಸ್ಮ ಲೇಪನನಂತೆ |ಕರಿಯ ಚರ್ಮಾಂಬರ…
-
Jaya devi
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಪಾವನಗಂಗೇ |ಜಯಜಯ ತ್ರಿಪಥಗಾಮಿನಿ ಜಯ ತುಂಗ ತರಂಗೇ [ಪ] ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು |ಮೇದಿನಿಗಿಳಿದು ನೀಬಂದೆ ಭಗೀರಥ ನೃಪಗೊಲಿದು |೧| ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ |ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ |ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ |ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ |೨| ಹರಿಹರ ದೇವರು ದ್ರವರೂಪದಿ ಹರಿವುತಲೀ…
