Jaya devi

Composer : Shri Kakhandaki Krishna dasaru

By Smt.Shubhalakshmi Rao

ಜಯದೇವಿ ಜಯದೇವಿ ಜಯ ಪಾವನಗಂಗೇ |
ಜಯಜಯ ತ್ರಿಪಥಗಾಮಿನಿ ಜಯ ತುಂಗ ತರಂಗೇ [ಪ]

ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |
ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |
ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು |
ಮೇದಿನಿಗಿಳಿದು ನೀಬಂದೆ ಭಗೀರಥ ನೃಪಗೊಲಿದು |೧|

ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ |
ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ |
ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ |
ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ |೨|

ಹರಿಹರ ದೇವರು ದ್ರವರೂಪದಿ ಹರಿವುತಲೀ |
ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ |
ದರುಶನ ಮಾತ್ರದಲಾದೆನು ಮುಕ್ತನು ಭವದಲಿ |
ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ |೩|


jayadEvi jayadEvi jaya pAvanagaMgE |
jayajaya tripathagAmini jaya tuMga taraMgE [pa]

Adili SrIhari kOmala padanaKadiMdogadu |
sAdhini vArijaBavanA karapAtrake baMdu |
sAdaradiMdASivana keMjeDeyoLu niMdu |
mEdinigiLidu nIbaMde BagIratha nRupagolidu |1|

kASiprayAgadi niMdu uddarisuta kelarA |
ASeya pUrisalAgi dakShiNa diSedavarA |
rASiya kanyA meTTalu suraguru gaMBIrA |
BASiSi tOride baMdu kRuShNavENili sadarA |2|

harihara dEvaru dravarUpadi harivutalI |
nerenIkUDida saMBrama EneMdusurali |
daruSana mAtradalAdenu muktanu Bavadali |
guru mahIpatisuta ennanu rakShisu karuNadali |3|

Leave a Reply

Your email address will not be published. Required fields are marked *

You might also like

error: Content is protected !!