Naa ninnolanya beduvudilla

Composer : Shri Purandara dasaru

By Smt.Shubhalakshmi Rao

ನಾ ನಿನ್ನೊಳನ್ಯ ಬೇಡುವುದಿಲ್ಲ , ಎನ್ನ
ಹೃದಯ ಕಮಲದೊಳು ನಿಂದಿರು ಹರಿಯೆ [ಪ]

ಶಿರ ನಿನ್ನ ಚರಣಕೆ ಎರಗಲಿ
ಚಕ್ಷು ಸದಾ ನಿನ್ನನೆ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ ನಿನ್ನ
ನಿರ್ಮಾಲ್ಯ ನಾಸವಾಘ್ರಾಣಿಸಲಿ ಹರಿಯೆ [೧]

ನಾಲಿಗೆ ನಿನ್ನ ಕೊಂಡಾಡಲಿ, ಎನ್ನ
ಕರಗಳೆರಡು ನಿನ್ನ ಅರ್ಚಿಸಲಿ ಹರಿಯೆ
ಚರಣ ತೀರ್ಥ ಯಾತ್ರೆ ಮಾಡಳಿ, ಎನ್ನ
ಮನ ನಿನ್ನ ಅನುದಿನ ಸ್ಮರಿಸಲಿ ಹರಿಯೆ [೨]

ಬುದ್ಧಿ ನಿನ್ನೊಳು ಬೆರೆತ್ಹೋಗಲಿ, ಎನ್ನ
ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆ
ಭಕ್ತ ಜನರ ಸಂಗವಾಗಲಿ, ಪುರಂದರ
ವಿಠಲನೆ ಇಷ್ಟೇ ದಯಮಾಡೋ ಹರಿಯೆ [೩]


nA ninnoLanya bEDuvudilla , enna
hRudaya kamaladoLu niMdiru hariye [pa]

Sira ninna caraNake eragali
cakShu sadA ninnane nODali hariye
karNa gItaMgaLa kELali ninna
nirmAlya nAsavAGrANisali hariye [1]

nAlige ninna koMDADali, enna
karagaLeraDu ninna arcisali hariye
caraNa tIrtha yAtre mADaLi, enna
mana ninna anudina smarisali hariye [2]

buddhi ninnoLu beret~hOgali, enna
citta ninnoLu sthiravAgali hariye
Bakta janara saMgavAgali, puraMdara
viThalane iShTE dayamADO hariye [3]

Leave a Reply

You might also like

error: Content is protected !!