Bandya vittala badavanalli

Composer : Shri Gopala dasaru

By Smt.Shubhalakshmi Rao

ಬಂದ್ಯಾ ವಿಠ್ಠಲ ಬಡವನಲ್ಲಿ |
ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ||

ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |
ಎಳೆದಳಲು ಚೂತ ಮಲ್ಲಿಯ ದೂರಬಿ ||
ಥಳಥಳಿಪ ಮುಖ ನಾಸ ನಯನ ಫಣಿಯಲಿ ತಿಲಕ |
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ||೧||

ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು |
ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ||
ಸಿರಿಗಂಧ ಲೇಪವು ಶ್ರೀವತ್ಸುರ ಕಿರುಡೊಳ್ಳು |
ವರಕಟಿಗೆ ಗಂಟೆ ಪರಿಪರಿಯ ಡಾಮವ ಸುತ್ತಿ ||೨||

ಮುಂಗೈಯ ಕಡಗ ಸರಪಳಿ ತೋಳು ಭಾಪುರಿ |
ಶೃಂಗಾರವಾದ ಗದೆ ಶಂಖ ಚಕ್ರ ||
ಅಂಗೈಯ ಪದುಮ ವೇಣು ಮೀಟುತ |
ಹಿಂಗದೆ ಎನ್ನ ಅಂತರಂಗ ಧಾಮನಿಗೆ ||೩||

ಮಾಳಿಗೆ ಶ್ರೀನಿವಾಸಾರ್ಯರ ಮನೆಯಿಂದ
ಶೀಲಗುರು ವಿಜಯರಾಯರಿಗೆ ಒಲಿದು
ಮೇಲಾಗಿ ಬಹುಪರಿ ಇಂದ ಪೂಜೆಯಗೊಂಡು
ಕೀಳುಮನುಜನ ಎನ್ನ ಪಾಲಿಸಲಿ ಬೇಕೆಂದು ||೪||

ಏನು ಬಗೆ ಪೂಜೆ ಎನ್ನಿಂದ ಆಗದು |
ಜ್ಞಾನವೆಂಬುದು ಲೇಶವು ಇಲ್ಲ ||
ನೀ ನಿತ್ಯ ತೃಪ್ತ ನೀ ನಿಂತಲ್ಲಿ ಸಕಲುಂಟು |
ಶ್ರೀನಿವಾಸ ಗೋಪಾಲವಿಠಲ ಹೇ ವಿಜಯ ||೫||


baMdyA viThThala baDavanalli |
vRuMdAvanadalli gOvRuMdagaLa kAydavane ||pa||

suLiguruLu mulle araLeleyu kirITa |
eLedaLalu cUta malliya dUrabi ||
thaLathaLipa muKa nAsa nayana PaNiyali tilaka |
calisuva karNakuMDala praBeyu SOBisutta ||1||

koraLali sarige sarapaLi pacce padakavu |
paripariya hAra SrI tuLasi mAle ||
sirigaMdha lEpavu SrIvatsura kiruDoLLu |
varakaTige gaMTe paripariya DAmava sutti ||2||

muMgaiya kaDaga sarapaLi tOLu BApuri |
SRuMgAravAda gade SaMKa cakra ||
aMgaiya paduma vENu mITuta |
hiMgade enna aMtaraMga dhAmanige ||3||

mALige SrInivAsAryara maneyiMda
SIlaguru vijayarAyarige olidu
mElAgi bahupari iMda pUjeyagoMDu
kILumanujana enna pAlisali bEkeMdu ||4||

Enu bage pUje enniMda Agadu |
j~jAnaveMbudu lESavu illa ||
nI nitya tRupta nI niMtalli sakaluMTu |
SrInivAsa gOpAlaviThala hE vijaya ||5||

Leave a Reply

You might also like

error: Content is protected !!