Apamanavadare ollitu

Composer : Shri Purandara dasaru

By Smt.Shubhalakshmi Rao

ಅಪಮಾನವಾದರೆ ಒಳ್ಳಿತು
ಅಪರೂಪ ಹರಿನಾಮ ಜಪಿಸುವ ಮನುಜರಿಗೆ ||ಪ||

ಮಾನದಿಂದ ಅಭಿಮಾನ ಪುಟ್ಟುವುದು
ಮಾನದಿಂದ ತಪ ಹಾನಿಯಾಗುವುದು
ಮಾನಿ ದುರ್ಯೋಧನಗೆ ಹಾನಿಯಾಯಿತು ಜಗದಿ
ಅನುಮಾನವಿಲ್ಲ ಮಾನಾಪಮಾನ ಸಮರಿಗೆ |೧|

ಅಪಮಾನದಿಂದಲಿ ತಪ ವೃದ್ಧಿಯಾಗುವುದು
ಅಪಮಾನದಿಂದ ಪುಣ್ಯ ಸಫಲವಾಗುವುದು
ಅಪಮಾನದಿಂದ ನೃಪ ಧ್ರುವರಾಯಗೆ
ಕಪಟ ನಾಟಕ ಕೃಷ್ಣ ಅಪರೋಕ್ಷನಾದನು |೨|

ನಾನೇನು ಮಾಡಲಿ ಯಾರಲ್ಲಿ ಪೋಗಲಿ
ಕಾನನಚರರಾರಾಧ್ಯ ನೀನಿರಲು
ದೀನ ರಕ್ಷಕ ನಮ್ಮ ಪುರಂದರ ವಿಠಲನೆ
ಏನು ಬೇಡೆನಗೆ ಅಪಮಾನವೇ ಇರಲಿ |೩|


apamAnavAdare oLLitu
aparUpa harinAma japisuva manujarige ||pa||

mAnadiMda aBimAna puTTuvudu
mAnadiMda tapa hAniyAguvudu
mAni duryOdhanage hAniyAyitu jagadi
anumAnavilla mAnApamAna samarige |1|

apamAnadiMdali tapa vRuddhiyAguvudu
apamAnadiMda puNya saPalavAguvudu
apamAnadiMda nRupa dhruvarAyage
kapaTa nATaka kRuShNa aparOkShanAdanu |2|

nAnEnu mADali yAralli pOgali
kAnanacararArAdhya nIniralu
dIna rakShaka namma puraMdara viThalane
Enu bEDenage apamAnavE irali |3|

Leave a Reply

You might also like

error: Content is protected !!