Composer : Shri Pranesha dasaru
ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |
ಸಾಕಬೇಕೆಲೋ ರಂಗ |ಪ|
ಹಲವು ಜನುಮಗಳಲ್ಲಿ ತೊಳಲಿ ತೊಳಲೀ
ಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |
ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ ಲೋಕದಲ್ಲಿ
ಕಾಲವ ಕಳೆಯುತ ಇರುವೆನೊ ಪೃಥ್ವಿಯಲ್ಲಿ |೧|
ಆಡಬಾರದ ಆಟ ನೋಡಬಾರದ ನೋಟ |
ಕೂಡಬಾರದ ಕೂಟದೊಳಗೆ ನೆಲದಾಟ ||
ಒಡಲಿಗಿಲ್ಲದೆ ಪರರ ಮನೆಯೊಳಗೆ ಓಡ್ಯಾಟ |
ಬ್ಯಾಡ ಅಂದರೂ ಬಿಡದೊ ಇದೆಲ್ಲ ನಿನ್ನಾಟ |೨|
ನಿನ್ನವನೆಂದೆನಿಸೊ ಮನಸು ನಿನ್ನೊಳು ನಿಲ್ಲಿಸೊ |
ನಿನ್ನ ದಾಸರ ಸಂಗದೊಳಗೆನ್ನ ಇರಿಸೊ |
ಎನ್ನಂಥ ಪತಿತರು ಇನ್ನಿಲ್ಲ ಜಗದೊಳಗೆ |
ಮನ್ನಿಸಿ ಸಲಹೋ ಪ್ರಾಣೇಶವಿಠಲ |೩|
yAko I BavaBaMga sAkO I mAnaBaMga |
sAkabEkelO raMga |pa|
halavu janumagaLalli toLali toLalI
baLali puTTide Iga narajanmadalli |
elli hOdarU alli suKavilla lOkadalli
kAlava kaLeyuta iruveno pRuthviyalli |1|
ADabArada ATa nODabArada nOTa |
kUDabArada kUTadoLage neladATa ||
oDaligillade parara maneyoLage ODyATa |
byADa aMdarU biDado idella ninnATa |2|
ninnavaneMdeniso manasu ninnoLu nilliso |
ninna dAsara saMgadoLagenna iriso |
ennaMtha patitaru innilla jagadoLage |
mannisi salahO prANESaviThala |3|

Leave a Reply
You must be logged in to post a comment.