Atana paduve anavarata

Composer : Shri Purandara dasaru

By Smt.Shubhalakshmi Rao

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆ
ನಿನ್ನ ಕಾಲನು ಪಿಡಿವೆ
ನಿನ್ನ ತೊಂಡರಿಗೆ ಕೈಗೊಡುವೆ
ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ
ಚೆನ್ನ ಪುರಂದರವಿಠಲ ದೇವರ ದೇವ ||

ಆತನ ಪಾಡುವೆ ಅನವರತ ಪ್ರೀತಿಯಿಂದಲಿ
ತನ್ನ ಭಕುತರ ಸಲಹುವ ||ಪ||

ಆವಾತನ ಕೀರ್ತಿ ಪರೀಕ್ಷಿತ ಕೇಳಿ
ಪಾವನನಾದನು ಮೂಜಗವರಿಯ
ಭಾವಶುದ್ಧಿಯಲಿ ಶುಕನ್ಯಾರ ಪೊಗಳುವ
ಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ (೧)

ಶಿಲೆಯ ಬಾಲೆಯ ಮಾಡಿದ ಪಾದವ್ಯಾರದು
ನಳಿನ ಸಂಭವನ ಪೆತ್ತವನ್ಯಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ
ಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ (೨)

ದ್ರುಪದನ ಸುತೆಯಭಿಮಾನ ರಕ್ಷಕನ್ಯಾರು
ನೃಪ ಧರ್ಮಜಗೆ ರಕ್ಷಕನ್ಯಾರು
ಕೃಪೆಯಿಂದ ವಿದುರನ ಮನೆಯಲುಂಡವನ್ಯಾರು
ಆಪತ್ಕಾಲದಿ ಗಜನ ಸಲಹಿದನ್ಯಾರಯ್ಯ (೩)

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ
ರಥವನೇರಿ ನಡೆಯಿಸಿದವನ್ಯಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು
ಮತಿವಂತ ಧ್ರುವನ ರಕ್ಷಕನ್ಯಾರು ಪೇಳಯ್ಯ (೪)

ಸಗರನ ಮಗಳಿಗು ಯಾರ ನಾಮವೆ ಗತಿ
ಯೋಗದಿ ನಾರದನು ಯಾರ ಭಜಿಪನು
ರಾಗ ರಹಿತ ಹನುಮಂತನೊಡೆಯನ್ಯಾರು
ಭಾಗವತರ ಪ್ರಿಯ ಪುರಂದರ ವಿಠಲ (೫)


ninnane pADuve ninnane pogaLuve
ninnane bEDi bEsarisuve
ninna kAlanu piDive
ninna toMDarige kaigoDuve
ninnaMte sAkaballa dEvarinnuMTe
cenna puraMdaraviThala dEvara dEva ||

Atana pADuve anavarata prItiyiMdali
tanna Bakutara salahuva ||pa||

AvAtana kIrti parIkShita kELi
pAvananAdanu mUjagavariya
BAvaSuddhiyali SukanyAra pogaLuva
AvAga prahlAdanyAra nenevanayya (1)

Sileya bAleya mADida pAdavyAradu
naLina saMBavana pettavanyAru
kaliyugadi janarige yAra nAmave gati
iLeya BAravaniLuhi salahidanyaarayya (2)

drupadana suteyaBimAna rakShakanyAru
nRupa dharmajage rakShakanyAru
kRupeyiMda vidurana maneyaluMDavanyAru
ApatkAladi gajana salahidanyArayya (3)

atiSayadiMda arjunage sArathiyAgi
rathavanEri naDeyisidavanyAru
pRuthviyellava bali yArigoppisidanu
mativaMta dhruvana rakShakanyAru pELayya (4)

sagarana magaLigu yAra nAmave gati
yOgadi nAradanu yAra Bajipanu
rAga rahita hanumaMtanoDeyanyAru
BAgavatara priya puraMdara viThala (5)

Leave a Reply

You might also like

error: Content is protected !!