Composer : Shri Kanakadasaru
ಹಲವು ಜೀವನವ ಒಂದೆಲೆ ನುಂಗಿತು ||
ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ|| ಪ ||
ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ
ಹರಿಯ ಬಳಗವ ಒಂದೆಲೆ ನುಂಗಿತು || ೧ ||
ಎಂಟು ಗಜವನು ನುಂಗಿ ಕಂಟಕರೈವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದು ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು || ೨ ||
ಗಿಡವ ನುಂಗಿತು ಗಿಡದೊಡತೊತ್ತಿಯನು ನುಂಗಿತು
ಗಿಡುವಿನ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ದೇವ ಕನಕದಾಸ
ಎನ್ನೊಡೆಯಾದಿಕೇಶವ ಬಲ್ಲನೀ ಬೆಡಗ || ೩ ||
halavu jIvanava oMdele nuMgitu ||
kAgi neleyAdikESava ballanI beDaga|| pa ||
hariya nuMgitu hara brahmara nuMgitu
surariguMTAda dEvara nuMgitu
urigaNNa Sivana oMdele nuMgitelo dEva
hariya baLagava oMdele nuMgitu || 1 ||
eMTu gajavanu nuMgi kaMTakaraivara nuMgi
uMTAda giriya taleya nuMgitu
kaMTava piDidu brahmana nuMgitelo dEva
eMTAru lOka oMdele nuMgitu || 2 ||
giDava nuMgitu giDadoDatottiyanu nuMgitu
giDuvina tAyi taMdeya nuMgitu
beDaga ballare pELi dEva kanakadAsa
ennoDeyAdikESava ballanI beDaga || 3 ||

Leave a Reply
You must be logged in to post a comment.