Composer : Shri Harapanahalli Bheemavva
ನಂದನಂದನೆ ಅರವಿಂದದಳಾಕ್ಷನೆ
ವಂದಿಸುವೆ ಪಾದಾರವಿಂದಗಳಿಗೀಗ [ಪ]
ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟು
ಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆ
ಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾ
ಮದಡ ಬುದ್ಧಿಲಿ ನಿನ್ನ ಮರೆತು ಕಳೆವೆನೊ ಕಾಲ [೧]
ಭೂತಳದೊಳು ಸಲಹೋ ದಾತರೆಲ್ಲಿಹರಿನ್ನು
ಮಾತುಳಾಂತಕನೆ ಈ ಮಾತ ಪೇಳೆನಗೆ
ಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ-
ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ [೨]
ವಾಸುಕೀಶಯನನ ವರವ ಪಡೆಯದೆ ನಾ
ಮೋಸಹೋದೆನೊ ಈ ಸಂಸಾರದೊಳು ಸಿಲ್ಕಿ
ಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನ
ಘಾಸಿ ಮಾಡದೆ ಹೃಷಿಕೇಶ ಕರುಣದಿಂದ [೩]
naMdanaMdane araviMdadaLAkShane
vaMdisuve pAdAraviMdagaLigIga [pa]
padumanABane ninna pAda BakutiyoLiTTu
sujana saMgati nIDo suravaMdya hariye
odagi baruvo mRutyu modale ariyade nA
madaDa buddhili ninna maretu kaLeveno kAla [1]
BUtaLadoLu salahO dAtarelliharinnu
mAtuLAMtakane I mAta pELenage
mAtApitaru modalilla innanyarilla a-
nAthaneMdenna kayya prItiMde hiDi priya [2]
vAsukISayanana varava paDeyade nA
mOsahOdeno I saMsAradoLu silki
SrISa nI salaho BImESa kRuShNane enna
GAsi mADade hRuShikESa karuNadiMda [3]

Leave a Reply
You must be logged in to post a comment.