Ninna naashrayisuvenu

Composer : Shri Purandara dasaru

By Smt.Shubhalakshmi Rao

ನಿನ್ನನಾಶ್ರಯಿಸುವೆನು ನಿಗಮಗೋಚರನೆ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ [ಪ]

ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಕೆ ||
ಕಂದರ್ಪನಾಶ್ರಯ ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು [೧]

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯ ನದಿಗಳು ಋಷಿಗಳಾಶ್ರಯವು ||
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು [೨]

ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗೆ ಶ್ರುತಿ ಪ್ರಣವದ ಆಶ್ರಯವು ||
ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು [೩]


ninnanASrayisuvenu nigamagOcarane nitya
benna biDade kAyo manadiShTavIyO [pa]

kuMdaNada ASraya navaratnagaLigella
caMdirana ASraya cakOrake ||
kaMdarpanASraya vasaMta kAlakke
gOviMdanASrayavu maraNakAladoLu [1]

haNNuLLa maragaLu pakShigaLigASrayavu
puNya nadigaLu RuShigaLASrayavu ||
kaNNilladAtage kaigOlinASrayavu
tanniShTa paDedavage ninna ASrayavu [2]

pativrate vanitege patiyoMde ASrayavu
yatigaLige Sruti praNavada ASrayavu ||
mativaMtanige haristutigaLE ASrayavu
hitavAda puraMdaraviThalanASrayavu [3]

Leave a Reply

You might also like

error: Content is protected !!