-
Nodu garuda gamana
Composer : Shri Vijayadasaru ನೋಡು ನೋಡು ಗರುಡಗಮನನೆಮಾಡು ದಯವನು ವೇಗದಿ [ಪ] ಪಾಡುವೆ ಆನಂದದಲಿ ನಿನ್ನನುಕೊಂಡಾಡುವೆನು ನಿನ್ನ ಮೂರ್ತಿಯಾ [ಅ.ಪ] ಮಂಗಳಾಂಗನೆ ಮನ್ಮಥನ ಪಿತಸಂಗೀತ ಸುರಲೋಲನೆಕಂಗಳಬ್ಬರ ತೀರುವಂತೆಚರಣಂಗಳನೆ ತೋರೋ ವಿನಯದಿ [೧] ಪರಮ ಪುರುಷನೆ ಪುಣ್ಯ ಶ್ಲೋಕನೆದುರುಳ ದೈತ್ಯರ ದಲ್ಲಣಮರಿಯಲೀಸದೆ ನಿನ್ನ ಚರಣಸ್ಮರಣೆ ಒದಗಿಸೊ ವದನಕೆ [೨] ವಂದನೆಯು ಗೋವಿಂದ ಗೋಪಾಲಾಮಂದರಧರ ಮಾಧವಾಇಂದು ವಿಜಯವಿಠ್ಠಲ ನಿನ್ನಸಂದರ್ಶನವ ಕೋರುತಾ [೩] nODu nODu garuDagamananemADu dayavanu vEgadi [pa] pADuve AnaMdadali ninnanukoMDADuvenu ninna mUrtiyA [a.pa]…
-
Ballavagille paramatma
Composer : Shri Vijayadasaru ಬಲ್ಲವಾಗಿಲ್ಲೆ ಪರಮಾತ್ಮಾಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ [ಪ] ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದುಆಡಿದವೆಲ್ಲ ಹರಿಯ ರೂಪವೆಂದುಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದುಕೂಡಿದದ್ದೆಲ್ಲ ಹರಿ ಭಕ್ತರೆಂದು [೧] ತಾಪತ್ರಯಗಳೆಲ್ಲ ಮಹಾ ತಪಸು ಎಂದುರೂಪಗಳೆಲ್ಲ ಹರಿಕಾಂತಿ ಎಂದುಪೋಪದು ಬರುವುದೆಲ್ಲವ್ಯಾಪಾರ ಹರಿ ಅಧೀನವೆಂದು [೨] ತಾರತಮ್ಯಕಿದು ಪರಲೋಕದಿ ಸರಿಯಿಲ್ಲಸಿರಿ ಹರಿಯದೊರೆ ತನಗೆ ಎಂದೆನುತಾಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ [೩] ಒಲಿಸಿ ಒಲಿಸಿ ಒಲಿದು ಒಲಿದುಖಳರೊಳಗಾಡದಲೆ ವಿಜಯವಿಠ್ಠಲವೆಂಕಟ ಶೈಲ ನಿವಾಸಾಸರ್ವೋತ್ತಮನೆ ಗತಿ ಎಂದು…
-
Paramatmane nee sari
Composer : Shri Vijayadasaru ಪರಮಾತ್ಮನೆ ನೀ ಸರಿ ಎಂದುಕರಗದ ತಮದಲ್ಲಿ ಸೇರುವದೆ ||ಪ|| ಜೀವ ಪರಮಾತ್ಮಗೆ ಭೇದವಆವಾವ ಕಾಲಕ್ಕೆಯಿಲ್ಲವೆಂದುದೇವನ ಬಳಿಗೆ ನೀ ದೂರಾಗಿಈ ವಸುಧೆಯೊಳು ಬದುಕುವರೆ [೧] ಭೇದ ಜೀವಕೆ ಜೀವ ಎಂದಿಗಾದರು ಇಲ್ಲವೆಂದು ನುಡಿದುಈ ದುರಾಚಾರದಲ್ಲಿ ನಡೆದುಮಾದಿಗನಂತೀಗ ಮಾರ್ಮಲಿದು [೨] ಜಡ ಪರಮಾತ್ಮ ಜಡ ಜಡಕೆಜಡ ಜೀವಕೆ ಅಭೇದವೆಂದುಕಡುಗರ್ವದಿಂದಲಿ ಉಚ್ಚರಿಸಿಮಡಿದು ನರಕಕ್ಕೆ ಉರುಳುವರೆ [೩] ಅರಸಿನ ಬಳಿಗೆ ತೋಟಿಗ ಬಂದುಅರಸೆ ನೀನೆ ನಾನೆಂದಡೆಉರವಣಿಸಿ ಕೊಲ್ಲಿಸಿ ಅವನಶೆರಿಯ ಹಾಕದೆ ಮನ್ನಿಸುವನೆ [೪] ದಾಸನ ದಾಸನು ಎಂದುಏಸು…
