-
Agaje ninnogetanake
Composer : Shri Shrida vittala ಅಗಜೆ ನಿನ್ನೊಗೆತನಕೆ ಜಗ ನಗುವುದೇನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ [ಪ] ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡತೊಟ್ಟ ತೊಗಲುಡುಗೆ ತಲೆ ಬೋಡು ಕೈಯ್ಯಸುಟ್ಟ ಸುಡಗಾಡು ಮನೆ ಅಖಿಲ ಭೂತೇಶ ಬಲುಸಿಟ್ಟಿನವನಂಗ ಸಂಗವ ಬಯಸಬಹುದೆ [೧] ಆರು ಮೊಗದವನೊಬ್ಬ ಆತ್ಮಜನು ಮೊಲೆ ಪಾಲುಕಾರಿ ಕಡುಮುನಿದು ಕಂಡರೆ ಸೇರನುಊರಿಗುಪಕಾರಿ ಒಡಲ್-ಹರಕ ಗಜಮುಖನುನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ [೨] ಶಿವಶಕ್ತಿ ನಿನ್ನಂಥ ಸೌಭಾಗ್ಯವತಿಯಳಭುವನದೊಳಗಾವಲ್ಲಿ ಕಾಣೆನಿನ್ನುಕವಿ ಜನಗಳೇನೆಂದು ಬಣ್ಣಿಸಿದರೊ ತಿಳಿಯೆಭವದೂರ ಶ್ರೀದ ವಿಠ್ಠಲರಾಯ ಬಲ್ಲ [೩]…
-
Muniyuvare krishna
Composer : Shri Uragadrivasa vittala ಮುನಿಯುವರೇ ಕೃಷ್ಣಾ ಮುನಿಯುವರೆ [ಪ] ಮುನಿಗಳೆಲ್ಲರು ನಿನ್ನ ಮನೆಯವರೇನೊದಣಿಸಲಾಗದೊ ನಿನ್ನ ನೆನೆವ ಭಕುತರೊಳು [ಅ.ಪ] ಮುನಿಗಳು ಮನದೊಳು ಕ್ಷಣ ಬಿಡದಲೆ ನಿನ್ನದಣಿಸಿ ಕುಣಿಸುವರೊ ಮೌನದಿಂದಲಿ ನಾ,ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆಕೆಣಕಿದವರ ನೀ ಕ್ಷಣದಿ ಕಾಪಾಡಿದೆ (೧) ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆಶಿಲೆಯನೊತ್ತಿ ಸುಶೀಲೆಯ ಪೊರೆದೆ,ಜಲಧಿಶಯನಾ ನೀ ರಥಕೆ ಸಾರಥಿಯಾದೆಛಲವೇತಕೆನ್ನೊಳು ನೀನೆ ಗತಿ ಎಂದರೆ (೨) ಎಂಜಲಾಸೆಗೆ ಸೋತು ಶಬರಿಯ ಪೊರೆದೆಸಂಜೆ ಹಗಲೆನ್ನದೆ ಎಂಜಲ ಬಳಿದೆ,ಅಂಜದೆ ಅಜಾಮಿಳಗೊಲಿದೆಯೋದೇವಅಂಜೆನೊ ಎಂದಿಗೂ…
-
Pundaleeka varada
Composer : Shri Purandara dasaru ಪುಂಡಲೀಕವರದ ಪಂಢರಿರಾಯನಕೇಳವ್ವ ಕೇಳೆ ||ಪ|| ಗೋಕುಲದೊಳಗೆ ತಾನಿಪ್ಪಮೂರು ಲೋಕಕೆ ತಾನಪ್ಪಕೊಳಲ ಧ್ವನಿಯ ಮಾಡುತಲಿಪ್ಪನಮ್ಮ ತುರುಗಳ ಕಾಯುತಲಿಪ್ಪ ||೧|| ವೃಂದಾವನದೊಳು ನಿಂದನಂದನ ಕಂದ ಗೋವಿಂದಕೊಳಲ ಧ್ವನಿ ಬಹು ಚಂದಮೂಜಗವ ಪಾಲಿಪ ಮುಕುಂದ ||೨|| ಸುರತರುವಿನ ನೆರಳಲ್ಲಿಇವನ ಹೆಗಲಿನ ಮೇಲೆ ಕೊಡಲಿನೆರೆದಿಹ ಗೋಪಿಯರಲ್ಲಿಗೋಪಾಲರಾಡುತ ಲೀಲೆಗಳಲ್ಲಿ ||೩|| ಕರ್ಪೂರ ವೀಳ್ಯವ ಮೆಲುವನಮ್ಮ ಕಸ್ತೂರಿ ತಿಲಕ ಉಂಗುರವಮುತ್ತಿನ ಓಲೆ ವರ ಚೆಲುವವಿಸ್ತರದಿ ಹದಿನಾಲ್ಕು ಲೋಕ ಪೊರೆವ ||೪|| ಹಿಮಕರ ಚರಣದ ಕರನಮೂಜಗ ಪಾಲಿಪ ಕರುಣಅಮರರಿಗೆ ಒಲಿದವನ…
