Tag: shubha rao

  • Shrimad Akshobhya tirthara

    Composer : Shri Karpara Narahari ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂಕಾಮಿತ ಪ್ರದವಹುದು ಶೃಣ್ವತಾಂ ಸತತಂ ||ಪ|| ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀರಾಮನಂಘ್ರಿ ದ್ವಯವ ಪೂಜಿಸುತಲಿಭೂಮಿ ನಿರ್ಜರ ಜನಸ್ತೋಮ ವಂದಿತರಾಗಿವ್ಯೋಮ ಕೇಶಾಂಶರೆಂದೆನಿಸಿ ಮೆರೆದಂಥ |೧| ಮೋದತೀರ್ಥರ ಮತ ಮಹೋದಧಿಗೆ ಪೂರ್ಣನುದೀಧಿತಿಯೆಂದೆನಿಸಿ ದಿಗ್ವಲಯದಿಭೇದ ಬೋಧಕ ಸೂತ್ರ ವಾದದಿಂದಲಿ ಮಹಾವಾದಿ ವಿದ್ಯಾರಣ್ಯ ಯತಿವರನ ಜಯಿಸಿದ |೨| ವಿಟ್ಠಲನ ಪದಪದುಮ ಷಟ್ಪದರೆಂದೆನಿಸಿಸ್ವಪ್ನಸೂಚಿತ ಚಂದ್ರಭಾಗ ತಟದಿಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರಇಷ್ಟರೆನ್ನುತ್ತ ಕರೆದು ಕೊಟ್ಟರಾಶ್ರಮವ |೩| ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬದೃಷ್ಟಿಯಿಂದಿವರಿಗೆ ಸುಮುಹೂರ್ತದಿಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತಕೊಟ್ಟರಾಜ್ಞೆಯನು…

  • Rama Rama Rama enniro

    Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ |೧| ನೆಲೆ ಇಲ್ಲದೀಕಾಯ ಎಲುವಿನ ಹಂದರಬಲಿದು ಸುತ್ತಿದ ಚರ್ಮದ ಹೊದಿಕೆಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ |೨| ಹರ ಬ್ರಹ್ಮ ಸುರರಿಂದ ವಂದ್ಯನು ಆಗಿಪ್ಪಹರಿ ಸರ್ವೋತ್ತಮ ಕಾಣಿರೋಪುರಂದರವಿಠಲನ ಭಜನೇಯ ಮಾಡಿರೊದುರಿತ ಭಯಗಳಿಂದ ದೂರಾಗಿರೊ |೩| rAma rAma rAma…

  • Jaya Jaya Rama – Sita Rama Urutani pada

    Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ (೧) ಗುರು ವಿಜಯದಾಸರ ಚರಣಾಸರಸಿರುಹವಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ (೨) ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ (೩) ಸರಸ್ವತಿ ಭಾರತಿ ಮೊದಲಾದಸರಸಿಜ…

error: Content is protected !!