-
Durge palise karunadi
Composer : Shri Amba bai ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿದುರ್ಗೆ ಪಾಲಿಸೆ ಕರುಣದಿ (ಪ.) ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತುದುರ್ಗಮವಾಗಿಹ ದುಃಖವ ಬಿಡಿಸಿಭಾರ್ಗವಿರಮಣನ ಮಾರ್ಗವ ತೋರೆಭೋರ್ಗರೆಯುತ ಖಳರ ನಿಗ್ರಹಿಸುವಳೆ (ಅ.ಪ.) ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆನಾರಸಿಂಹನ ಅರಸಿಯೆಸಾರಿದೆ ನಿನ ಪದ ತೋರಿಸೆ ಹರಿಪದಕಾರುಣ್ಯಾತ್ಮಳೆ ಕರುಣವ ಬೀರೆವಾರವಾರಕೆ ನಿನ್ನ ಆರಾಧಿಸುವಂಥಚಾರುಮತಿಯ ನೀಡೆ ನಾರಿರನ್ನಳೆ (೧) ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿಪದ್ಮಸಂಭವೆ ಕಾಮಿನಿಪದ್ಮನಾಭ ಶ್ರೀ ಶ್ರೀನಿವಾಸನಪದ್ಮಪಾದವ ಹೃತ್ಪದ್ಮದಿ ತೋರೆಪದ್ಮಸರೋವರ ತೀರವಾಸಿ ಕರಪದ್ಮಯುತಳೆ…
-
Enanti kamalanabhana priyale
Composer : Shri Harapanahalli Bheemavva ಏನಂತಿ ಕಮಲನಾಭನ ಪ್ರಿಯಳೆಜಗ-ದಾನಂತ ಪದುಮನಾಭನ ಭಾರ್ಯಳೆ [ಪ] ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆಬುದ್ಧಿ ಪೂರ್ವಕವಾಗಿ ಭುವನದೊಡೆಯನಪಾದ-ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ [೧] ಜನಕಾತ್ಮಜಳೆ ನೀ ಜಗದೇಕ ಸುಂದರಿಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿಸರ್ವಮಂಗಳಕಾರಿ ಪರಮ ಕರುಣದಿ ನೋಡೆವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ [೨] ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜ ನೇತ್ರೆಮೃಡ ಬ್ರಹ್ಮರೊಡೆಯ ಭೀಮೇಶ ಕೃಷ್ಣನ ಮಿತ್ರೆಪೊಡವಿಗಧಿಕಳೆ ಜಯ ಮೂಡಲಗಿರಿವಾಸಿಬಿಡದೆ ಕೈ ಹಿಡಿದೆನ್ನ ಕಡೆ ಹಾಯ್ಸೆ ಕಮಲಾಕ್ಷಿ…
-
Achyutanna raniye
Composer : Shri Prasannavenkata dasaru ಅಚ್ಯುತನ್ನ ರಾಣಿಯೆ ತ್ವಚ್ಛರಣಕೆರಗಿ ಬೇಡುವೆ [ಪ]ದುಃಚ್ಚರಿತಗಳಳಿಸಿ ಮನದೀಚ್ಛೇ ಪೂರ್ಣಗೊಳಿಸಿ ಪೊರೆ [ಅ.ಪ.] ಪತಿಯತೊಡೆಯನೇರಿ ತ್ವರದೆ ಕಡುಕೋಪ ಶಾಂತಗೊಳಿಸಿದೆ |ಪತಿತರನ್ನುದ್ಧರಿಸ ಬಂದ ಪುನ್ನವ ಪುರವಾಸಿನೆ (೧) ಅಂಬುಜಾಂಬಕೆ ಭವಾಂಬುದ ಕಳೆದಿಂಬಿಡುವಾ ಅಂಬಿಕೆ |ಅಂಬುಜಾರಿ ಭಗಿನಿ ನಿಜ ಜಾಂಬವ ಸುತೆ ನಂಬಿರುವೆ (೨) ಜ್ಞಾತೃನಾಮಕ ಹರಿಯ ಸ್ತೋತ್ರಗೈಯ್ಯುತಾ ನಿರುತ |ಚಿತ್ರಚರಿತಗ್-ಹತ್ತಿರಾದ ಸುಚರಿತ್ರೆ ಲೋಕಪವಿತ್ರೆ (೩) ಕಂದನಾಡುತ ಬರಲು ಬಂದು ಬಿಗಿದಪ್ಪೊ ಜನನಿಯಂತೆ |ಇಂದು ನೀನು ಮಂದಹಾಸದಿ ಮುಂದೆ ಬಾರೆಯೇಕೆ ತಾಯೆ (೪) ಪೌಲಮೀಗತೆಪಾಲಜನ್ನೆ…
