-
Ena Pelale Gopi
Composer : Shri Purandara dasaru ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ || ಪ ||ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ || ಅ.ಪ || ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ |ಅಡಗಿದ್ದನೆ ದೊಡ್ಡ ಕೊಡದೊಳಗೆ ||ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ |ಬಡವರ ಮಗನೇನೆ ಹೊಡೆಯಲಿಕ್ಕೆ ಗೋಪಿ || ೧ || ಅಳಿಯನ ವೇಷದಿ ಮಗಳ ಕರೆಯ ಬಂದ |ಕಲಹ ಮಾಡಿ ತಾ ಕಳಿಸೆಂದ ||ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ |ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ…
-
Charanava toro
Composer : Shri Vijayadasaru ಚರಣವ ತೋರೋ ಚೆಲುವರ ಅರಸನೆ, ಚರಣವ ತೋರೋ ||ಪ||ಸ್ಮರಣೆ ಮಾತ್ರದಿ ಮುಕುತಿ ಕೊಡುವ, ಚರಣವ ತೋರೋ ||ಅ.ಪ|| ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೋಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೋ |೧| ಬಿಡದೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೋಬಡವರಾಧಾರ ದಿವ್ಯ ವಿಭೂಷಣ ಚರಣವ ತೋರೋ |೨| ಕಡುಮುದ್ದು ವಿಜಯವಿಠಲ ನಿನ್ನ ಚರಣವ ತೋರೋಉಡುಪಿಯ ಕ್ಷೇತ್ರದಿ ನಿಂದು ಪೂಜೆಯಗೊಂಬ ಚರಣವ ತೋರೋ |೩| caraNava tOrO celuvara arasane, caraNava tOrO ||pa|| smaraNe mAtradi mukuti koDuva,…
-
Chendava nodire
Composer : Shri Purandara dasaru ಚೆಂದವ ನೋಡಿರೆ ಗೋಕುಲಾ-|ನಂದನ ಮೂರುತಿಯ [ಪ] ಅಂದುಗೆ ಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಮಿಕೆಂದು ಕುಣಿಯುವ ಕೃಷ್ಣನ [ಅ.ಪ] ಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲು ಅರಳೆಲೆಯ |ಫಳ ಫಳಿಸುತ ಮೆರೆವ ಕೃಷ್ಣನ [೧] ಉಡೆಯ ಗಂಟೆ ಘ್ಹಳಿಲೆನುತ |ನುಡಿದು ಮೆಲ್ಲನೆ ಪಿಡಿದುಕೊಂಡು ||ನಡೆಗೆ ಮಾಲುತ ಸಡಗರದಲಿ |ಬೆಡಗು ಮಾಡಿ ಆಡುವ ರಂಗನ [೨] ಬಲು ಅಸ್ಥೈರ್ಯದಿಂದಲಿ |ನಲಿವ ಪುರಂದರವಿಠ್ಠಲರಾಯ ||ಹಲವು ಸುಖವ ನಮಗಿತ್ತು |ಜಲಜಲೋಚನ ಬಾಲಕೃಷ್ಣನ [೩]…
