-
Nambi kettavarillavo rangayyana
Composer: Shri Vyasarajaru ನಂಬಿಕೆಟ್ಟವರಿಲ್ಲವೊ ರಂಗಯ್ಯನನಂಬದೆ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಅಖಿಳ ಲೋಕೇಶನಕಂಬುಕಂಧರ ಕೃಷ್ಣಕರುಣಾಸಾಗರನ ||ಅ.ಪ|| ತರಳ ಪ್ರಹ್ಲಾದ ಸಾಕ್ಷಿಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವರಹಿತನ ||೧|| ದೊರೆಯೂರು ಏರಬಂದ ಪುತ್ರನನ್ನುಕೊರಳ್-ಹಿಡಿದ್ಹೊರಡಿಸಲು ,ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ||೨|| ತರುಣಿ ದ್ರೌಪದಿ ಸೀರೆಯ ದುಶ್ಯಾಸನಸರಸರ ಸೆಳೆಯುತ್ತಿರೆ,ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತ್ವರದಿ ಅಕ್ಷಯವಿತ್ತ ಸಿರಿಕೃಷ್ಣ ರಾಯನ ||೩|| naMbikeTTavarillavo raMgayyananaMbade keTTare keDali ||pa|| aMbujanABana aKiLa lOkESanakaMbukaMdhara kRuShNakaruNAsAgarana ||a.pa|| taraLa…
-
Tondanu kanduda
Composer: Shri Vyasarajaru ತೊಂಡನು ಕಂಡುದ ಬಿನ್ನೈಸುವೆನುಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ [ಪ] ಹರಿ ನಿನ್ನ ನಾಮ ಕಾಮಧೇನುವಿಗೆದುರಿತದೊಟ್ಟಿಲು ಮೇವು ಭವಾಂಬುಧಿಯುಅರಸಿ ಕುಡಿವ ನೀರೆರೆವಡೆನ್ನಲ್ಲಿಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ [೧] ಮುನಿಗಳ ಮನದ ಮೊನೆಯಾದ ಕೊನೆಯಲ್ಲಿಘನಭಕ್ತಿ ಪಾಶದಿ ಸಿಲುಕಲ್ಯಾಕೆಎನ್ನ ಚಿತ್ತ ಚಂಚಲದುಯ್ಯಾಲೆಯಲಿ, ನಿನ್ನಮನ ಬಂದಂತೆ ಓಲ್ಯಾಡಲಾಗದೆ [೨] ಕರ್ಣರಂಧ್ರದಿ ಮನವನು ಪೊಕ್ಕುಪಾಪವ ನಿನ್ನವರಲಿ ತಳವರಸಲ್ಯಾಕೆಎನ್ನೊಳ ಹೊರಗೆ ಪಾಪ ರಾಸಿಗಳಿವೆ, ನಿನ್ನಮನ ಬಂದಂತೆ ಸೊರೆಗೊಳ್ಳೆಲೊ ಕೃಷ್ಣ [೩] toMDanu kaMDuda binnaisuvenupAMDava priya enna tappu kAyayya [pa]…
-
Eccarikeccarike
Composer : Shri Vadirajaru ಎಚ್ಚರಿಕೆಚ್ಚರಿಕೆ [ಪ]ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ [ಅ.ಪ] ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆಧ್ವಜ ವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆವ್ರಜದ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆಸುಜನರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ [೧] ಸುರರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆಸರಸಿಜಾಕ್ಷಿ ಸವಿದೊತ್ತುವ ಪಾದಕ್ಕೆ ಎಚ್ಚರಿಕೆಗರುಡನೇರಿ ಮೆರೆವ ಗಂಭೀರ ಪಾದಕ್ಕೆ ಎಚ್ಚರಿಕೆಉರಗನ ಮೇಲೆ ಓಡ್ಯಾಡಿದ ಪಾದಕ್ಕೆ ಎಚ್ಚರಿಕೆ [೨] ಲಲನೆಯರ ಸ್ತನದಲ್ಲಿ ಕುಣಿದಂಥ ಪಾದಕ್ಕೆ ಎಚ್ಚರಿಕೆಜಲಜಾಸನ ಬಂದು ವಂದಿಪ ಪಾದಕ್ಕೆ ಎಚ್ಚರಿಕೆಶಿಲೆಯ ಸ್ತ್ರೀಯಳ ಮಾಡಿದ…