Purandara dasaru

  • Karunisu narahari

    Composer : Shri Purandara dasaru ಕರುಣಿಸು ನರಹರಿ ಹರಿಗೋವಿಂದನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆಭೂತ ಬಡೆದವನೆಂದು ಕರೆಯುವರೊಚಾತುರ್ಯದಿಂದಲಿ ಮಾತುಗಳಾಡಲುಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ |೧| ಬಲು ಚೆನ್ನಿಗತನವ ತಾನು ಮಾಡಲುಬಲು ಹಮ್ಮಿಗನೆಂದು ಬೈಯುವರೊಸುಲಭದಿಂದಲಿ ನಿಗರ್ವಿಯಾಗಿದ್ದರೆಕಲಿಯುಗದಲಿ ಮಂದಮತಿ ಯೆಂಬುವರಯ್ಯ |೨| ಮಡಿಯೆಂದು ನೇಮವ ಮಾಡುತಲಿದ್ದರೆಮಡಿಯವನೆಂದು ಬೈಯುವರಯ್ಯಮಡಿನೇಮ ಜಪತಪ ಬಿಟ್ಟು ತಿರುಗಲಾಗಿನಡತೆಹೀನನೆಂದು ನಿಂದಿಸುತಿಹರೊ || ನಿಷ್ಠೆಲಿ ಒಪ್ಪತ್ತೂಟವನುಂಡರೆನಿಷ್ಠೆಯತನ ಸುಟ್ಟಿತೆಂಬೋರುಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆಹೊಟ್ಟೆಹೊರಕನೆಂದು ಬೈಯುವರಯ್ಯ |೩| ನರಲೋಕದೊಳಗಿನ್ನು ಪುಟ್ಟಿಸದಿರು , ನಿನ್ನಮೊರೆಯ ಹೊಕ್ಕೆನೊ ಮೋಕ್ಷದಾಯಕನೆಅರವಿಂದನಯನ ಶ್ರೀಪುರಂದರವಿಠಲಕರುಣದಿಂದಲಿ…

  • Simharoopanada Shri Hari

    Composer : Shri Purandara dasaru ಸಿಂಹರೂಪನಾದ ಶ್ರೀ ಹರೇ ಓ ನಾಮಗಿರೀಶನೇ ||ಪ|| ಒಮ್ಮನದಿಂದಲಿ ತನ್ನನು ಭಜಿಪರಸಮ್ಮತಿಯಿಂದಲಿ ಕಾಯ್ವೆನೆಂದ ಹರಿ ||ಅ.ಪ|| ತರಳನು ಕರೆಯೆ ಸ್ಥಂಭವು ಬಿರಿಯೇತುಂಬ ಉಗ್ರವ ತೋರಿದನುಕರುಳನು ಬಗೆದು ಕೊರಳೊಳಗಿಟ್ಟುತರಳನ ಸಲಹಿದ ಶ್ರೀ ನರಸಿಂಹನೆ |೧|| ಭಕ್ತರೆಲ್ಲ ಕೂಡಿ ಬಹು ಆಗಿ ಪಾಡಿಪರಮ ಶಾಂತವನು ಬೇಡಿದರುಕರೆ ತಂದು ಸಿರಿಯ ತೊಡೆಯೊಳು ಕುಳಿಸಲುಪರಮ ಹರುಷವನು ಪೊಂದಿದ ಶ್ರೀ ಹರಿ ||೨|| ಜಯ ಜಯ ಜಯವೆಂದು ಹೂವನು ತಂದುಹರಿ ಹರಿ ಹರಿಯೆಂದು ಸುರರೆಲ್ಲ ಸ್ತುತಿಸೆಭಯ ನಿವಾರಣ…

  • Narasimhanembo devanu

    Composer : Shri Purandara dasaru ನಾರಸಿಂಹನೆಂಬೊ ದೇವನು |ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ| ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲುಬಂದರಲ್ಲಿ ಸನತ್ಕುಮಾರರು |ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | ೧ | ದಿತೀಯ ಗರ್ಭದಲ್ಲಿ ಜನಿಸಿದ | ಹಿರಣ್ಯಾಕ್ಷಹಿರಣ್ಯಕಶಿಪುರೆಂಬ ಭ್ರಾತ್ರರು |ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯುತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಸಿದನು | ೨ | ಅನುಜನಾದ ಹಿರಣ್ಯಾಕ್ಷನ | ಮರಣವನ್ನುಕೇಳಿ ನಡೆದ ತಪಸ್ಸಿಗೆ |ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿಬ್ರಹ್ಮನಿಂದ…

error: Content is protected !!