-
Veera Hanuma bahu
Composer : Shri Purandara dasaru ವೀರ ಹನುಮ ಬಹು ಪರಾಕ್ರಮಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ| ರಾಮದೂತ ನೆನಿಸಿಕೊಂಡೆ ನೀ ,ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ,ಜಾನಕಿಗೆ ಮುದ್ರೆಯಿತ್ತು , ಜಗತಿಗೆಲ್ಲ ಹರುಷವಿತ್ತುಚೂಡಾ-ಮಣಿಯ ರಾಮಗಿತ್ತು ಲೊಕಕೆ ಮುದ್ದೆನಿಸಿ ಮೆರೆವ ||೧|| ಗೋಪಿ-ಸುತನ ಪಾದ ಪೂಜಿಸಿ,ಗದೆಯ ಧರಿಸಿ ಬಕಾಸುರನ ಸಂಹರಿಸಿದೆ,ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು,ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||೨|| ಮಧ್ಯಗೇಹನಲ್ಲಿ ಜನಿಸಿ ನೀ,ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ,ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ…
-
Nambide ninna pada narasimha
Composer : Shri Purandara dasaru ನಂಬಿದೆ ನಿನ್ನ ಪಾದ ನರಸಿಂಹಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ||೧|| ಹಂಬಲಿಸುವೆನು ಬಲು ನರಸಿಂಹಪಾದ ನಂಬಿದವರನು ಕಾಯೋ ನರಸಿಂಹ ||೨|| ತುಂಬುರು ನಾರದಪ್ರಿಯ ನರಸಿಂಹಚೆಲ್ವ ಶಂಬರಾರಿಯ ಪಿತನೆ ನರಸಿಂಹ ||೩|| ಅಂಬರೀಷನ ಕಾಯ್ದೆ ನರಸಿಂಹಜಗದಂಬಾರಮಣನೆ ಸಿರಿ ನರಸಿಂಹ ||೪|| ಬಾಲ ಕರೆದಲ್ಲಿ ಬಂದೆ ನರಸಿಂಹಭಕ್ತಪಾಲಿಪ ದಯಾಳು ಸಿರಿ ನರಸಿಂಹ ||೫|| ಲೀಲೆಯಿಂದ ಹಿರಣ್ಯನ ನರಸಿಂಹಕೊಂದ ಲೋಲ ಸಿರಿಯರಸನೆ ನರಸಿಂಹ ||೬|| ಅಚ್ಯುತಾನಂತ ಗೋವಿಂದ ನರಸಿಂಹಸಿರಿಸಚ್ಚಿದಾನಂದ ಮುಕುಂದ ನರಸಿಂಹ ||೭|| ಕಿಚ್ಚಿನಂದದಿ…
-
Tariso Shrihari namma
Composer : Shri Purandara dasaru ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ||ತಾರಿಸೋ ಭವ ನಿವಾರಿಸೋನಿನ್ನ ಪಾದ ತೋರಿಸೋವೈಕುಂಠವಾಸ ರಂಗಯ್ಯ |ಅ.ಪ| ಪಾಪ ವಿನಾಶವ ಮಾಡುವೆ ನೀತಾಪಸಿಯರನು ಸಲಹುವೆವ್ಯಾಪಿಸಿ ನಿನ್ನ ನೆನೆವರ ಕಾಯ್ವಶ್ರೀಪಾಂಡುರಂಗ ಪರಮಾತ್ಮ ಮುಕುಂದ |೧| ಹಿರಣ್ಯಕಶಿಪುವಿನ ಸೀಳಿದೆ ಅವನಕರುಳ ಕೊರಳೊಳು ಹಾಕಿದೆದುರುಳ ರೂಪದ ದೈತ್ಯನ ಕೊಂದುಕರುಣದಿಂದಲಿ ಕಂದಗೊಲಿದ ಗೋವಿಂದ |೨| ಅಸುವ ಪೂತನಿಯ ಹೀರಿದೆ ನೀಶಶಿಮುಖಿಯಭಿಮಾನ ಕಾಯಿದೆಶಿಶುವಾಗಿ ಬಾಲ ಲೀಲೆ ತೋರಿದೆಕುಸುಮನಾಭ ಶ್ರೀ ಪುರಂದರವಿಠಲ |೩| tArisO SrIhari namma tArisO ||pa||tArisO Bava…
