-
Banda banda mukunda
Composer : Shri Vidyaprasanna Tirtharu ಬಂದಾ ಬಂದಾ ಮುಕುಂದಇಂದಿರೆಯೊಡನೆ ನಿಲಯಕೆ ಬಂದಾ ||ಪ||ಬೃಂದಾವನಾಂಚನನು ಶರದಿಂದುವದನ ಮುನಿವೃಂದ ನುತಚರಿತ ||ಅ.ಪ|| ಭೇರಿ ಗಜ ತುರಗ ಪತಾಕ ತುತ್ತೂರಿ ವರ ಛತ್ರ ಚಾಮರತಾಳ ಮೇಳ ಬಿರುದಾವಳಿ ಸಹಿತದಿಪೌರಬೀದಿಯಲಿ ಮೆರೆಯುತ ಶೌರಿಯು [೧] ಪಾರಿಜಾತ ಸುಜಾತ ಮಲ್ಲಿಕಾಚಾರು ಮಾಲತೀಹಾರ ತುಳಸೀಹಾರವನರ್ಪಿಸಿ ನೀರಜನಾಭನಿಗೆನಾರಿಜನರು ಆರತಿಯನು ಬೆಳಗಿರೆ [೨] ವೇದಘೋಷ ಜಯಘೋಷ ಜನರ ಸಂತೋಷ ಧ್ವನಿಯು ತುಂಬಿತು ಗಗನಯಾದವ ವಂಶ ಪ್ರಸನ್ನನು ಎಮ್ಮವನಾದನಿಂದು ಹಿರಿದಾಯಿತು ಜನುಮವು [೩] baMdA baMdA mukuMdaiMdireyoDane nilayake…
-
Govinda ennalu
Composer : Shri Vidyaprasanna Tirtharu ಗೋವಿಂದ ಗೋವಿಂದ ಗೋವಿಂದನೆನ್ನಲು ||ಪ|| ಏನೆಂದು ಪೇಳಲಿ ಆನಂದವನು ನಾ ||ಅ.ಪ|| ಹಸಿವು ತೋರದೆನಗೆ ತೃಷೆಯು ತೋರದೆನಗೆಹೊಸ ಹೊಸ ಪರಿ ನಾಮ ರಸವ ಸೇವಿಸುತಿರೆ [೧] ದ್ವೇಷವು ತೋರದು ರೋಷವು ತೋರದುಶೇಷಶಯನ ನಿನ್ನ ಹರುಷದಿ ಪೊಗಳಲು [೨] ಭಯವು ತೊಲಗುವುದು ಜಯವು ತೋರುವುದುನಯನಗಳಲಿ ಸುಖ ಜಲವು ಸುರಿಯುವುದು [೩] ಎಂದಿನ ಪುಣ್ಯವೊ ಇಂದರಿತೆನು, ಗೋ-ವಿಂದನಾಮ ಮಕರಂದದ ಸವಿಯನು [೪] ನಿನ್ನ ಸುಕರುಣದ ಚಿನ್ಹೆ ಕಾಣಿಸಿತು, ಪ್ರಸನ್ನನಾಗುವಿಯೆಂದು ಚೆನ್ನಾಗಿ ಅರಿತೆನು [೫]…
-
Muraliya nadava keli
Composer : Shri Vidyaprasanna tirtharu ಮುರಲಿಯ ನಾದವ ಕೇಳಿ ಬನ್ನಿ ||ಪ||ಮುರಲಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಲಿಯನೂದಲುಸುರಿವುದಾನಂದಜಲ ನಯನದಲಿ ||೧|| ಕಂಗೊಳಿಸುವ ಬೆಳದಿಂಗಳ ಸೊಬಗಿಲಿತಂಗಾಳಿಯ ಸುಖದಿ ಶ್ರೀರಂಗನ || ೨|| ಶ್ಯಾಮಲಾಂಗನು ತನ್ನ ಕೋಮಲ ಕರದಲಿಆ ಮುರಲಿಯ ಪಿಡಿಯೆ ಹೃದಯದಲಿಪ್ರೇಮವು ತುಂಬುವುದು ||೩|| ಪಂಚಬಾಣನ ಪಿತ ಮುರಲಿಯ ಮಧುರಸಹಂಚಲೆಮಗೆ ರೋಮಾಂಚವಾಗುವುದು ||೪|| ರಜನೀಕಾಂತನ ಕುಲದಲಿ ಜನಿಸಿವ್ರಜಜನಗಳಿಗಧಿಕ ಪ್ರಸನ್ನನ ||೫|| muraliya nAdava kELi banni ||pa||muraliya nAdava kELi ||a.pa|| madurAnAthanu muraliyanUdalusurivudAnaMdajala nayanadali…
