-
Jo Jo Shri Krishna
Composer : Shri Purandara dasaru ಜೋಜೋ ಶ್ರೀಕೃಷ್ಣ ಪರಮಾನಂದನಂದ ಗೋಪಿಯ ಕಂದ ಬಾಲ ಮುಕುಂದ ಜೋಜೋ ||ಪ|| ಪಾಲ ಸಾಗರಡೊಳು ಪವಡಿಸಿದವನೇಆಲದೆಲೆಯ ಮೇಲೆ ಮಲಗಿದ ಶಿಶುವೇಶ್ರೀಲಲಿತಾಂಗಿಯರ ಚಿತ್ತದೊಲ್ಲಭನೇಬಾಲ ನಿನ್ನನು ಪಾಡಿತೂಗುವೆನಯ್ಯ ಜೋಜೋ |೧| ಹೊಳೆವಂಥ ರನ್ನದ ತೊಟ್ಟಿಲ ಮೇಲೆಥಳಥಳಿಸುವ ಗುಲಗಂಜಿಯ ಮಾಲೆಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿತೂಗುವೆನು ಜೋಜೋ |೨| ಯಾರ ಕಂದ ನೀನು ಯಾರ ನಿಧಾನೀಯಾರ ರತ್ನವೊ ನೀನು ಯಾರ ಮಾಣಿಕವೋಸೇರಿತು ಎನಗೊಂದು ಚಿಂತಾಮಣಿ ಎಂದುಪೋರ ನಿನ್ನನು ಪಾಡಿತೂಗುವೆನಯ್ಯ ಜೋಜೋ |೩|…
-
Neere torele
Composer : Shri Vadirajaru ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿನ ಕೃಷ್ಣನ |ಪ| ಕಾಲಲಂದುಗೆ ಕಡಗ ಕಂಕಣ ಲೋಲ ಉಡುಪಿಗೆ ಬಂದನಬಾಲ ಲೀಲೆಯ ಜಗಕೆ ತೋರಿದ ಗೋಪಾಲ ಉಡುಪಿನ ಕೃಷ್ಣನ |೧| ಕಡೆವ ಕಡೆಗೋಲು ನೇಣು ಸಹಿತಲಿ ಹಡಲಿನೊಳಗಿಂದ ಬಂದನಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿನ ಕೃಷ್ಣನ |೨| ಮುದ್ದು ಮುಖದವ ಮೂರು ಜಡೆಯಲಿ ಇದ್ದ ಉಡುಪಿನ ಸ್ಥಳದಲಿಒದ್ದು ಶಕಟನ ಆದಿಗುರುಗಳ ಮುದ್ದು ಉಡುಪಿನ ಕೃಷ್ಣನ…
