Hari

  • Achyutananta govinda

    Composer : Shri Purandara dasaru ಅಚ್ಯುತಾನಂತ ಗೋವಿಂದನೆಂಬ ವಸ್ತುಎನ್ನ ಕೈ ಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೋಪರವಸ್ತು ಎನ್ನ ಕೈಯ ಸೇರಿತು ||ಅಪ|| ವೆಚ್ಚ ಮಾಡಲಾಗದುಇದು ಮುಚ್ಚಿ ಬಚ್ಚಿಡಲಾಗದುಹೊತ್ತಾರೆದ್ದು ಕೀರ್ತನೆ ಮಾಡುವವಸ್ತು ಎನ್ನ ಕೈ ಸೇರಿತು ||೧|| ಕ್ಷೀರ ಸಾಗರದಮೃತವ ತಂದಕಾಮಧೇನು ಎನ್ನ ಕೈಯ ಸೇರಿತುನೀಲ ವರ್ಣನಾದ ಪಾಲಿಪ ಹೊಸ ದಿವ್ಯನೀಲ ಮಾಣಿಕ್ಯ ಕೈ ಸೇರಿತು ||೨|| ಸುರ ಮುನಿಗಳು ಕೂಡಲು ಇದುಹರಳಿಗೆ ಬೆಲೆಯಾಗದುವರದ ಪುರಂದರ ವಿಠ್ಠಲರಾಯನೆಂಬಒಡವೆ ಎನ್ನ ಕೈಯ ಸೇರಿತು ||೩|| acyutAnaMta gOviMdaneMba…

  • Namatraya neneyiro

    Composer : Shri Vijayadasaru ನಾಮತ್ರಯ ನೆನೆಯಿರೊ [೨],ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||ಪ|| ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ,ದುಶ್ಚರಿತವೆಂಬ ಮಹ ಕಾನನಕ್ಕೆ,ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ,ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು ||೧|| ಅನಂತ ಅನಂತ ಎಂದು ಮನದಲ್ಲಿ ನೆನೆಯೆ,ನಾನಾ ಭವಬಂಧ ದುಷ್ಕರ್ಮದಿ,ಹೀನಾಯವನು ಕಳೆದು ಹಿತದಿಂದಲಿ ವೊಲಿದು,ಆನಂದ ಆನಂದವಾದ ಫಲ ಕೊಡುವುದು ||೨|| ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ,ಗೋವಿಂದ ಕಡೆ ಹಾಕಿ ಸಾಕುವದು,ದೇವೇಶ ಶಿರಪತಿ ವಿಜಯವಿಠ್ಠಲೇಶನಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||೩|| nAmatraya neneyiro [2],kAmakrOdhavu haridu…

  • Siddha nodiro

    Composer : Shri Mahipati dasaru ಸಿದ್ಧ ನೋಡಿರೋ ಸಾಕ್ಷಾತ್ಕಾರವಸಿದ್ಧ ನೋಡಿರೋ [ಪ] ಸಾಧುಕಾ ದಸ್ತ ಪಂಜ ಲೇಣಾಸಾಧುಕೆ ಸಂಗ ಕರನಾ |ಸಾಧ್ಯವಾಗದು ಸದ್ಗುರು ಕರುಣಾ-ನಿಧರಿಯೊ ಜಾಣಾ (೧) ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾಇಹಪರ ಅವಗಾನಂದಾ |ದೇಹ ಭ್ರಾಂತಿಗೆ ಸಿಲುಕದೆಂದಾವಹೀ ಖುದಾಕಾ ಬಂದಾ (೨) ಪಾಕದಿಲ್ಲಾ ಸುಜೀರ ಕರಣಾಯಕೀನ ಸಾಬೀತ ರಾಹಾಣಾ |ಟಾಕ ತ್ಯಾಭವ ಮೀ ತೂ ಪಣಾಐಕ್ಯವಿದು ಭೂಷಣಾ (೩) ನಿಸದಿನ ಕರಿಮಕ ಹೊಯಾರಾವಾಸುದೇವ ಸಾಹಕಾರಾ |ವಿಶ್ವ ವ್ಯಾಪಕಾ ಮಹ್ಣುನಿ ಸ್ಮರಾಲೇಸು ಅವನ ಸಂಸಾರಾ (೪)…

error: Content is protected !!