-
Sarva Vyapti Suladi – Prasannavenkata dasaru
ಸರ್ವವ್ಯಾಪ್ತಿ ಸುಳಾದಿ( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ’ ಹರಿ ಪರತರಃ ’ ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ. ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ಒತ್ತಿ ಹೇಳಿದ್ದಾರೆ. ಈ ಸುಳಾದಿಯು ಶ್ರೀ ಶಬ್ದದಿಂದ ಪ್ರಾರಂಭವಾಗಿದ್ದು , ಪಠಣ-ಪಾರಾಯಣ ಮಾಡುವುದರಿಂದ ಶ್ರೀಕರತ್ವವು ಉಂಟಾಗುವುದೆಂದು ದಾಸರು ಸೂಚಿಸುತ್ತಾರೆ. ) ರಾಗ: ನಾಟಧ್ರುವತಾಳಶ್ರೀವಧುವೆ ನಿನ್ನ ಪೊಂದಿರಲೆಲೈ ದೇವಆವ ಕಾವುದು ಸಿರಿಯೆಗೋವ್ರಜದಬಲೇರ ಮನೆಯ ಪಾಲಿನ ರುಚಿಆವುದಧಿ ಮಿಗಿಲೆಆವಾಗ ಮುನಿಮನಗೇಹದಿಂದ ರಥವಾಜಿಬೋವತನವು ದೊಡ್ಡಿತೆಭಾವಿಸಲಳವಲ್ಲನಂತ ಮಹಿಮ ನಿನ್ನದೇವ ದಾನವರಿಗೊಲಿದೆಕಾವನಜನಕ ಅಗಣಿತ ಗುಣನೆ ಪ್ರಸನ್ನವೆಂಕಟೇಶ ಹರೆ…
-
Hariya Melina Suladi – Prasannavenkata dasaru
( ಈ ಮಹತ್ತರ ಸುಳಾದಿಯಲ್ಲಿ ಹರಿನಾಮದ ಮಹಿಮೆಯನ್ನು ಅನೇಕ ಶಾಸ್ತ್ರ ಪುರಾಣಗಳ ಆಧಾರದಿಂದ ತಿಳಿಸಿದ್ದಾರೆ. ಶ್ರೀ ಹರಿಕಥೆಯೇ ಅಮೃತ. ಈ ಕಥಾಮೃತ ಶ್ರವಣ ಮನನಾದಿಗಳಿಂದ ಶಾಶ್ವತ ಪುಣ್ಯ ದೊರೆಯಲು ಸಾಧ್ಯ. ಎಲ್ಲ ರೋಗಗಳಿಗಿಂತ ದೊಡ್ಡ ರೋಗವು ಭವರೋಗ. ಈ ಭವರೋಗಕ್ಕಿರುವ ಏಕಮೇವ ಔಷಧವು ಶ್ರೀಹರಿಯ ಶುಭನಾಮಸ್ಮರಣೆ. ಶ್ರೀಹರಿಯ ಬಿಂಬಾಪರೋಕ್ಷವೇ ಮನುಷ್ಯನ ಸಾಧನೆಯ ಕೊನೆಯ ಹಂತ ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ದಾಸರಾಯರು. ) ರಾಗ: ಭೌಳಿ ಧ್ರುವತಾಳ ಹರಿ ನಿನ್ನ ಕಥಾಮೃತ ವರ್ಷವುಚಿರಕಾಲದ ಪುಣ್ಯಾಂಕುರಗಳೊರ್ಧಿಯುಹರಿ ನಿನ್ನ ಶುಭನಾಮ…
-
Moola Rama mahima suladi – Prasannavenkata dasaru
( ಈ ಸುಳಾದಿ ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ. ರಘುವಂಶ ಕುಲತಿಲಕನಾದ ಶ್ರೀರಾಮಚಂದ್ರನನ್ನು ಬಣ್ಣಿಸಿದ್ದಾರೆ . ಅಕಳಂಕ – ಅಕಳಂಕ ಎಂದು ಪರಮಾತ್ಮನನ್ನು ನಿರ್ದೋಷಿ , ಗುಣಪೂರ್ಣನೆಂದು ಸ್ತುತಿಸುತ್ತಾ , ಶ್ರೀಮೂಲರಾಮನು ಆನಂದತೀರ್ಥರ ಬಳಿಗೆ ಬಂದ ವಿಚಾರವನ್ನು ಸೂಚಿಸಿದ್ದಾರೆ. ) ರಾಗ ಪೂರ್ವಿಕಲ್ಯಾಣಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನಾದರ ನಿ –ಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ॥…
