Author: Daasa

  • Kaaye Ninna Pada

    Composer : Shri Pranesha dasaru ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿ ಹರಿ ಕಾಯ ನಿವಾಸೇ | ಕಾಯೇ | ಪ | ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ |ಕರ್ದಮಜಾಲಯ | ಭದ್ರ ಶರೀರೆ ||೧|| ಇಂಗಡಲಾತ್ಮಜೆ | ಅಂಗನಾಕುಲ ಮಣಿ |ರಂಗನ ಪದಕಂಜ | ಭೃಂಗೆ ಕರುಣದಿ ||೨|| ಪ್ರಾಣೇಶ ವಿಠಲನ | ಮಾನಿನೀ ಯೆನ್ನಯ |ಹೀನತೆಯೆಣಿಸದೆ | ಪೋಣಿಸಿ ಮತಿಯ ||೩|| kAye ninna pada tOyajakeraguve |mAyadEvi hari kAya…

  • Ramaa samudrana

    Composer : Shri Bagepalli Shesha dasaru ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರ್ಯಾರಮ್ಮ [ಪ] ಉಮೇಶ ಮೊದಲಾದ ಅಮರ ನಿಕರರುಭ್ರಮಿಸಿ ನಿನ್ನ ಪದ ಕಮಲ ಭಜಿಪರು [ಅ.ಪ] ಅಪಾರ ಮಹಿಮನ ವ್ಯಾಪಾರಗಳ ತಿಳಿದುಕಾಪಾಡುವೇ ಜಗವಾಕೋಪ ರಹಿತಳಾಗಿ ಶ್ರೀಪತಿಯೊಳು ನಮ್ಮತಾಪತ್ರಯವ ಪೇಳಿ ಪೋಷಿಸಬೇಕಮ್ಮ [೧] ಕರುಣಾವಾರಿಧಿಯೆಂದು ಶರಣ ಜನರು ನಿನ್ನಸ್ಮರಣೆಯ ಮಾಡುವರೆಹರಿಣಾಕ್ಷಿ ಕೇಳಲೆ ಹರುಷದಿಂದಲಿ ಹರಿಚರಣಾವ ತೋರಿ ಅಘ ಹರಣವ ಮಾಡಿಸೆ [೨] ವಾಸವನುತ ಸಿರಿ ಶೇಷವಿಠ್ಠಲನೊಳುವಾಸವ ಮಾಡುವಳೆಘಾಸೀ ಗೊಳಿಸದಳೆ ಈ ಸಮಯದಿ ಹರಿವಾಸುದೇವಗೆ ಪೇಳಿ ಪೋಷಿಸಬೇಕಮ್ಮ [೩]…

  • Durga Suladi

    Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀದುರ್ಗಾ ಸುಳಾದಿ ಧ್ರುವತಾಳದುರ್ಗಾ ದುರ್ಗೆಯೆ ಮಹಾ ದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರುಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು ಸುಂದರೀದುರ್ಗಣದವರ ಬಾಧೆ ಬಹಳವಾಗಿದೆ ತಾಯಿದುರ್ಗತಿಹರೆ ನಾನು ಪೇಳುವದೇನುದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆನಿರ್ಗಮನ ನಾ ಕಾಣೆನಮ್ಮ ಮಂಗಳಾಂಗೆದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು –ದುರ್ಗೆ ದುರ್ಜಯೆ ದುರ್ಧಷೆ ಶಕ್ತಿದುರ್ಗ ಕಾನನ ಗಹನ ಪರ್ವತ ಘೋರ ಸರ್ಪಗರ್ಗರ ಶಬ್ದ…

error: Content is protected !!