-
Mahatige Mahatu
Composer : Shri Prasannavenkata dasaru ರಾಗ: ಶಿವರಂಜಿನಿ, ಖಂಡಛಾಪುತಾಳ ಮಹತಿಗೆ ಮಹತು ಶ್ರೀಹರಿಯ ನಾಮ |ಬಹು ಭಾಗ್ಯವಂತರಿಗೆ ದೊರೆವುದೀ ನಾಮ || ಪ || ಹಿಂದೊದಗಿದಘರಾಶಿ ಬೀಸಿ ಬಿಸುಟುವ ನಾಮ |ಮುಂದೆ ಬಹ ದುರಿತಕಡ್ಡಾದ ನಾಮ ||ಮಂದಮತಿ ಕತ್ತಲೆಗೆ ಬಾಲಾರ್ಕ ಸಮ ನಾಮ |ದಂದುಗದ ಬಳ್ಳಿಯನು ಕಡಿವ ನಾಮ || ೧ || ಮುಕುತಿ ನಗರವ ತುಂಬಿಸುವ ಅಭಯಕರ ನಾಮ |ಶಕುತರ ಮಾಲಿಕೆಗೆ ಅಭಯದ ನಾಮ ||ಅಕಳಂಕ ದಾಸರಿಗೆ ಆದ್ಯಂತಗತ ನಾಮ |ಭಕುತರೆಡರಿನ ಗಿರಿಗೆ ವಜ್ರ…
-
Upadeshada Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಉಪದೇಶದ ಸುಳಾದಿ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.) ರಾಗ: ಪಂತುವರಾಳಿ , ಧ್ರುವತಾಳ ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವಸಿರಿ ಸಂಪದದೆ ಸೌಖ್ಯದ ಲಂಪಟವಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದಅರಸುತನದ ಸೌಭಾಗ್ಯದ ಬಯಕೆಯಕರುಣಾಂಬುಧಿ ತನ್ನ ಶರಣ ಜನರ ಭವ –ಭಾರಕನೆಂಬೊ ಬಲು ಬಿರುದು ರಕ್ಷಕನಾಗಿಅರಿಭಯದ…
-
Harisarvottamatva Suladi – Prasannavenkata dasaru
ಶ್ರೀ ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಹರಿಸರ್ವೋತ್ತಮತ್ವ ಸುಳಾದಿ( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು. ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ ವಿಶದೀಕರಿಸಿದ್ದಾರೆ. )ರಾಗ: ಹಿಂದೋಳಧ್ರುವತಾಳಹರಿಸರ್ವೋತ್ತಮ ಹರಿಪರಬ್ರಹ್ಮಹರಿಸಮರಾರಿಲ್ಲ ಹಿರಿಯರುಂಟೆಲ್ಲಿಹರಿ ಪಟ್ಟಗಟ್ಟಿದಮರರು ವಂದಿತರುಹರಿಯನಾದರಿದಸುರರು ನಿಂದಿತರುಹರಿಯೊಲಿದಿರುವರ್ಭಕರೆ ಕೀರ್ತಿಯುತರುಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರುಹರಿಯವೇನ ನಾಮವು ಅರೂಪ ಗುಣದೂರ ಶ್ರೀ –ಹರಿ…
