Author: Daasa

  • Nitya Sarasi teeravasa

    Composer : Shri Gurugopala dasaru ನಿತ್ಯ ಸರಸಿತೀರವಾಸಾ ಪುರುಷೋತ್ತುಮ ವರಹಾ ಸರ್ವೇಶಾ |ಸತ್ಯ ಸಂಕಲ್ಪನೆ ದೈತ್ಯ ಸನ್ನುತ ಪಾದಾ |ಭೃತ್ಯಜನರ ಪಾಲಾ | ನಿತ್ಯಾನಂದ ಫಲದಾ || ಪ || ಚಿತ್ರ ವಿಚಿತ್ರ ಚಾರಿತ್ರ ಪುಣ್ಯಗಾತ್ರ ಸಂತರ ನಿಜಮಿತ್ರಾ |ಸೂತ್ರವಂದಿತನೆ ವಿಧಾತೃ ನಾಸಿಕ ಜಾತ |ಪಾತ್ರಿಯೆ ಶ್ರೀಮುಷ್ಣ ಕ್ಷೇತ್ರ ಮಂದಿರ ಕೋಲಾ |ರಾತ್ರಿ ಸಂಚರ ಕುಲಪ-ಕಾಂಚನ |ನೇತ್ರಖಳಮದವಿಪಿನ ವೀತಿ ಹೋತ್ರ ಉಧೃತ |ಧಾತ್ರಿ ತ್ರಿನೇತ್ರ ಕೃತ ಸ್ತೋತ್ರ ಪಾತ್ರ || ೧ || ಗುಣತ್ರಯ ರಹಿತ…

  • Hariye enagaru gatiyo

    Composer : Shri Prasannavenkata dasaru ಹರಿಯೇ ಎನಗಾರು ಗತಿಯೊ ನೀನಲ್ಲದೆ [ಪ] ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆಒಂದುಗೂಡಿದವು ಅಘ ಮುಂದಿನರುಹಿಲ್ಲಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುನಿಗಡಕಾಮನ ತಡೆ ತಗಲು ಬಿತ್ತೊ ರಂಗಾ [೧] ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿಅಜ್ಞಾನೆಂಬಹಿ ಕಚ್ಚಿ ಯಜ್ಞೇಶನಿನ್ನಂಘ್ರಿ ಸಂಜ್ಞವಿಲ್ಲದೆ ದು:ಖಮಗ್ನನಾದೆನಲ್ಲೊ [೨] ಶ್ರೀ ಪ್ರಸನ್ವೆಂಕಟೇಶ ತಾಪತ್ರಯ ವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ [೩] hariyE enagAru gatiyo nInallade [pa] hiMdinApattu marete…

  • Anjaletake manave

    Composer : Shri Purandara dasaru ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ|| ನಾರಾಯಣವೆಂಬೊ ನಾಲ್ಕು ಅಕ್ಷರದಿಂದಘೋರ ದುರಿತಗಳೆಲ್ಲ ಕಳೆಯಬಹುದುಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು [೧] ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದಬೇಕಾದ ಕರ್ಮಗಳ ಕಳೆಯಬಹುದುವೈಕುಂಠಪತಿಯೆಂಬ ವಜ್ರವನೆ ತಕ್ಕೊಂಡುನೂಕುವ ಯಮಭಟರ ನುಗ್ಗು ಮಾಡಲುಬಹುದು [೨] ಹರಿವಾಸುದೇವನೆಂಬೊ ಅಮೃತಪಾನಗಳಿಂದಜರೆಮರಣ ಜನನಗಳ ಜಯಿಸಬಹುದುವರದ ಶ್ರೀ ಪುರಂದರ ವಿಠ್ಠಲನ ಸ್ಮರಣೆಯನುಸರಸ ಸದ್ಭಕ್ತಿಯಿಂ ಸವಿಮಾಡಬಹುದು [೩] aMjalEtake manave anugAlavukaMjanABana Bakti kaigoMDa baLika ||pa|| nArAyaNaveMbo nAlku akSharadiMdaGOra duritagaLella kaLeyabahuduSrIrAmanAmaveMbo…

error: Content is protected !!