-
Indira Ramana
Composer: Shri Purandara dasaru ಇಂದಿರಾರಮಣ ಗೋವಿಂದ ನಿನ್ನಯ ಪಾದ-ದ್ವಂದ್ವವೆನಗೆ ಸಾಕೆಲೊ ||ಪ||ಅಂದು ಬ್ರಹ್ಮಾಂಡವ ಸೀಳಿದಂಥ ಪಾದಎಂದೆಂದು ಭಕುತರು ಲಾಲಿಸುವ ನಿನ್ನ ||ಅ|| ನಾರಾಯಣ ನಿನ್ನ ನಾಮವು ಅಜಮಿಳನಘೋರಪಾಪವ ಅಟ್ಟಿತೊಸಾರಿ ನಿನ್ನನು ಭಜಿಪ ಚಾರು ಭಕ್ತರಿಗೆಕೋರಿದ ವರಗಳ ನೀಡುವ ದಾತನೆ |೧| ಮುನಿಗಳು ತಮ್ಮ ತಮ್ಮ ಮನವನೆ ನಿಲ್ಲಿಸಿಘನತರ ಮಹಿಮ ನಿನ್ನನೆನೆವುತ್ತಿರಲು ಅವರ ಕಾವಲಾಗಿರುತಿದ್ದೆಅನಾಥರಕ್ಷಕ ಕಾರುಣ್ಯಮೂರುತಿ |೨| ಒಂದೆ ಮೂರುತಿಯಾಗಿ ಎಂದು ಇರುವನಾಗಿಪೊಂದಿದೆ ಅನಂತ ರೂಪವೆಲ್ಲಒಂದು ಅರಿಯದ ಎನ್ನ ಕಾಯಬೇಕೋ ಅಣ್ಣತಂದೆ ಪುರಂದರ ವಿಠಲ ರಾಯನೆ |೩|…
-
Higguve yetako
Composer: Shri Purandara dasaru ಹಿಗ್ಗುವೆ ಏತಕೋ, ಈ ದೇಹಕ್ಕೆಹಿಗ್ಗುವೆ ಯಾಕೋ ||ಪ||ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ|| ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧|| ಆಗಭೋಗಗಳನ್ನು ಆಗುಮಾಡುತಲಿದ್ದುರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨|| ಪರರ ಸೇವೆಯ ಮಾಡಿ ನರಕ ಭಾಜನನಾಗಿಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩|| ಸೋರುವುದೊಂಭತ್ತು ದ್ವಾರದಿಂದಲಿ ಮಲನೀರಿಲ್ಲದಿದ್ದರೆ ನಾರುವ ದೇಹಕ್ಕೆ ||೪|| ಪುರಂದರ ವಿಠಲನ ಚರಣ ಕಮಲಕ್ಕೆಎರಗದೆ ಇರುತಿಹ ಗರುವದ…
-
Hari Hari yennalikke
Composer: Shri Purandara dasaru ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ,ನರ ಜನ್ಮ ವ್ಯರ್ಥವಾಗಿ ಹೋಗುತದಲ್ಲ |ಪ| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,ನಿರುತ ಯಾತ್ರೆಯಲಿ ಶಾಕದ ಚಿಂತೆ,ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,ಪುರಾಣ ಕೇಳ್ವಾಗ ಗೃಹದ ಚಿಂತೆ ||೧|| ಕರ್ಮದಿ ಒಂದು ಚಿಂತೆ,ಧರ್ಮದಿ ಒಂದು ಚಿಂತೆ,ಪೇರ್ಮನೆ ಮಾಡಲು ಬಲು ಚಿಂತೆ,ವರ್ಮ ವೈರದಿ ಚಿಂತೆ,ಈರ್ಮನಸಾಗೆ ಚಿಂತೆ,ದುರ್ಮದದಿ ನಡೆಯೇ ಪ್ರಾಣದ ಚಿಂತೆ ||೨|| ಗಂಗೆಯಲ್ಲಿ ಮುಳುಗುವಾಗಚೊಂಬು ಮೇಲಿನ ಚಿಂತೆ,ಸಂಗಡದವರು ಹೋಗುವ ಚಿಂತೆ,ತಂದೆ ಶ್ರೀಪುರಂದರ ವಿಠ್ಠಲ ರಾಯನಹಿಂಗದೆ ಭಜಿಸಲು ಚಿಂತೆ ನಿಸ್ಚಿಂತೆ ||೩||…
