From the Critical edition of Shri Kesava Rao Tadipatri
ಪ್ರತಿಮೆ- ಸಾಲ — ಗ್ರಾಮ- ಗೋಽಭ್ಯಾ- |
ಗತ ಅ-ತಿಥಿ ಶ್ರೀ — ತುಳಸಿ- ಪಿಪ್ಪಲ |
ಯತಿ ವ-ನಸ್ಥ ಗೃ — ಹಸ್ಥ- ವಟು ಯಜ — ಮಾನ- ಸ್ವಪರಜ-ನ ||
ಪೃಥಿವಿ- ಜಲ ಶಿಖಿ — ಪವನ- ತಾರಾ- |
ಪಥ ನ-ವಗ್ರಹ — ಯೋಗ- ಕರಣ ಭ |
ತಿಥಿ ಸಿ-ತಾಸಿತ — ಪಕ್ಷ- ಸಂಕ್ರಮ — ಅವನ-ಧಿಷ್ಠಾ-ನ || ೫-೩ ||
ವಾರಿ-ಯೊಳಗಿ — ಪ್ಪತ್ತು- ನಾಲಕು |
ಮೂರೆ-ರಡು ಸಾ — ವಿರದ- ಮೇಲ್ಮು- |
ನ್ನೂರು- ಹದಿನೇ — ಳೆನಿಪ- ರೂಪವು — ಶ್ರೀತು-ಳಸಿ ದಳ-ದಿ ||
ನೂರ- ಅರವ — ತ್ತೊಂದು- ಪುಷ್ಪದಿ |
ಮೂರ-ಧಿಕ ದಶ — ದೀಪ-ದೊಳು ನಾ- |
ನೂರು-ಮೂರು ಸು — ಮೂರ್ತಿ-ಗಳು ಗಂ — ಧದೊಳ-ಗಿರುತಿಹ-ವು || ೫-೮ ||
ಪಾಪ- ಕರ್ಮವು — ಪಾದು-ಕೆಗಳನು- |
ಲೇಪ-ನವು ಸ — ತ್ಪುಣ್ಯ- ಶಾಸ್ತ್ರಾ- |
ಲಾಪ-ನವೆ ಶ್ರೀ — ತುಳಸಿ- ಸುಮನೋ — ವೃತ್ತಿ-ಗಳೆ ಸುಮ-ನ ||
ಕೋಪ- ಧೂಪವು — ಭಕ್ತಿ- ಭೂಷಣ |
ವ್ಯಾಪಿ-ಸಿದ ಸ — ದ್ಬುದ್ಧಿ- ಛತ್ರವು |
ದೀಪ-ವೇ ಸು — ಜ್ಞಾನ- ಆರಾ — ರ್ತಿಗಳೆ- ಗುಣಕಥ-ನ || ೫-೧೫ ||
ಸ್ಥಳ ಜ-ಲಾದ್ರಿಗ — ಳಲ್ಲಿ- ಜನಿಸುವ |
ಫಲ ಸು- ಪುಷ್ಪಜ — ಗಂಧ-ರಸ ಶ್ರೀ- |
ತುಳಸಿ- ಮೊದಲಾ — ದಖಿಲ- ಪೂಜಾ — ಸಾಧ-ನ ಪದಾ-ರ್ಥ ||
ಹಲವು- ಬಗೆಯಿಂ — ದರ್ಪಿ-ಸುತ ಬಾಂ- |
ಬೊಳೆಯ- ಜನಕಗೆ — ನಿತ್ಯ- ನಿತ್ಯದಿ- |
ತಿಳಿವು-ದಿದು ವ್ಯತಿ — ರೇಕ- ಪೂಜೆಗ — ಳೆಂದು- ಕೋವಿದ-ರು || ೧೧-೨೪ ||
ಕೃತಪ್ರ-ತೀಕದಿ — ಟಂಕಿ- ಭಾರ್ಗವ |
ಹುತವ-ಹಾನಿಲ — ಮುಖ್ಯ- ದಿವಿಜರು |
ತುತಿಸಿ-ಕೊಳುತಭಿ — ಮಾನಿ-ಗಳು ತಾ — ವಾಗಿ- ನೆಲೆಸಿ-ದ್ದು ||
ಪ್ರತಿ ದಿ-ವಸ ಶ್ರೀ — ತುಳಸಿ- ಗಂಧಾ- |
ಕ್ಷತೆ ಕು-ಸುಮ ಫಲ — ದೀಪ- ಪಂಚಾ- |
ಮೃತದಿ- ಪೂಜಿಪ — ಭಕ್ತ-ರಿಗೆ ಕೊಡು — ತಿಹರು- ಪುರುಷಾ-ರ್ಥ || ೧೧-೩೦ ||
ಹಲವು- ಕರ್ಮವ — ಮಾಡಿ- ದೇಹವ |
ಬಳಲಿ-ಸದೆ ದಿನ — ದಿನದಿ- ಹೃದಯಾ- |
ಮಲಸ-ದನದಿ ವಿ — ರಾಜಿ-ಸುವ ಹರಿ — ಮೂರ್ತಿ-ಯನೆ ಭಜಿ-ಸು ||
ತಿಳಿಯ-ದೀ ಪೂ — ಜಾ ಪ್ರ-ಕರಣವ |
ಫಲ ಸು-ಪುಷ್ಪಾ — ಗ್ರ್ಯೋದ-ಕ ಶ್ರೀ- |
ತುಳಸಿ-ಗಳನ — ರ್ಪಿಸಲು- ಒಪ್ಪನು — ವಾಸು-ದೇವ ಸ-ದಾ || ೧೩-೨೧ ||
ಮಂದ-ನಾದರು — ಸರಿಯೆ- ಗೋಪೀ- |
ಚಂದ-ನ ಶ್ರೀ — ಮುದ್ರೆ-ಗಳ ನಲ- |
ವಿಂದ- ಧರಿಸುತ — ಶ್ರೀತು-ಳಸಿ ಪ — ದ್ಮಾಕ್ಷ- ಸರಗಳ-ನು ||
ಕಂಧ-ರದ ಮ — ಧ್ಯದಲಿ- ಧರಿಸಿ ಮು- |
ಕುಂದ- ಶ್ರೀಭೂ — ರಮಣ- ತ್ರಿಜಗ- |
ದ್ವಂದ್ಯ- ಸರ್ವ — ಸ್ವಾಮಿ- ಮಮ ಕುಲ — ದೈವ-ವೆನೆ ಪೊರೆ-ವ || ೧೬-೨೦ ||
ಆರು- ಜನಗಳಿ — ಗಿಂತ-ಲಾಹಂ- |
ಕಾರಿ-ಕ ಪ್ರಾ — ಣೊತ್ತ-ಮಖಿಳ ಶ- |
ರೀರ-ಮಾನಿ — ಪ್ರಾಣ-ಗಿಂತಲಿ — ಕಾಮ- ಇಂದ್ರರಿ-ಗೆ ||
ಗೌರಿ- ವಾರುಣಿ — ಖಗಪ- ರಾಣಿಗೆ |
ಶೌರಿ- ಮಹಿಷಿಯ — ರೊಳಗೆ- ಜಾಂಬವ- |
ತೀ ರ-ಮಾಯುತ — ಳಾದ- ಕಾರಣ — ಅಧಿಕ-ಳೆನಿಸುವ-ಳು || ೨೫-೧೦ ||
ವಿಷ್ಣು- ಸರ್ವೋ — ತ್ತಮನು- ಪ್ರಕೃತಿ ಕ- |
ನಿಷ್ಠ-ಳೆನಿಪಳ — ನಂತ- ಗುಣ ಪರ- |
ಮೇಷ್ಠಿ- ಪವನರು — ಕಡಿಮೆ- ವಾಣೀ — ಭಾರ-ತಿಗಳಧ-ಮ ||
ವಿಷ್ಣು-ವಹನ ಫ — ಣೀಂದ್ರ- ಮೃಡರಿಗೆ |
ಕೃಷ್ಣ-ಮಹಿಷಿಯ — ರಧಮ-ರಿವರೊಳು |
ಶ್ರೇಷ್ಠ-ಳೆನಿಪಳು — ಜಾಂಬ-ವತಿಯಾ — ವೇಶ- ಬಲದಿಂ-ದ || ೨೯-೧ ||
ಕಂಬು-ಪಾಣಿಯ — ಪರಮ- ಪ್ರೇಮ ನಿ- |
ತಂಬಿ-ನಿಯರೆಂ — ದೆನಿಪ- ಲಕ್ಷಣೆ |
ಜಾಂಬ-ವತಿ ಕಾ — ಳಿಂದಿ- ನೀಲಾ — ಭದ್ರ- ಸಖವಿಂ-ದ ||
ಎಂಬ- ಷಣ್ಮಹಿ — ಷಿಯರ- ದಿವ್ಯ ಪ- |
ದಾಂಬು-ಜಗಳಿಗೆ — ನಮಿಪೆ- ಮಮ ಹೃದ- |
ಯಾಂಬ-ರದಿ ನೆಲ — ಸಲಿ ಬಿ-ಡದೆ ತ — ಮ್ಮರಸ-ನೊಡಗೂ-ಡಿ || ೩೨-೧೪ ||
ನೇಮ-ದಿಂದ — ಶ್ವತ್ಥ- ತುಳಸೀ |
ಸೋಮ-ಧರನಲಿ — ವಿಮಲ- ಸಾಲ |
ಗ್ರಾಮ-ಗಳನಿ — ಟ್ಟಭಿನ-ಮಿಪ ನರ — ಮುಕ್ತಿ-ಯೋಗ್ಯ ಸ-ದಾ ||
ಭೂಮಿ-ಯೊಳು ಧ — ರ್ಮಾರ್ಥ- ಮುಕ್ತಿ ಸು- |
ಕಾಮ-ಪೇಕ್ಷೆಗ — ಳಿಂದ- ಸಾಲ- |
ಗ್ರಾಮ-ಗಳ ವ್ಯತಿ — ರಿಕ್ತ- ವಂದಿಸೆ — ದುಃಖ- ವೈದುವ-ನು || ೩೦-೬ ||
ಶೈವ- ಶೂದ್ರ ಕ — ರಾರ್ಚಿ-ತ ಮಹಾ |
ದೇವ- ವಾಯು ಹ — ರಿ ಪ್ರ-ತಿಮೆ ವೃಂ- |
ದಾವ-ನದಿ ಮಾ — ಸದ್ವ-ಯದೊಳಿಹ — ತುಳಸಿ- ಅಪ್ರಸ-ವ ||
ಗೋ ವಿ-ವಾಹ ವಿ — ವರ್ಜಿ-ತಾಶ್ವ |
ತ್ಥಾ ವಿ-ಟಪಿಗಳ — ಭಕ್ತಿ- ಪೂರ್ವಕ |
ಸೇವಿ-ಸುವ ನರ — ನಿತ್ಯ- ಶಾಶ್ವತ — ದುಃಖ-ವೈದುವ-ನು || ೩೦-೮ ||
