Eegalo Inyavagalo

Tulasi Sankeertane – Composer : Shri Vadirajaru

ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು || ಪ ||
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನ ನಯನ || ಅಪ||

ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಬಂದು,
ಅಂಬುಜಾಕ್ಷ ನೊಂದೆನಯ್ಯ ಅಂದಂದು ಮಾಡಿದ ಅಘದಿ,
ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು,
ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯ ಕಥನ || ೧ ||

ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು,
ವಾದಿಸುವೆ ವೇದ ಶಾಸ್ತ್ರ ಉಪನ್ಯಾಸಂಗಳ ಮಾಳ್ಪೆನು,
ಕ್ರೋಧ ರಹಿತನಾಗಿ ಅವರು ಕೊಡಲು ಕೊಂಡಾಡುವೆ,
ಆದರಿಸದಿದ್ದರವರ ಬೈದು ಬಹೆನು ಖಿನ್ನನಾಗಿ || ೨ ||

ದೇಶ ದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ,
ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ,
ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ,
ಶ್ರೀನಿವಾಸ ನಿನ್ನ ಪೂಜಿಸದೆ ಮೋಸ ಹೋದೆನಯ್ಯ ನಾನು || ೩ ||

ಸ್ನಾನ ಮೌನಂಗಳನು ಮಾಡುವೆ ಸಕಲ ಜನರ ಮುಂದೆ,
ಮಾನವರು ಇಲ್ಲದಾಗಲೇ ಮೌನವಿಲ್ಲ ಮಂತ್ರವಿಲ್ಲ,
ಜ್ಞಾನವ ಪೇಳುವೆ ಮೋಸ ಕಟ್ಟಲೆಯ ಮಾಡಿಕೊಂಡು,
ಧ್ಯಾನಿಸದೆ ಹೊಟ್ಟೆಯನ್ನು ಪೊರೆವೆ ನಾ ನಿನ್ನ ಮರೆವೆ || ೪ ||

ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು,
ಎನ್ನದೆಂಬೊ ಮಮತೆ ತಗ್ಗದು ಧನ್ಯ ಜನಕೆ ಶಿರವು ಬಗ್ಗದು,
ನಿನ್ನ ಕಥೆಯ ಕರಣ ಕೇಳದು ಅನ್ಯ ವಾರ್ತೆಗೆ ಹೊತ್ತು ಸಾಲದು,
ಇನ್ನು ಹೇಸಿಗೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು || ೫ ||

ಅಂಬುವರ ನಾನರಿಯೆ ಕುಟುಂಬಿಗಳ ಸಲಹೋಗೋಸ್ಕರ,
ತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವ,
ಹಂಬಲಿಸಿ ವಿಷಯಂಗಳಿಗೆ ಡಂಭನಾಗಿ ಕೆಟ್ಟು ವೃಥಾ,
ಕುಂಭಿನಿಗೆ ಭಾರವಾದೆನು ಕಂಬು ಕಂಧರ ನಿನ್ನ ನೆನೆಯದೆ || ೬ ||

ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣು ಕಾಣದು,
ಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನ,
ತಿದ್ದಿ ಮನವ ನಿನ್ನ ಪಾದ ಪದ್ಮವ ನೆನೆವಂತೆ ಮಾಡೊ,
ಪೊದ್ದಿದವರ ಪೊರೆವ ಕರುಣಾಬ್ಧಿ ನೀನೆ ಎನಗೆ ಬಂಧೋ || ೭ ||


IgalO inyAvAgalO I tanuvu pOgadiradu || pa ||
BOgadAseya biDisayya nAgaSayana naLina nayana || apa||

eMbattunAlku lakSha yOnigaLali baMdu baMdu,
aMbujAkSha noMdenayya aMdaMdu mADida aGadi,
kuMBIpAka modalAda kutsita narakadi biddu,
uMba duHKava biDisayya udadhiSayana puNya kathana || 1 ||

Odi maruLAdenayya Odana mAtrakke saBeyoLu,
vAdisuve vEda SAstra upanyAsaMgaLa mALpenu,
krOdha rahitanAgi avaru koDalu koMDADuve,
Adarisadiddaravara baidu bahenu KinnanAgi || 2 ||

dESa dESaMgaLige dhanada AsegAgi pOgi pOgi,
byAsarade kaMDavara kADi bEDi baLalide,
kAsina lABavu kANe GAsiyAdenayya,
SrInivAsa ninna pUjisade mOsa hOdenayya nAnu || 3 ||

snAna maunaMgaLanu mADuve sakala janara muMde,
mAnavaru illadAgalE maunavilla maMtravilla,
j~jAnava pELuve mOsa kaTTaleya mADikoMDu,
dhyAnisade hoTTeyannu poreve nA ninna mareve || 4 ||

heNNu honninAse biDadu puNyakke mana oDaMbaDadu,
ennadeMbo mamate taggadu dhanya janake Siravu baggadu,
ninna katheya karaNa kELadu anya vArtege hottu sAladu,
innu hEsige manake bAradu muMdina gatige dAri tOradu || 5 ||

aMbuvara nAnariye kuTuMbigaLa salahOgOskara,
tiMbe hInara maneyoLannava naMbe ninna caraNava,
haMbalisi viShayaMgaLige DaMBanAgi keTTu vRuthA,
kuMBinige BAravAdenu kaMbu kaMdhara ninna neneyade || 6 ||

vRuddhanAdenu palgaLella biddavu kaNNu kANadu,
eddu nillalArenayya uddhariso hayavadana,
tiddi manava ninna pAda padmava nenevaMte mADo,
poddidavara poreva karuNAbdhi nIne enage baMdhO || 7 ||

You might also like

error: Content is protected !!