-
Eegalo Inyavagalo
Tulasi Sankeertane – Composer : Shri Vadirajaru ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು || ಪ ||ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನ ನಯನ || ಅಪ|| ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಬಂದು,ಅಂಬುಜಾಕ್ಷ ನೊಂದೆನಯ್ಯ ಅಂದಂದು ಮಾಡಿದ ಅಘದಿ,ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು,ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯ ಕಥನ || ೧ || ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು,ವಾದಿಸುವೆ ವೇದ ಶಾಸ್ತ್ರ ಉಪನ್ಯಾಸಂಗಳ ಮಾಳ್ಪೆನು,ಕ್ರೋಧ ರಹಿತನಾಗಿ ಅವರು ಕೊಡಲು ಕೊಂಡಾಡುವೆ,ಆದರಿಸದಿದ್ದರವರ…
